ನೆಲಮಂಗಲ ನಗರದ ಮುಖ್ಯರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆ. 
ಬೆಂಗಳೂರು ಗ್ರಾಮಾಂತರ

ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಇಂದು ಭೂಮಿಪೂಜೆ

*ಸಚಿವ ಯು.ಟಿ.ಖಾದರ್​, ಶಾಸಕ ಶ್ರೀನಿವಾಸ್​ ಭಾಗಿ *39 ಕೋಟಿ ರೂ. ಅನುದಾನ ಬಿಡುಗಡೆ *100 ಹಾಸಿಗೆ ಜತೆಗೆ ಅತ್ಯಾಧುನಿಕ ಸೌಲಭ್ಯ

ನೆಲಮಂಗಲ : ತಾಲೂಕು ಆಸ್ಪತ್ರೆಯನ್ನು ಸುಸಜ್ಜಿತ ಹಾಗೂ ಅತ್ಯಾಧುನಿಕ ಸೌಕರ್ಯಗಳ ಜತೆಗೆ 100 ಹಾಸಿಗೆ ಸಾಮಾರ್ಥ್ಯಕ್ಕೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಾಸಕ ಎನ್​.ಶ್ರೀನಿವಾಸ್​ ಅಧ್ಯಕ್ಷತೆಯಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್​ ಇಂದು(ನ.13ರಂದು) ಭೂಮಿಪೂಜೆ ನೆರವೇರಿಸಲಿದ್ದಾರೆ, ದಶಕಗಳಿಂದ ಹಾಸಿಗೆ ಕೊರತೆ, ಲ್ಯಾಬ್​, ಐಸಿಯುನಂತಹ ಅತ್ಯಾಧುನಿಕ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದ ಜನರ ಬಹುದಿನದ ಬೇಡಿಕೆ ಕೊನೆಗೂ ಈಡೇರುವ ಕಾಲ ಸನ್ನಿಹಿತವಾಗಿದೆ.

ತಾಲೂಕು ಕೇಂದ್ರಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ನೆಲಮಂಗಲ, ಹೊಸಕೋಟೆ, ಆನೆಕಲ್​ ಸೇರಿ ರಾಜ್ಯದ ಇನ್ನೂ ಕೆಲ ತಾಲೂಕುಗಳಲ್ಲಿನ ಸಾರ್ವಜನಿಕ ಆಸ್ಪತ್ರೆಗಳನ್ನು 100 ಹಾಸಿಗೆಯ ಸಾಮಾರ್ಥ್ಯಕ್ಕೆ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 2024&-25ರ ಬಜೆಟ್​ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 280 ಕೋಟಿ ರೂ. ಅನುದಾನ ಮೀಸಲಿರಿಸಿದ್ದರು. ಈಗ ನೆಲಮಂಗಲ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾರ್ಯಕ್ಕೆ ಚಾಲನೆ ದೊರೆಯುತ್ತಿದೆ.

ಟಿಬೆಟಿಯನ್​ ವಸತಿ ಸಮುಚ್ಚಯಕ್ಕೆ ತಾತ್ಕಾಲಿಕ ಸ್ಥಳಾಂತರ: ನಗರದ ಸಾರ್ವಜನಿಕ ಆಸ್ಪತ್ರೆಯನ್ನು ನೆಲಸಮ ಮಾಡಿ ಸುಸಜ್ಜಿತ ನೂತನ ಆಸ್ಪತ್ರೆ ನಿಮಾರ್ಣ ಕಾರ್ಯಕ್ಕೆ ಚಾಲನೆ ನೀಡಬೇಕಿರುವ ಕಾರಣ, ಕಾಮಗಾರಿ ಪೂರ್ಣಗೊಳ್ಳುವವರೆಗೂ ಸಾರ್ವಜನಿಕ ಹಿತದೃಷ್ಟಿಯಿಂದ ನಗರದ ಮುಖ್ಯರಸ್ತೆಯಲ್ಲಿನ ವಿಶ್ವೇಶ್ವರಪುರದ ಟಿಬೆಟಿಯನ್​ ವಸತಿ ಸಮುಚ್ಚಯಕ್ಕೆ ತಾತ್ಕಾಲಿಕವಾಗಿ ಆಸ್ಪತ್ರೆಯನ್ನು ಸ್ಥಳಾಂತರಿಸಲು ಉದ್ದೇಶಿಸಲಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಸ್ಥಳ ಪರಿಶೀಲನೆ: ಬಡ ಜನರಿಗೆ ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ ಸೌಲಭ್ಯ ಮುಂದುವರೆಸುವ ಉದ್ದೇಶದಿಂದ ಹಾಗೂ ಸ್ಥಳಾಂತರ ಉದ್ದೇಶದಿಂದ ಜಿಲ್ಲಾಧಿಕಾರಿ ಆದೇಶದ ಹಿನ್ನೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್​ ನೇತೃತ್ವದ ಅಧಿಕಾರಿಗಳ ತಂಡ ಟಿಬೆಟಿಯನ್​ ಹಾಸ್ಟೆಲ್​ಗೆ ಭೇಟಿ ನೀಡಿ, ಸ್ಥಳಪರಿಶೀಲಿಸಿದೆ. ತಾಲೂಕು ಆರೋಗ್ಯಾಧಿಕಾರಿ, ಮುಖ್ಯವೈದ್ಯಾಧಿಕಾರಿಗಳ ಜತೆ ಚರ್ಚಿಸಿ, ಸ್ಥಳಿಯ ಮುಖಂಡರ ಸಲಹೆಯಂತೆ ಕಟ್ಟಡದಲ್ಲಿ ಅಗತ್ಯ ದುರಸ್ತಿ ಕೈಗೊಂಡು, ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಡಿಎಚ್​ಒ ತಿಳಿಸಿದ್ದಾರೆ.

ಎಲ್ಲ ಸೌಕರ್ಯಗಳಿರಲಿ: ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದಷ್ಟೇ ಅಲ್ಲದೆ ಉತ್ತಮ ಐಸಿಯು, ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಪ್ರಯೋಗಾಲಯ, ಸ್ಕಾ$ನಿಂಗ್​ ಸೌಕರ್ಯ, ರಕ್ತನಿಧಿ ಕೇಂದ್ರ, ಶವಾಗಾರ, ಪಾರ್ಕಿಂಗ್​, ಕುಡಿಯುವ ನೀರು, ಶೌಚಗೃಹ ಸೇರಿದಂತೆ ಎಲ್ಲ ಸೌಕರ್ಯ ಕಲ್ಪಿಸಬೇಕು ಎಂದೂ ಜನ ಒತ್ತಾಯಿಸಿದ್ದಾರೆ.

ಅಗತ್ಯವಿದ್ದರೆ ಇನ್ನೂ ಅನುದಾನ ತರುವೆ! : ದಶಕಗಳಿಂದಲೂ ತಾಲೂಕು ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳಿಲ್ಲದೆ ರೋಗಿಗಳು ಪರದಾಡುತ್ತಿದ್ದರು. ನನೆಗುದಿಗೆ ಬಿದ್ದಿದ್ದ ಆಸ್ಪತ್ರೆ ಮೇಲ್ದರ್ಜೆರಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, 39 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲಾಗಿದೆ. ಅವಶ್ಯವಿದ್ದಲ್ಲಿ ಮತ್ತಷ್ಟು ಅನುದಾನ ತಂದು, ಅತ್ಯಾಧನಿಕ ಸೌಕರ್ಯ ಕಲ್ಪಿಸಲಾಗುವುದು ಎಂದು ಶಾಸಕ ಎನ್​.ಶ್ರೀನಿವಾಸ್​ ಭರವಸೆ ನೀಡಿದ್ದಾರೆ.

ಗುಣಮಟ್ಟದ ಚಿಕಿತ್ಸೆ ಭರವಸೆ : ನೆಲಮಂಗದಲ್ಲಿ ಬಹುತೇಕ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ಹಾದುಹೋಗಿವೆ. ಹೆಚ್ಚಿನ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಅಗತ್ಯತೆ ಹೆಚ್ಚಿತ್ತು. ಅಲ್ಲದೆ ಕ್ಷೇತ್ರದ ಗ್ರಾಮೀಣಭಾಗದಲ್ಲಿ ಜನ ಆರ್ಥಿವಾಗಿ ಬಡವರಾಗಿದ್ದು, ಹೆರಿಗೆ ಸೇರಿದಂತೆ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಉತ್ತಮ ಲ್ಯಾಬ್​, ಸ್ಕಾ$ನಿಂಗ್​ ಟಕಗಳಿಲ್ಲದ ಕಾರಣ ಖಾಸಗಿ ಪ್ರಯೋಗಾಲಯಗಳಿಗೆ ದುಪ್ಪಟ್ಟು ಬೆಲೆ ಕೊಡಬೇಕಿತ್ತು. ಈಗ ತಾಲೂಕು ಆಸ್ಪತ್ರೆ 100 ಹಾಸಿಗೆ ಸಾಮಾರ್ಥ್ಯದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರುತ್ತಿರುವುದು ಭರವಸೆ ಮೂಡಿಸಿದೆ.