ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೊಸಕೋಟೆ ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಮಾ.4ರಂದು ಬೆಳಗ್ಗೆ 10.30ಕ್ಕೆ
ಜಿಲ್ಲಾ ಮಟ್ಟದ ಪೋಡಿ ಮುಕ್ತ ಗ್ರಾಮಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಶರತ್‌ಬಚ್ಚೇಗೌಡ ತಿಳಿಸಿದ್ದಾರೆ.
ಹೊಸಕೋಟೆಯಲ್ಲಿ ಹಮ್ಮಿಕೊಂಡಿದ್ದ ಪೋಡಿಮುಕ್ತ ಗ್ರಾಮ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ತಿಳಿಸಿದ್ದಾರೆ. ತಾಲೂಕಿನಲ್ಲಿ 500ಕ್ಕೂ ಹೆಚ್ಚು ಬ್ಲಾಕ್‌ಗಳನ್ನು ಮಾಡುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಸೇರಿ 4 ತಾಲೂಕುಗಳಲ್ಲಿ 3.5 ಸಾವಿರ ರೈತರಿಗೆ ಅವರ ಭೂಮಿಯ ಹಕ್ಕನ್ನು ಸ್ಥಳದಲ್ಲಿಯೇ ವರ್ಗಾವಣೆ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
4 ತಾಲೂಕುಗಳ ಫವತಿ ಖಾತೆಗಳನ್ನು ವಿತರಿಸಲಾಗುವುದು ವಿಶೇಷವಾಗಿ ಹೊಸಕೋಟೆ ತಾಲೂಕಲ್ಲಿ 5 ಸಾವಿರ ಫವತಿ ಖಾತೆಗಳನ್ನು ಅಲ್ಲಿಯೇ ವಿತರಣೆ ಮಾಡಲಾಗುವುದು ಮತ್ತು ವೈಯಕ್ತಿಕವಾಗಿ ಸೌಲಭ್ಯಗಳಾದ ಸಾಮಾಜಿಕ ಭದ್ರತೆ ಪಿಂಚಣಿ, ವಿಧವಾ ಮಾಸಾಸನ, ವೃದ್ದಾಪ್ಯ ವೇತನ ವಿತರಣೆ, 94 ಸಿ, 94 ಸಿಸಿ ಹಕ್ಕನ್ನು 53 ಅಡಿಯಲ್ಲಿ ಸಾಗುವಳಿ ಚೀಟಿ ಕೊಡುವಂತಹದ್ದು ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದರು. ಸರ್ಕಾರ ಗ್ಯಾರಂಟಿಗಳ ಜತೆಗೆ 6ನೇ ಗ್ಯಾರಂಟಿ ಭೂಮಾಲೀಕತ್ವ ಅಥವಾ ಭೂಮಿಯ ಹಕ್ಕು ಆ ಒಂದು ಗ್ಯಾರಂಟಿ ಹಕ್ಕನ್ನು ರಾಜ್ಯ ಸರ್ಕಾರ ಭದ್ರತೆಯಾಗಿಟ್ಟುಕೊಂಡು ಹಸ್ತಾಂತರ ಮಾಡುತ್ತಿದ್ದೆ ಎಂದು ವಿವರಿಸಿದರು. ಕೆಲವು ರೈತರು ಬೇರೆ ಗ್ರಾಮಗಳಲ್ಲಿರುವ ಸರ್ವೆ ನಂಬರ್‌ಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಎರಡು ತರಹದ ಅಡೆತಡೆಗಳಿವೆ. ಕಂದಾಯ ಇಲಾಖೆಯಲ್ಲಿ ಚರ್ಚೆಯಾಗಿದ್ದು, ಹಾಸನದ ಚನ್ನರಾಯ ಪಟ್ಟಣದ ಗ್ರಾಮದಲ್ಲಿ ಟ್ರಯಲ್ ಬೇಸಿಸ್ ಸರ್ವೆ ನಂ.ತಗೆದುಕೊಂಡು ಮಾಡುತ್ತಿದ್ದಾರೆ. ಅದು ಯಶಸ್ವಿಯಾದಾಗ ರಾಜ್ಯಾದ್ಯಂತ ಮಾಡಲು ಅನುಕೂಲವಾಗುತ್ತೆ. ಜತೆಗೆ ರೈತರ ಹತ್ತಿರ ದಾಖಲೆಗಳು ಮಿಸ್ಸಿಂಗ್ ಆಗಿರುತ್ತದೆ. ಅವರೆಲ್ಲರಿಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೋಡಿಗಳಿಗೆ ಏನೆಲ್ಲ ಮಾಡಬೇಕು, ಅಂತಹವುಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಫಲಾನುಭವಿಗಳು ಮತ್ತು ಹೆಚ್ಚಿನದಾಗಿ ಕಾರ್ಯಕರ್ತರು 10 ಗಂಟೆಗೆ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಹಾಜರಿರಬೇಕು. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ ಎಂದು ಶಾಸಕರು ಹೇಳಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ, ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಸಂಸದ ಡಾ.ಕೆ.ಸುಧಾಕರ್, ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.