ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿ ಎ.ಪಿ.ರಂಗನಾಥ್​ ಗೆಲುವಿಗಾಗಿ ದೇವನಹಳ್ಳಿ ತಾಲೂಕು ಸುಣ್ಣಘಟ್ಟದ ಆಂಜನೇಯ ಸ್ವಾಮಿಗೆ ಬಿಜೆಪಿಯಿಂದ ವಿಷೇಶ ಪೂಜೆ ಸಲ್ಲಿಸಲಾಯಿತು. ಬಿಜೆಪಿ ಮಂಡಲದ ಅಧ್ಯಕ್ಷ ನೀಲೇರಿ ಅಂಬರೀಶ್​ ಗೌಡ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಮೋಹನ್​ ಗೌಡ, ಮುಖಂಡರಾದ ಬುಳ್ಳಹಳ್ಳಿ ರಾಜಪ್ಪ, ಇಂಡ್ರಸನಹಳ್ಳಿ ಗೋಪಿನಾಥ್​ ಇದ್ದರು. 
ಬೆಂಗಳೂರು ಗ್ರಾಮಾಂತರ

ಕಾಂಗ್ರೆಸ್​ ಸರ್ಕಾರದಿಂದ ಶಿಕ್ಷಕರಿಗೆ ಅನ್ಯಾಯ

* ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಆಪಾದನೆ

ಕುಂದಾಣ : ದೀರ್ಘಕಾಲದಿಂದ ಶಿಕ್ಷಕರ ಪ್ರತಿನಿಧಿಯಾಗಿರುವ ಹಾಗೂ ಪ್ರಸ್ತುತ ರಾಜಕೀಯ ಧೋರಣೆಗಳನ್ನು ಅನುಸರಿಸುತ್ತಿರುವವರಿಂದ ಶಿಕ್ಷಕ ಸಮುದಾಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಬದಲಿಗೆ ಸಮಸ್ಯೆಗಳು ಹಾಗೆಯೇ ಉಳಿದಿವೆ ಎಂದು ಬಿಜೆಪಿ ಮಂಡಲದ ಅಧ್ಯಕ್ಷ ನೀಲೇರಿ ಅಂಬರೀಶ್​ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್​ಡಿಕೆ ಗೆಲುವಿಗಾಗಿ ಸುಣ್ಣಘಟ್ಟದ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.

ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್​ ಧೋರಣೆಗಳು ಶಿಕ್ಷಕರು ಮತ್ತು ಪದವೀಧರರ ವಿರೋಧಿಯಾಗಿವೆ. ಆಡಳಿತ ಪಕ್ಷದ ವೈಫಲ್ಯಗಳಿಗೆ ತಕ್ಕ ಉತ್ತರ ನೀಡಲು ಮತ್ತು ಶಿಕ್ಷಕರ ಧ್ವನಿಯಾಗಲು ಎನ್​ಡಿಎ ಗೆಲ್ಲಬೇಕು ಎಂದರು.

ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಮೋಹನ್​ ಗೌಡ ಮಾತನಾಡಿ, ತಾಲೂಕಿನಲ್ಲಿ 600ಕ್ಕೂ ಹೆಚ್ಚು ಶಿಕ್ಷಕ ಮತದಾರರಿದ್ದಾರೆ. ಅವರಿಗೆ ಸರ್ಕಾರದಿಂದ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸುವ ಉದ್ದೇಶದಿಂದ ಎ.ಪಿ.ರಂಗನಾಥ್​ ಚುನಾವಣೆಗೆ ಸ್ಪರ್ಥಿಸುತ್ತಿದ್ದಾರೆ. ಪಕ್ಷಾಂತರ ಮೂಲಕ ಪಕ್ಷಕ್ಕೆ ದ್ರೋಹ ಬಗೆದವರನ್ನು ಮತದಾರರು ಕ್ಷಮಿಸುವುದಿಲ್ಲ ಎಂದು ಹೇಳಿದರು.

ಮುಖಂಡರಾದ ಅಜಯ್​, ಪುನೀತ್​, ಮಹಿಳಾ ಮೋರ್ಚಾ ಅಧ್ಯಕ್ಷ ವಿಜಯ, ಪ್ರಧಾನ ಕಾರ್ಯದರ್ಶಿ ನಯನಾ, ಯಶೋಧಾ, ಕೋಕಿಲಾ, ಪುಷ್ಪಾ, ಶಿಲ್ಪಾ ಇದ್ದರು.