ದೇವನಹಳ್ಳಿ ಹಳೇ ತಾಲೂಕು ಕಚೇರಿ ಜಾಗವನ್ನು ಕೊರಚರಪಾಳ್ಯ ಸರ್ಕಾರಿ ಶಾಲೆ ಹಳೇ ವಿದ್ಯಾರ್ಥಿ ಸಂದ ಅಧ್ಯಕ್ಷ, ಮಾಜಿ ಶಾಸಕ ಜಿ.ಚಂದ್ರಣ್ಣ ನೇತೃತ್ವದಲ್ಲಿ ಪರಿಶೀಲಿಸಲಾಯಿತು. ಗೌರವಾಧ್ಯಕ್ಷ ಸಿ.ಜಗನ್ನಾಥ್​, ಕಾರ್ಯದರ್ಶಿ, ನಿವೃತ್ತ ತಹಸೀಲ್ದಾರ್​ ಪಿ.ಗಂಗಾಧರಪ್ಪ, ಖಜಾಂಚಿ ಶ್ರೀರಾಮಯ್ಯ, ಮುಖಂಡರಾದ ಎಸ್​.ಆರ್​.ಎನ್​.ಮುನಿರಾಜು, ಸಿ.ಎಂ.ವೆಂಕಟೇಶ್​, ಜಿ.ಪುಟ್ಟರಾಜು ಇತರರು ಇದ್ದರು. 
ಬೆಂಗಳೂರು ಗ್ರಾಮಾಂತರ

ಹಳೇ ತಾಲೂಕು ಕಚೇರಿ ಕೊರಚರಪಾಳ್ಯ ಶಾಲೆಗೆ ಹಸ್ತಾಂತರಿಸಿ

* ಹಳೇ ವಿದ್ಯಾರ್ಥಿಗಳ ಸಂ ಒತ್ತಾಯ * ಪುರಾತತ್ವ ಇಲಾಖೆಗೆ ಹಸ್ತಾಂತರಿಸದಿರಲು ಒತ್ತಾಯ

ದೇವನಹಳ್ಳಿ: ಹಳೇ ತಾಲೂಕು ಕಚೇರಿ ಜಾಗವನ್ನು ಕೊರಚರಪಾಳ್ಯ ಸರ್ಕಾರಿ ಶಾಲೆಗೆ ಹಸ್ತಾಂತರಿಸಬೇಕು. ಯಾವುದೇ ಕಾರಣಕ್ಕೂ ಕಟ್ಟಡವನ್ನು ಪುರಾತತ್ವ ಇಲಾಖೆಗೆ ನೀಡಬಾರದು ಎಂದು ಹಳೇ ವಿದ್ಯಾರ್ಥಿ ಸಂದ ಅಧ್ಯಕ್ಷ ಆದ ಮಾಜಿ ಶಾಸಕ ಜಿ.ಚಂದ್ರಣ್ಣ ಒತ್ತಾಯಿಸಿದರು.

ಹಳೇ ತಾಲೂಕು ಕಚೇರಿಗೆ ಸಂದ ಪದಾಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿದ ಅವರು, ಹಳೇ ತಾಲೂಕು ಕಚೇರಿ ಜಾಗವನ್ನು ಕೊರಚರಪಾಳ್ಯ ಸರ್ಕಾರಿ ಶಾಲೆಗೆ ಹಸ್ತಾಂತರಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಲಾಗಿದೆ. ಆದರೂ ಯಾರೋ ಒಬ್ಬರ ಹಿತಾಸಕ್ತಿಗಾಗಿ ಪ್ರಾಚ್ಯವಸ್ತು ಸಂಗ್ರಹಾಲಯ ಮಾಡಲು ಪುರಾತತ್ವ ಇಲಾಖೆಗೆ ಜಾಗವನ್ನು ಸರ್ಕಾರ ಹಸ್ತಾಂತರ ಮಾಡಿದೆ. ಕೂಡಲೇ ಈ ಆದೇಶನ್ನು ಹಿಂಪಡೆದು ಜಾಗವನ್ನು ಶತಮಾನ ಕಂಡ ಕೊರಚರಪಾಳ್ಯ ಶಾಲೆಗೆ ನೀಡಬೇಕು ಎಂದು ಆಗ್ರಹಿಸಿದರು.

ಕೊರಚರಪಾಳ್ಯ ಶಾಲೆಯಲ್ಲಿ ಸದ್ಯ ಶಾಲೆಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಬೆಳಗಿನ ಉಪಹಾರ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ದಾಖಲಾತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಶಾಲೆಗೆ ಕೊಠಡಿ ಹಾಗೂ ಆಟದ ಮೈದಾನದ ಅವಶ್ಯಕತೆ ಇದೆ. ಶಾಲೆ ಪಕ್ಕದಲ್ಲೇ ಹಳೇ ತಾಲೂಕು ಕಚೇರಿಯ 15&20 ಗುಂಟೆ ಜಾಗ ಇರುವ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಜಾಗವನ್ನು ಶಾಲೆಗೆ ಮಂಜೂರು ಮಾಡಿಕೊಡಬೇಕು ಎಂದು ಚಂದ್ರಣ್ಣ ಒತ್ತಾಯಿಸಿದರು.

ಹಳೇ ವಿದ್ಯಾರ್ಥಿಗಳ ಸಂದ ಗೌರವಾಧ್ಯಕ್ಷ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್​ ಮಾತನಾಡಿ, ವಿಮಾನ ನಿಲ್ದಾಣ ಪ್ರಾಧಿಕಾರ 5 ಕೋಟಿ ರೂ. ವೆಚ್ಚದಲ್ಲಿ ಕೊರಚರಪಾಳ್ಯ ಶಾಲೆಯನ್ನು ಹೈಟೆಕ್​ ಶಾಲೆಯಾಗಿ ನಿರ್ಮಿಸಿದೆ. ಶಾಲಾ ಶಿಕ್ಷಣ ಇಲಾಖೆಯು ಈ ಶಾಲೆಯಲ್ಲಿ ಪ್ರೌಢಶಾಲೆ ಪ್ರಾರಂಭಿಸಲು ಅನುಮತಿ ನೀಡಿದ್ದು, ಪ್ರೌಢಶಾಲೆ ಪ್ರಾರಂಭಿಸಲಾಗಿದೆ. ಆದರೆ ಮಕ್ಕಳ ಸಂಖ್ಯೆಗೆ ತಕ್ಕಂತೆ ಕೊಠಡಿಗಳ ಸಮಸ್ಯೆ ತಲೆದೊರಿದ್ದು, ದಾಖಲಾತಿ ಮಾಡಿಕೊಳ್ಳಲಾಗದೆ ವಿದ್ಯಾರ್ಥಿಗಳನ್ನು ವಾಪಸ್ಸ್​ ಕಳುಸುವ ಪರಿಸ್ಥಿತಿ ಉಂಟಾಗಿದೆ.

ಹಳೇ ತಾಲೂಕು ಕಚೇರಿ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಈ ಜಾಗವನ್ನು ಶಾಲೆಗೆ ನೀಡಬೇಕು ಎಂದು ಉಸ್ತುವಾರಿ ಸಚಿವರನ್ನು ಸ್ಥಳಕ್ಕೆ ಕರೆಸಿ, ಜಾಗವನ್ನು ಪರಿಶೀಲನೆ ಮಾಡಿಸಲಾಗಿತ್ತು.

ಈಗ ನಮಗರಿವಿಲ್ಲದಂತೆ ಜಾಗವನ್ನು ಮ್ಯೂಸಿಯಂ ಮಾಡಲು ಪುರಾತತ್ವ ಇಲಾಖೆಗೆ ಹಸ್ತಾಂತರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡರಾದ ವೈ.ಸಿ.ಕೃಪಾಕರ್​, ನಾರಾಯಣಸ್ವಾಮಿ, ಮಲ್ಲಾರಿ ಕುಮಾರ್​, ಮುತ್ತುರಾಜ್​, ಷಫಿ ಅಹಮದ್​, ಪೊಲೀಸ್​ ರೇಣುಕುಮಾರ್​, ಲಯನ್ಸ್​ ಅಧ್ಯಕ್ಷ ನರಸಿಂಹಮೂರ್ತಿ, ಮಂಜುನಾಥ್​, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪುಟ್ಟಸ್ವಾಮಿ, ಎಸ್​ಡಿಎಂಸಿ ಅಧ್ಯೆ ಮಹಾಲ್ಮ, ಆನಂದ್​ ಇದ್ದರು.

ಕೋಟಿಯಲ್ಲಿ ಮ್ಯೂಸಿಎಂ ಮಾಡಲಿ: ಮ್ಯೂಸಿಯಂ ಬೇಕಿದ್ದರೆ ಕೊಟೆ ಸಮೀಪದಲ್ಲಿ ಎಲ್ಲಿಯಾದರೂ ಮಾಡಲಿ. ನಮ್ಮದೇನೂ ಅಡ್ಡಿ ಇಲ್ಲ. ಆದರೆ ಶಾಲೆಗೆ ಜಾಗ ಬೇಕೇಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸರ್ಕಾರಿ ಶಾಲೆಗಾಗಿಯೇ ಈ ಜಾಗ ಮೀಸಲಿಡಬೇಕು ಎಂದು ಒತ್ತಾಯಿಸುತ್ತೆವೆ ಎಂದು ಸಿ.ಜಗನ್ನಾಥ್​ ಹೇಳಿದರು.