ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಬಸವರಾಜು  
ಬೆಂಗಳೂರು ಗ್ರಾಮಾಂತರ

ಹೊಸಕೋಟೆಯಲ್ಲಿ ಕಾಶ್ಮೀರಿ ಸೇಬು!

ಎಸ್.ಸಿ ಮಂಜುನಾಥ್ ಹೊಸಕೋಟೆ
ಬೆಂಗಳೂರು ಗ್ರಾವಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸಿದ್ದೇನಹಳ್ಳಿಯಪ್ರಗತಿ ಪರ ರೈತ ಬಸವರಾಜ್ 1.4 ಎಕರೆ ಜಾಗದಲ್ಲಿ ಕಾಶ್ಮೀರಿ ಸೇಬುಬೆಳೆಯುವ ಮೂಲಕ ಬಯಲುಸೀಮೆಯಲ್ಲೂ ಸೇಬಿನ ಬೆಳೆಗೆ ಸೈ ಎಂದು ತೋರಿಸಿಕೊಟ್ಟ ವಾದರಿ ಕೃಷಿಕರಾಗಿದ್ದಾರೆ.
ಮೂಲತಃ ಸಿದ್ದೇನಹಳ್ಳಿ ಬಸವರಾಜು ಅವರ ತಾತನ ಕಾಲದಿಂದ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಾ ಬಂದಿದ್ದಾರೆ. ಸಾವಾಜಿಕ ಜಾಲತಾಣದಲ್ಲಿ ಆ್ಯಪಲ್ ಬೆಳೆಯನ್ನು ಕಂಡು ಬಿಜಾಪುರ (ವಿಜಯಪುರ)ದಲ್ಲಿ ನರ್ಸರಿ ಸಂಪರ್ಕಿಸಿ ಅಲ್ಲಿಂದ ಪ್ರತಿ ಗಿಡಕ್ಕೆ 300 ರೂ.ಗಳಂತೆ 450 ಗಿಡಗಳನ್ನು ತಂದು ನಾಟಿ ವಾಡಿ ಯಶಸ್ವಿಯಾಗಿದ್ದಾರೆ. ಸುವಾರು ಒಂದೂವರೆ ಅಡಿ ಎತ್ತರದ ಸಸಿಗಳನ್ನು ತಂದು ನಾಟಿ ಮಾಡಿದ್ದರು. ವರ್ಷದ ನಂತರ ಗಿಡದಲ್ಲಿ ಹೂವು ಬಿಟ್ಟು, ಕೇವಲ ಒಂದೆರಡು ತಿಂಗಳಲ್ಲಿ ಪ್ರತಿ ಗಿಡದಲ್ಲಿ ಸುವಾರು 8 ರಿಂದ 10 ಕೆಜಿ ಸೇಬು ಬಿಡಲಾರಂಭಿಸಿತು. ಆರಂಭದಲ್ಲಿ ಈ ಭೂಮಿಯಲ್ಲಿ ಸೇಬು ಬರುವುದೇ ಎಂಬ ಆತಂಕ ಕೆಲವೇ ತಿಂಗಳಲ್ಲಿ ದೂರವಾಯಿತು ಎನ್ನುತ್ತಾರೆ ಬಸವರಾಜು.
ವರ್ಷಕ್ಕೆ ಒಂದೇ ಬೆಳೆ
ೆಬ್ರವರಿಯಲ್ಲಿಅಥವಾ ಮಾರ್ಚ್ ತಿಂಗಳ ಆಸುಪಾಸಿನಲ್ಲಿ ಸಸಿಗಳಲ್ಲಿ ಹೂವು ಬಿಡಲು ಆರಂಭಿಸಿದರೆ ಯುಗಾದಿ ಹಬ್ಬದ ಹೊತ್ತಿಗೆ ಕಾಯಿ ಬಿಡಲು ಆರಂಭಿಸುತ್ತದೆ.
ವಾರುಕಟ್ಟೆಯಲ್ಲಿ ವಾರಾಟ ಮಾಡಿಲ್ಲ:
4 ವರ್ಷದಿಂದ ಎರಡು ಬಾರಿ ಸೇಬು ಬೆಳೆದಿದ್ದು, ಸರಿ ಸುವಾರು 1,500 ಕೆಜಿಯಿಂದ 1,800 ಕೆಜಿವರೆಗೆ ಪ್ರತಿ ವರ್ಷ ಬೆಳೆದಿದ್ದೇನೆ. ಆದರೆ, ಈವರೆಗೆ 1 ಕೆಜಿ ಸೇಬನ್ನೂ ನೇರವಾಗಿ ವಾರುಕಟ್ಟೆಯಲ್ಲಿ ವಾರಾಟ ವಾಡಿಲ್ಲ. ಈ ಭಾಗದಲ್ಲಿ ನಾನೊಬ್ಬನೇ ಸೇಬು ಬೆಳೆದ ಕಾರಣ ಕುತೂಹಲದಿಂದ ನೋಡಲು ಬರುವಂತಹ ಕೃಷಿ ಪ್ರಿಯರೇ ಹಣ್ಣನ್ನು ಖರೀದಿ ವಾಡುತ್ತಾರೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಬಸವರಾಜು.
3 ಲಕ್ಷ ರೂ.ಖರ್ಚು:
ಮೊದಲ ಬಾರಿ ಬಿಜಾಪುರದಿಂದ ತಂದ ಗಿಡ, ಅದಕ್ಕೆ ಬೇಕಾದ ಬೇವಿನ ಹಿಂಡಿ, ಹೊಂಗೇ ಹಿಂಡಿ, ಹನಿ ನೀರಾವರಿ ಪೈಪ್ ಅಳವಡಿಕೆ ಎಲ್ಲವೂ ಸೇರಿ 3 ಲಕ್ಷ ರೂ.ಖರ್ಚು ವಾಡಿ ಕೃಷಿ ವಾಡುತ್ತಿದ್ದೇನೆ. ಛಲ ಬಿಡದೆ ಪ್ರಾಯೋಗಿಕವಾಗಿ ಬೆಳೆ ಬೆಳೆದು ಯಶಸ್ವಿಯಾಗಿದ್ದೇನೆ. ಪ್ರತಿ ಗಿಡ ಕನಿಷ್ಠ25 ವರ್ಷದವರೆಗೆ ಬೆಳೆ ನೀಡುತ್ತದೆ. ಗಿಡಕ್ಕೆ ಹುಳು ಅಥವಾ ಕೀಟಗಳು ಕಂಡುಬಂದಲ್ಲಿ ಬೇವಿನ ಎಣ್ಣೆ ವಾತ್ರ ಸಿಂಪಡಿಸುತ್ತೇನೆ. ಪ್ರತಿ ಗಿಡಕ್ಕೆ ವರ್ಷದಲ್ಲಿ ಮೂರರಿಂದ ನಾಲ್ಕು ಬಾರಿ ಕೊಟ್ಟಿಗೆ ಗೊಬ್ಬರ ಹಾಗೂ ಕಪ್ಪುಮಣ್ಣು ಹಾಕುವ ಮೂಲಕ ಸಾವಯವ ಕೃಷಿ ಪದ್ಧತಿಯಲ್ಲಿ ಸೇಬು ಬೆಳೆದಿದ್ದೇನೆ ಎಂದು ರೈತ ಬಸವರಾಜು ಮಾಹಿತಿ ನೀಡಿದರು.