ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಸ್ಥಾಪನೆಗೊಂಡಿರುವ ವಾಟರ್ ಫಿಲ್ಟರ್ ಅನ್ನು ಬಮುಲ್ ನಿರ್ದೇಶಕ ಬಿ.ವಿ.ಸತೀಶಗೌಡ ಉದ್ಘಾಟಿಸಿದರು. ಉಪವ್ಯವಸ್ಥಾಪಕ ಶ್ರೀರಾಮ್, ಪ್ರಾಂಶುಪಾಲೆ ಶಶಿಕಲಾ ಇದ್ದರು.
- ಬಮುಲ್ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿಕೆ
- ಮಕ್ಕಳ ಆರೋಗ್ಯ ದೃಷ್ಟಿಯಿಂದ ಸಹಕಾರಿ
- ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶ
ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಸರ್ಕಾರಿ ಶಾಲೆ ಮತ್ತು ಕಾಲೇಜು ಮಕ್ಕಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಬೆಂಗಳೂರು ಹಾಲು ಒಕ್ಕೂಟದ ನಿಧಿಯಿಂದ ಫಿಲ್ಟರ್ ಘಟಕ ಅಳವಡಿಸಲಾಗಿದ್ದು, ಮಕ್ಕಳ ಆರೋಗ್ಯ ದೃಷ್ಟಿಯಿಂದ ಸಹಕಾರಿಯಾಗಿದೆ ಎಂದು ಬಮುಲ್ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು.
ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಬಮುಲ್ ಕಲ್ಯಾಣ ಟ್ರಸ್ಟ್ ನಿಧಿಯಿಂದ ಸ್ಥಾಪಿಸಿದ್ದ 500 ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು. ಹೊಸಕೋಟೆ ಶಿಬಿರದ ಉಪವ್ಯವಸ್ಥಾಪಕ ಶ್ರೀರಾಮ್ ಮಾತನಾಡಿ, ಅಂರ್ತಜಲ ಕುಸಿತದಿಂದ ್ಲೋರೈಡ್ ಅಂಶ ಹೆಚ್ಚಾಗಿದ್ದು, ಆರೋಗ್ಯ ದೃಷ್ಟಿಯಿಂದ ಬಮುಲ್ನಿಂದ ಶಾಲೆ ಕಾಲೇಜುಗಳಲ್ಲಿ ಉಚಿತ ಫಿಲ್ಟರ್ ಹಾಕಿಕೊಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು. ವಸತಿ ಶಾಲೆ ಪ್ರಾಂಶುಪಾಲೆ ಶಶಿಕಲಾ, ಡಾ.ಸಂತೋಷ್, ನವೀನ್, ಚಿಕ್ಕಹರಳಗೆರೆ ಜಗದೀಶ್, ವಿದ್ಯಾಶ್ರೀ, ಜುನೈದ್ಖಾನ್ ಇತರರು ಇದ್ದರು.