ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮನೆಮನೆಗಳಿಗೆ ನಳ ಸಂಪರ್ಕ ಕಾಮಗಾರಿ ಚುರುಕುಗೊಳಿಸಲು ಹರಸಾಹಸ ನಡೆಸುತ್ತಿರುವ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ವಿಭಾಗ ಶೇ.48 ಯಶಸ್ವಿಯಾಗಿದ್ದು 340 ಹರ್‌ಘರ್‌ಜಲ್ ಗ್ರಾಮಗಳನ್ನು ೋಷಣೆ ಮಾಡಿದೆ.
ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ 898 ಗ್ರಾಮಗಳಲ್ಲಿ ಜಲಜೀವನ್‌ಮಿಷನ್ ಯೋಜನೆಯಡಿ ಮನೆಗಳಿಗೆ ನಳ ಸಂಪರ್ಕ ಕಾಮಗಾರಿ ಕೈಗೆತ್ತಿಕೊಂಡಿದ್ದು, ಇದರಲ್ಲಿ 340 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡು ನೀರು ಪೂರೈಕೆಯಾಗುತ್ತಿದೆ ಉಳಿದ 558 ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಂಡು ಮನೆಗಳಿಗೆ ನೀರು ಪೂರೈಕೆಯಾಗುತ್ತಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಹರ್‌ಘರ್‌ಜಲ್ ಗ್ರಾಮಗಳೆಂದು ೋಷಣೆ ಮಾಡಲಿದೆ. ಈ ನಿಟ್ಟಿನಲ್ಲಿ ಅವಿರತ ಪ್ರಯತ್ನ ನಡೆಸುತ್ತಿದೆ.
ಗ್ರಾಪಂ ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಕ:
ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗಳಿಗೆ ಕೊಳಾಯಿ ಮೂಲಕ ನೀರು ಪೂರೈಸುವ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಇದಕ್ಕೆ ವೇಗ ನೀಡಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಧಿಕಾರಿಗಳು ಕಾಮಗಾರಿಗಳ ಗುಣಮಟ್ಟ ಸೇರಿ ಕಾಮಗಾರಿ ಯಾವ ಹಂತದಲ್ಲಿದೆ ಎಂಬುದರ ಮೇಲೆ ನಿಗಾ ವಹಿಸಿ ಕಾಮಗಾರಿಗೆ ವೇಗ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಜೆಜೆಎಂ ಅನುಷ್ಠಾನ ಮಾಡಲು ಗುರಿ ನಿಗದಿ ಮಾಡಿ ಅಗತ್ಯ ಅನುದಾನ ಬಿಡುಗಡೆ ಮಾಡಿದ್ದರೂ ಬಹುತೇಕ ಗ್ರಾಮಗಳಲ್ಲಿ ಯೋಜನೆ ಪ್ರಾಥಮಿಕ ಹಂತದದಲ್ಲಿಯೇ ಎಡವಿರುವ ಆರೋಪಗಳಿವೆ, ಸಾಕಷ್ಟು ಗ್ರಾಮಗಳಲ್ಲಿ ಅರೆಬರೆ ಕಾಮಗಾರಿಗಳು ನಡೆದಿದ್ದು ಗ್ರಾಮಸ್ಥರ ಆಕ್ರೋಶ ಎದುರಿಸುತ್ತಿದೆ. ಮತ್ತೆ ಹಲವು ಗ್ರಾಮಗಳಲ್ಲಿ ಕಾಮಗಾರಿಗಳು ಸ್ಥಗಿತಗೊಂಡಿದ್ದು ಯಾವಾಗ ಪುನಾರಂಭವಾಗುತ್ತದೆ ಎಂಬುದೇ ತಿಳಿಯದಂತಾಗಿದೆ. ಈ ಹಿನ್ನೆಲೆಯಲ್ಲಿ ನೋಡಲ್ ಅಧಿಕಾರಿಗಳು ಇಂಥ ಗ್ರಾಮಗಳಲ್ಲಿ ಖುದ್ದು ಪರಿಶೀಲನೆ ನಡೆಸಿ ಇಲಾಖೆಗೆ ವರದಿ ಸಲ್ಲಿಸುವುದರ ಜತೆಗೆ ಕಾಮಗಾರಿ ಚುರುಕಿಗೆ ಪ್ರಯತ್ನಿಸಲಿದ್ದಾರೆ.
ಗುತ್ತಿಗೆದಾರ ಮೇಲೆ ಹಿಡಿತವಿಲ್ಲ?
ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆ ಕುಂಟುತ್ತಾ ಸಾಗಲು ಗುತ್ತಿಗೆದಾರರೇ ಕಾರಣ ಎಂಬ ಆರೋಪವೂ ದಟ್ಟವಾಗಿದೆ. ಅನುದಾನ ಬಿಡುಗಡೆಯಾದರೂ ನಿಗಧಿತ ಕಾಲಾವಧಿಯಲ್ಲಿ ಕಾಮಗಾರಿ ಮುಗಿಸಲು ಗುತ್ತಿಗೆದಾರರು ಮೀನಮೇಷ ಎಣಿಸುತ್ತಿದ್ದಾರೆ. ಗುತ್ತಿಗೆದಾರರು ಜನಪ್ರತಿನಿಧಿಗಳು ಹಾಗೂ ಹಲವು ಪ್ರಭಾವಿಗಳ ಕೃಪಾಕಟಾಕ್ಷದಲ್ಲಿರುವುದರಿಂದ ಅಧಿಕಾರಿಗಳಿಗೆ ಇಂತವರ ಮೇಲೆ ಹಿಡಿತವಿಲ್ಲದಂತಾಗಿದೆ. ಇದೇ ಕಾರಣಕ್ಕೆ ಯೋಜನೆ ವೇಗ ಪಡೆದುಕೊಳ್ಳುತ್ತಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. 2026 ರ ಮಾರ್ಚ್ ಅಂತ್ಯಕ್ಕೆ ಗುರಿ ಸಾಧಿಸಲು ಗಡುವು ನೀಡಿದ್ದರೂ ಇದುವರೆಗೆ ಶೇ.48 ಗುರಿ ಸಾಧನೆಯಷ್ಟೇ ಆಗಿರುವುದು ಹಲವು ಗುತ್ತಿಗೆದಾರರ ಲೋಪವೇ ಕಾರಣ ಎಂಬ ಮಾತು ಕೇಳಿಬರುತ್ತಿದೆ.
ಜಿಲ್ಲೆಯ ಹಲವು ಗ್ರಾಮಗಳಲ್ಲಿ ಅರೆಬರೆ ಕಾಮಗಾರಿಗಳಿಗೆ ಬಿಲ್ ಪಡೆಯಲಾಗಿದೆ, ಮನೆ ಮನೆಗೆ ಕೊಳಾಯಿ ಸಂಪರ್ಕ ನೀಡಿ ಅದರಲ್ಲಿ ನೀರು ಪೂರೈಕೆಯಾಗುತ್ತಿದೆ ಎಂದು ವರದಿ ಸಲ್ಲಿಸಿ ಬಿಲ್ ಪಡೆಯಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕೊಳಾಯಿ ಅಳವಡಿಕೆಗೆ ಅಗೆದ ರಸ್ತೆಗಳನ್ನು ಹಾಗೇ ಬಿಟ್ಟಿದ್ದು ಅವುಗಳನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಹಲವು ಕಡೆಗಳಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡಿಲ್ಲ. ಆರಂಭಿಕ ಹಂತದಲ್ಲೇ ಸಾಕಷ್ಟು ಗೊಂದಲ ಸೃಷ್ಟಿಸಿಕೊಂಡ ಪರಿಣಾಮವಾಗಿ ನಿಗಧಿತ ಗುರಿ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಜಲ್ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಮನೆ ಮನೆಗೆ ಕೊಳಾಯಿ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ಚುರುಕುಗೊಳಿಸಲಾಗಿದೆ, ಇದಕ್ಕಾಗಿಯೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮನೆ ಮನೆಗಳಿಗೆ ಕೊಳಾಯಿ ಸಂಪರ್ಕ ಕಲ್ಪಿಸಿ ಅವುಗಳಲ್ಲಿ ನೀರು ಪೂರೈಕೆಯಾಗುವುದನ್ನು ಖಚಿತಪಡಿಸಿಕೊಂಡ ಬಳಿಕ ಅಂಥ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ನಿರ್ಧರಿಸಿ ಹರ್ ಘರ್ ಜಲ್ ಗ್ರಾಮವೆಂದು ೋಷಣೆ ಮಾಡಲಾಗುತ್ತದೆ.
ಶ್ರೀಕಾಂತ್, ಕಾರ್ಯಪಾಲಕ ಅಭಿಯಂತರ ಕುಡಿಯುವ ನೀರು ಮತ್ತು ಗ್ರಾಮೀಣ ನೈರ್ಮಲ್ಯ ಇಲಾಖೆ ಬೆಂ.ಗ್ರಾಮಾಂತರ