ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಗೋಶಾಲೆಯಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು. ಗೋಶಾಲೆಯ ಸಂಸ್ಥಾಪಕ ಶ್ರೀಪುಖ್ ರಾಜ ಮಹರಾಜ, ಹೂಡಿ ಪಿಳ್ಳಪ್ಪ, ಕಣ್ಣೂರು ಅಶೋಕ್ ಇದ್ದರು.  
ಬೆಂಗಳೂರು ಗ್ರಾಮಾಂತರ

ಬೆಂಕಿಗೆ ಆಹುತಿಯಾದ ಗೋಶಾಲೆಗೆ ಸಹಾಯ ಹಸ್ತ: ಮಾಜಿ ಶಾಸಕ ಅರವಿಂದ ಲಿಂಬಾವಳಿ

ವಿಜಯವಾಣಿ ಸುದ್ದಿಜಾಲ ಮಹದೇವಪುರ: ಹೊಸುರು ಬಂಡೆಯ ಗೋಶಾಲೆಯಲ್ಲಿ ಸಂಭವಿಸಿದ್ದ ಅಗ್ನಿ ದುರಂತ ಸ್ಥಳವನ್ನು ಮಾಜಿ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು, ಗೋ ಪ್ರೇಮಿಗಳು ದುರಂತ ಸ್ಥಳವನ್ನು ಸ್ವಚ್ಚಗೊಳಿಸಿದರು.
ಮಹದೇವಪುರ ಕ್ಷೇತ್ರದ ವ್ಯಾಪ್ತಿಯ ಹೊಸುರು ಬಂಡೆ ಗೋಶಾಲೆಯಲ್ಲಿ ಮಾರ್ಚ್ 17 ರಂದು ಬೆಂಕಿ ಅವಘಡ ಸಂಭವಿಸಿ ಅಪಾರ ಪ್ರಮಾಣದಲ್ಲಿ ಹುಲ್ಲು ಬೆಂಕಿಗೆ ಆಹುತಿಯಾಗಿ ಶೆಡ್ ಶಿಥಿಗೊಂಡು ಅಪಾರ ಪ್ರಮಾಣದಲ್ಲಿ ನಷ್ಟವಾಗಿತ್ತು. ಇದನ್ನು ಮನಗಂಡ ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಶಾಸಕಿ ಮಂಜುಳಾ ಲಿಂಬಾವಳಿ ಗೋಶಾಲೆಗೆ ಭೇಟಿ ನೀಡಿ ಗೋಶಾಲೆಯ ಶೆಡ್ಗಳ ನಿರ್ಮಾಣ ಮಾಡಲು ಬೇಕಾದ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದ್ದರು.
ಅರವಿಂದ ಲಿಂಬಾವಳಿ ಮಾತನಾಡಿ ಶ್ರೀಪುಖ್ ರಾಜ ಮಹರಾಜ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀ ಕೃಷ್ಣ ಗೋಶಾಲೆಯಲ್ಲಿ ಸಾವಿರಕ್ಕೂ ಹೆಚ್ಚು ಹಸುಗಳನ್ನು ಸಾಕುವ ಮೂಲಕ ಗೋಸಂಪತ್ತು ಉಳಿಸುವ ಮಹತ್ತರವಾದ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಪುಣ್ಯದ ಕಾರ್ಯಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆ. ಪೊಲೀಸರು ಅತೀ ಶೀಘ್ರ್ರವಾಗಿ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದು ತಿಳಿಸಿದರು.
ಕಾರ್ಯಕರ್ತರು ಬೆಂಕಿಗೆ ಆಹುತಿಯಾದ ಗೊಧಾಮನ್ನು ಸ್ವಚ್ಛಗೊಳಿಸಿದರು. ಈ ಸಂಧರ್ಭದಲ್ಲಿ ಗೋಶಾಲೆಯ ಸಂಸ್ಥಾಪಕ ಶ್ರೀಪುಖ್ ರಾಜ ಮಹರಾಜ, ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ಕಣ್ಣೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಅಶೋಕ್, ಚನ್ನಸಂದ್ರ ಚಂದ್ರಶೇಕರ್, ಬೊಮ್ಮನೆನಹಳ್ಳಿ ರಾಜೇಶ್, ಕುಮಾರ್ ಮತ್ತಿತರರಿದ್ದರು.
.