- ಸುಪಾರಿ ಕೊಟ್ಟು ಜಿಮ್ ಟ್ರೈನರ್ ಹತ್ಯೆ?
ಸುಪಾರಿ ಕೊಟ್ಟು ಜಿಮ್ ಟ್ರೈನರ್ ಹತ್ಯೆ?
ಆನೇಕಲ್: ಜಿಮ್ ಟ್ರೈನರ್ ವಿಜಯ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ಸಿಕ್ಕಿದ್ದು, ಉದ್ಯಮಿ ಮಗಳ ಜತೆಗಿನ ವಿಜಯ್ ಪ್ರೀತಿ ಸುಪಾರಿ ಕೊಟ್ಟು ಕೊಲೆ ಮಾಡಲು ಕಾರಣವಾಯಿತು ಎನ್ನಲಾಗುತ್ತಿದೆ.
ಕೋಲಾರ ಜಿಲ್ಲೆ ಮುಳಬಾಗಿಲಿನ ಜಿಮ್ ಟೆನರ್ ವಿಜಯ್ ಕೊಲೆ ಕೇಸ್ ಬೆಳಕಿಗೆ ಬಂದು ಹತ್ತು ದಿನಗಳಾಗಿದ್ದು, ಸದ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ಅಪರಿಚಿತ ಶವ ಪತ್ತೆ ಬಳಿಕ ಜಿಮ್ ಟೆನರ್ ವಿಜಯ್ ಶವ ಎಂಬುದು ಗೊತ್ತಾಗುತ್ತಿದ್ದಂತೆ ಸುಪಾರಿ ಸುಳಿವು ಸಿಕ್ಕಿ ಹೈ ಪ್ರೊಫೈಲ್ ಪ್ರಕರಣವಾಗಿ ಬದಲಾಗಿತ್ತು. ಪ್ರಕರಣ ಸಂಬಂಧ ಬನ್ನೇರುಟ್ಟ ಪೊಲೀಸರು ಆನೇಕಲ್ ಮೂಲದ ಶ್ರೀರಾಮ್, ಸುಮಿತ್, ವೆಂಕಟೇಶಯ್ಯ ಮತ್ತು ಬಾಬು ಎಂಬುವವರನ್ನು ಬಂಧನ ಮಾಡುತ್ತಿದ್ದಂತೆ ಇಡೀ ಪ್ರಕರಣ ಬೇರೆಯದೇ ತಿರುವು ಪಡೆದುಕೊಂಡಿದೆ.
ವಿಜಯ್ ಕೊಲೆ ಹಿಂದೆ ಆತನ ಪ್ರೇಯಸಿ ತಂದೆ ಉದ್ಯಮಿ ಕಾಮಿನೇನಿ ಪ್ರಸಾದ್ ಕೈವಾಡ ಇದೆ. ಅವರು ಕೋಟಿ ಕೋಟಿ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾರೆ ಎಂದು ಮೃತ ವಿಜಯ್ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಶ್ರೀರಾಮ್ ಸುಪಾಯಿ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಆನೇಕಲ್ ವಕೀಲನ ಮೂಲಕ ಅವರ ಕಚೇರಿಯಲ್ಲಿಯೇ ಕಾಮಿನೇನಿ ಪ್ರಸಾದ್ ಪರಿಚಯವಾಗಿದ್ದು, ಕೊಲೆ ಬಗ್ಗೆ ಮಾತುಕತೆ ನಡೆಸಿದ್ದರ ಬಗ್ಗೆಯೂ ಒಪ್ಪಿಕೊಂಡಿದ್ದಾನೆ ಎಂಬ ಮಾತಿ ಲಭ್ಯವಾಗಿದೆ.
ಜಿಮ್ನಲ್ಲೇ ಲವ್ವಿಡವ್ವಿ: ಕೆಲ ವರ್ಷಗಳ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಮೃತ ವಿಜಯ್ ಕೆ.ಆರ್.ಪುರಂನಲ್ಲಿ ಜಿಮ್ ಟೆನರ್ ಆಗಿ ಕೆಲಸ ಮಾಡಿಕೊಂಡಿದ್ದ.ಏಳು ವರ್ಷಗಳ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ವಿಜಯ್ ಜಿಮ್ ಟ್ರೈನಿಂಗ್ಗೆ ಬಂದ ಉದ್ಯಮಿ ಮಗಳ ಜೊತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದ. ವಿಷಯ ತಿಳಿದ ಆತನ ಪತ್ನಿ ವಿಜಯ್ನನ್ನು ಬಿಟ್ಟು ಮಕ್ಕಳೊಂದಿಗೆ ತವರು ಮನೆ ಸೇರಿಕೊಂಡಿದ್ದಳು. ಇತ್ತ ವಿಜಯ್ ಕೋಟಿ ಒಡತಿ ಪ್ರೇಯಸಿ ಜತೆ ಪರಾರಿಯಾಗಿದ್ದನು. ಮಗಳ ಪ್ರೇಮ ವಿಚಾರ ತಿಳಿದ ಉದ್ಯಮಿ ಕಾಮಿನೇನಿ ಪ್ರಸಾದ್ ಕೆಆರ್ ಪುರಂ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಜೋಡಿಯನ್ನು ಪತ್ತೆ ಹಚ್ಚಿದ್ದರು. ಅಂದು ವಿಜಯ್ಗೆ ವಾರ್ನಿಂಗ್ಮಾಡಿದ್ದ ಉದ್ಯಮಿ ಕಾಮಿನೇನಿ ಪ್ರಸಾದ್ ಹುಡುಗರನ್ನು ಬಿಟ್ಟು ಹಲ್ಲೆ ಕೂಡ ಮಾಡಿಸಿದ್ದರು ಎಂದು ತಿಳಿದುಬಂದಿದೆ. ಇಷ್ಟಾದರೂ ವಿಜಯ್ ಹಾಗೂ ಉದ್ಯಮಿ ಪುತ್ರಿ ಸಂಬಂಧ ಮುಂದುವರಿಸಿದ್ದರು ಎನ್ನಲಾಗಿದೆ.
ಈ ನಡುವೆ ಹತ್ತು ದಿನದ ಹಿಂದೆ ಬನ್ನೇರುಟ್ಟ ಠಾಣೆ ವ್ಯಾಪ್ತಿಯ ಕಾಳೇಶ್ವರಿ ಗ್ರಾಮದ ರ್ನಿಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಕಾಲ್ ಡಿಟೇಲ್ಸ್, ಸಿಡಿಆರ್, ಲೊಕೇಷನ್ ಟವರ್ ಡಂಪ್ ಸೇರಿ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆನೇಕಲ್ ಮೂಲದ ನಾಲ್ವರನ್ನು ಬಂಧಿಸಿದ್ದರು.
ಮಾಹಿತಿ ನೀಡಲು ನಿರಾಕರಣೆ: ಹೈಪ್ರೊಫೈಲ್ ಮರ್ಡರ್ ಕೇಸ್ ಸಂಬಂಧ ಪೊಲೀಸರು ಯಾವುದೇ ಮಾಹಿತಿ ನೀಡುತ್ತಿಲ್ಲ. ಕೇಂದ್ರ ವಲಯ ಐಜಿಪಿ ಗಿರೀಶ್ ಬನ್ನೇರುಟ್ಟ ಠಾಣೆಗೆ ಭೇಟಿ ನೀಡಿ ವಿಜಯ್ ಕೊಲೆ ಕೇಸ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಆನೇಕಲ್ ವಕೀಲನ ಮೂಲಕ ಉದ್ಯಮಿ ಕಾಮಿನೇನಿ ಪ್ರಸಾದ್ ಆರೋಪಿಗಳಿಗೆ ಸುಪಾರಿ ಕೊಟ್ಟಿರುವ ಬಗ್ಗೆ ಮಾಹಿತಿ ನೀಡಲು ಕೇಂದ್ರ ವಲಯ ಐಜಿಪಿ ಗಿರೀಶ್ ನಿರಾಕರಿಸಿದ್ದಾರೆ.
ಪ್ರಾಮಾಣಿಕ ತನಿಖೆಗೆ ಆಗ್ರಹ: ಉದ್ಯಮಿ ಕಾಮಿನೇನಿ ಪ್ರಸಾದ್ಗೆ ಐಪಿಎಸ್ ಅಧಿಕಾರಿಗಳ ನಂಟು ಇದೆ. ಹಾಗಾಗಿ ಪೊಲೀಸರು ಯಾವುದೇ ಅಮಿಷಕ್ಕೆ ಒಳಗಾಗದೆ ಪ್ರಾಮಾಣಿಕವಾಗಿ ತನಿಖೆ ನಡೆಸಿ ವಿಜಯ್ ಸಾವಿಗೆ ನ್ಯಾಯ ಕೊಡಿಸಬೇಕೆಂದುವಿಜಯ್ನ ಪಾಲಕರು ಒತ್ತಾಯಿಸಿದ್ದಾರೆ.