Land illegality in Devanahalli!
ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ತಾಲೂಕಿನ ಬೈಚಾಪುರ ಪ್ರಸನ್ನಹಳ್ಳಿ ಹಾಗೂ ಸಣ್ಣೆ ಅವಾನಿಕೆರೆ ಭೂ ಹಿಡುವಳಿ ಜಮೀನು ಹೊಂದಿರುವ 15ಕ್ಕೂ ಹೆಚ್ಚು ರೈತರ ಜಮೀನುಗಳಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳ ಮೂಲಕ ಖಾತೆಗಳು ಬದಲಾವಣೆಯಾಗಿರುವ ಪ್ರಕರಣ ಸಂಚಲನ ಮೂಡಿಸಿದ್ದು ದೇವನಹಳ್ಳಿಯಲ್ಲಿ ಭೂ ಅಕ್ರಮಗಳು ಬೆಳಕಿಗೆ ಬರುತ್ತಿವೆ.
ಹಲವು ಸರ್ವೆನಂಬರ್‌ಗಳ ಪಹಣಿಯಲ್ಲಿ ಖಾತೆದಾರರ ರೈತರ ಹೆಸರನ್ನು ಉಪವಿಭಾಧಿಕಾರಿ ಕಚೇರಿಯಿಂದ ಬದಲಾಯಿಸುವ ನಕಲಿ ಆದೇಶಗಳು ಹೊರಬಿದ್ದಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಎರಡು ತಿಂಗಳಲ್ಲಿ ಸ್ವಾಧೀನಾನುಭವದ ರೈತರ ಹೆಸರಿನ ಪಹಣಿ ಹಾಗೂ ಖಾತೆಗಳು ಏಕಾಏಕಿ ಬದಲಾಗಿರುವುದನ್ನು ಕಂಡು ರೈತರು ಬೆಚ್ಚಿ ಬಿದ್ದಿದ್ದಾರೆ, ರಾಜ್ಯ ರೈತ ಸಂ ಹಸಿರುಸೇನೆಯ ಯುವ ಟಕದ ಅಧ್ಯಕ್ಷ ಡಾ.ಬಿ.ಕೆ. ವಿನೋದಕುವಾರಗೌಡ ಮತ್ತಿತರರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಎಸಿ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆ.
ಪ್ರಕರಣ ಬಯಲಿಗೆ ಬಂದ ದಿನವೇ ವರ್ಗಾವಣೆಗೊಂಡ ಉಪವಿಭಾಗಾಧಿಕಾರಿ ದುರ್ಗಾಶ್ರೀ ಈ ಬಗ್ಗೆ ಎಚ್ಚೆತ್ತುಕೊಂಡು ಇದನ್ನು ನಾನು ವಾಡಿಲ್ಲ, ದೊಡ್ಡಬಳ್ಳಾಪುರದಲ್ಲಿ ಉಪವಿಭಾಗಧಿಕಾರಿಯಾಗಿದ್ದಾಗ ಹೈಕೋರ್ಟ್ ಮತ್ತು ಕರ್ನಾಟಕ ಮೇಲ್ಮನವಿ ಪ್ರಾಧಿಕಾರ (ಕೆಎಟಿ) ಹೆಸರಿನಲ್ಲಿ ನಕಲಿ ಆದೇಶ ಸೃಷ್ಟಿಸಿ ತಾಲೂಕಿನ ಹಲವು ಪಹಣಿಯಲ್ಲಿ ಖಾತೆ ಬದಲಾಯಿಸಿದ್ದಾರೆ ಈಗಾಗಲೇ ದೊಡ್ಡಬಳ್ಳಾಪುರ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ವಿಚಾರ ತಿಳಿದ ಭೂ ವಚನೆಗೊಳಗಾದ ರೈತರು ತಹಸೀಲ್ದಾರ್ ಕೊಠಡಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ಆದೇಶದಂತೆ ಊಳುವವನೇ ಭೂ ಒಡೆಯ (ಎಲ್‌ಆರ್‌ಎಫ್ ಗೇಣಿ) ಅಡಿ ಖಾತೆ ಬದಲಾವಣೆ ವಾಡಲಾಗಿದೆ. ಖಾತೆದಾರರಿಗೆ ನೋಟಿಸ್ ಜಾರಿ ವಾಡಿಯೇ ಖಾತೆ ಬದಲಾಗಿದೆ ಎಂದು ದಾಖಲೆಗಳು ಹೇಳುತ್ತಿವೆ ಎಂದು ದೇವನಹಳ್ಳಿ ತಹಸೀಲ್ದಾರ್ ಎಂ.ಅನಿಲ್ ಸಮಜಾಯಿಷಿ ನೀಡಿದ್ದಾರೆ. ಜತೆಗೆ ಇದನ್ನು ಪರಿಶೀಲಿಸಿ ನೈಜತೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ವಾಡುವುದಾಗಿ ಹೇಳಿ ಜಾರಿಕೊಂಡಿದ್ದಾರೆ ಎಂಬುದು ರೈತರ ಆರೋಪವಾಗಿದೆ.
ದೆಹಲಿ ಮೂಲಕ ಕಂಪನಿಯೊಂದಕ್ಕೆ ಇಲ್ಲಿನ ಲವತ್ತಾದ ಭೂಮಿಯನ್ನು ಒದಗಿಸಿಕೊಡಲು ಭೂ ಮಾಫಿಯಾದವರು ಸಂಚು ರೂಪಿಸಿದ್ದಾರೆ. ಇಲ್ಲಿನ ಭೂಮಿಯನ್ನು ಮಾರಾಟ ಮಾಡುವಂತೆ ರೈತರಿಗೆ ಹಲವು ಬಾರಿ ಒತ್ತಾಯ ಮಾಡಿದರೂ ರೈತರು ಇದಕ್ಕೆ ಒಪ್ಪದ ಕಾರಣ ನಕಲಿ ದಾಖಲೆ ಸೃಷ್ಟಿಗೆ ಮುಂದಾಗಿದ್ದಾರೆ. ಭೂಮಾಫಿಯಾದವರೊಂದಿಗೆ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ. ಇದರ ತನಿಖೆಗೆ ಎಸ್‌ಐಟಿ ರಚನೆಯಾಗಬೇಕು ಎಂಬುದು ರೈತ ಮುಖಂಡರ ಒತ್ತಾಯವಾಗಿದೆ.
ನಕಲಿ ಆದೇಶದ ಆಧಾರದಲ್ಲಿ 50ಕ್ಕೂ ಹೆಚ್ಚು ಸರ್ವೇ ನಂಬರ್ ಖಾತೆಗಳು ಬದಲಾಗಿವೆ. ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಿ ಮೊದಲಿನಂತೆ ಮೂಲ ರೈತರ ಹೆಸರಿಗೆ ಪಹಣಿ ಖಾತೆ ಬದಲಾಗಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಾನೂನು ಶಿಕ್ಷೆಯಾಗಬೇಕು.
ಡಾ.ಬಿ.ಕೆ.ವಿನೋದಕುವಾರಗೌಡ, ರೈತ ಮುಖಂಡ