Fodder 
ಬೆಂಗಳೂರು ಗ್ರಾಮಾಂತರ

ಕೊರತೆ ಆಧರಿಸಿ ಮೇವು ಬೆಳೆಯಲು ಚಿಂತನೆ

ಶಿವರಾಜ.ಎಂ
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಜೂನ್‌ನಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆಯಾಗಿದ್ದರೂ ಜುಲೈನಲ್ಲಿ ಮಳೆರಾಯ ಮುನಿಸಿಕೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಜಾನುವಾರು ಮೇವು ಕೊರತೆ ಎದುರಾಗಬಹುದು ಎಂಬ ನಿಟ್ಟಿನಲ್ಲಿ ಪಶುಪಾಲನಾ ಇಲಾಖೆ ಜೀ ರಾಮ್ ಜೀ ಯೋಜನೆ ಬಳಸಿಕೊಂಡು ಮೇವು ಬೆಳೆಯುವ ಬಗ್ಗೆ ಚಿಂತನೆ ನಡೆಸಿದೆ.
ಜುಲೈ ಅಂತ್ಯವಾಗಿ ಆಗಸ್ಟ್ ಕಾಲಿಟ್ಟಿದ್ದರೂ ಜಿಲ್ಲೆಯಲ್ಲಿ ಮಳೆರಾಯನ ಸುಳಿವಿಲ್ಲ, ಪ್ರಸ್ತುತ ಪಶುಪಾಲನಾ ಇಲಾಖೆ ಸರ್ವೇಯಂತೆ ಜಿಲ್ಲೆಯಲ್ಲಿ ಸುಮಾರು 41 ವಾರಕ್ಕಾಗುವಷ್ಟು ಮೇವು ದಾಸ್ತಾನು ಇದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಕಳೆದ ವರ್ಷ ಉತ್ತಮ ಮಳೆಯಿಂದ ಜಿಲ್ಲೆಯಲ್ಲಿ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿತ್ತು. ಇದರಿಂದ ಒಣಹುಲ್ಲಿನ ಕೊರತೆ ಎದುರಾಗುವುದಿಲ್ಲ ಎಂಬ ಭರವಸೆ ವ್ಯಕ್ತವಾಗಿದೆ. ಆದರೂ ಆಗಸ್ಟ್‌ನಲ್ಲಿ ವಾಡಿಕೆ ಮಳೆಯೂ ಆಗದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇರಲಿದೆ. ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಸಿದ್ದತೆ ನಡೆಸಿರುವ ರೈತರು ಮಳೆರಾಯನ ಆಗಮನವನ್ನು ನಿರೀಕ್ಷಿಸುತ್ತಿದ್ದಾರೆ. ಆಗಸ್ಟ್‌ನಲ್ಲಿ ವಾಡಿಕೆ ಮಳೆಯಾದರೂ ಮೇವಿನ ಕೊರತೆ ಎದುರಾಗುವುದಿಲ್ಲ. ಇಲ್ಲವಾದರೆ ಮೇವಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಇಲಾಖೆ ನೆರವಿನೊಂದಿಗೆ ಮೇವು ಬೆಳೆಯುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
20 ಎಕರೆಯಲ್ಲಿ ಮೇವು:
ದೊಡ್ಡಬಳ್ಳಾಪುರದ ಬಳಿ ಜಿಲ್ಲಾ ಪಶುಪಾಲನ ಇಲಾಖೆ ವತಿಯಿಂದ ಪ್ರಾಥಮಿಕ ಹಂತದಲ್ಲಿ 20 ಎಕರೆ ವಿಸ್ತೀರ್ಣದಲ್ಲಿ ಹಸಿ ಮೇವು ಬೆಳೆಯುವ ಚಿಂತನೆ ಇದೆ. ಜೀ ರಾಮ್ ಜೀ ಯೋಜನೆಯಡಿ ಕೂಲಿ ಕಾರ್ಮಿಕರ ಬಳಕೆ ಮೂಲಕ ಮೇವು ಬೆಳೆದು ಹೈನುಗಾರರಿಗೆ ವಿತರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಇಲಾಖೆ ವತಿಯಿಂದ ಬೇಕಾದ ಅಗತ್ಯ ನೆರವು ಸಿಗಲಿದೆ. ಇದರೊಂದಿಗೆ ಮೇವಿನ ಕಿಟ್ ವಿತರಣೆ, ಮೇವು ಬ್ಯಾಂಕ್ ಮತ್ತಿತರ ಕ್ರಮಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಂಎ್ನಿಂದ ಮೇವಿನ ಕಿಟ್:
ಈ ಸಾಲಿನಲ್ಲಿ ಈಗಾಗಲೇ ಕೆಎಂಎ್ ವತಿಯಿಂದ ಹೈನುಗಾರಿಗೆ ಮೇವಿನ ಕಿಟ್ ವಿತರಿಸಿರುವುದರಿಂದ ಹಲವು ರೈತರು ಕೊಳವೆಬಾವಿ ಆಶ್ರಯದಲ್ಲಿ ಮೇವು ಬೆಳೆಯುತ್ತಿದ್ದು ಸದ್ಯದ ಪರಿಸ್ಥಿತಿಯಲ್ಲಿ ಮೇವಿನ ಕೊರತೆ ಎದುರಾಗುವುದಿಲ್ಲ ಎಂಬ ನಿರೀಕ್ಷೆ ಇದೆ. ಪಶುಪಾಲನಾ ಇಲಾಖೆ ವತಿಯಿಂದ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇವು ದಾಸ್ತಾನಿನ ಬಗ್ಗೆ ಸರ್ವೆ ನಡೆಯುತ್ತಿದ್ದು ಯಾವುದೇ ಆತಂಕವಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ 71 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲು ಉದ್ದೇಶಿಸಲಾಗಿತ್ತು. ಆದರೆ ಮಳೆ ಕೊರತೆಯಿಂದ ಸುಮಾರು 3 ಸಾವಿರ ಹೆಕ್ಟೇರ್‌ನಲ್ಲಷ್ಟೇ ರಾಗಿ ಬಿತ್ತನೆಯಾಗಿದೆ ಎಂದು ಅಂದಾಜಿಸಲಾಗಿದೆ.
ಬರ ೋಷಣೆಯಾದರೆ ಮುಂದಿನ ಕ್ರಮ:
ರಾಜ್ಯ ಸರ್ಕಾರ ಬರ ೋಷಣೆ ಪಟ್ಟಿಯಲ್ಲಿ ಗ್ರಾಮಾಂತರ ಜಿಲ್ಲೆ ಇನ್ನೂ ಸೇರ್ಪಡೆಯಾಗಿಲ್ಲ. ಒಂದು ವೇಳೆ ಗ್ರಾಮಾಂತರ ಜಿಲ್ಲೆಯೂ ಬರಪೀಡಿತ ಎಂದು ೋಷಣೆಯಾದರೆ ಹೊರ ಜಿಲ್ಲೆಗಳಿಂದ ಒಣ ಮೇವು ಖರೀದಿಸುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಮೇವಿನ ಬವಣೆ ನೀಗಿಸುವ ಕಸರತ್ತು:
2017 ರ ಸಂದರ್ಭದಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ ಸತತ ಮೂರು ವರ್ಷ ಮಳೆ ಕೈಕೊಟ್ಟು ತೀವ್ರ ಬರಗಾಲದ ಸನ್ನಿವೇಶ ನಿರ್ಮಾಣವಾಗಿತ್ತು. ಈ ವೇಳೆ ಒಣಹುಲ್ಲಿಗೆ ಮೊರೆ ಹೋಗಬೇಕಾಗಿತ್ತು. ಅಂಥ ಸಂದರ್ಭದಲ್ಲಿ ಹೊರ ಜಿಲ್ಲೆಗಳಿಂದ ಒಣ ಹುಲ್ಲು ಆಮದು ಮಾಡಿಕೊಳ್ಳಲಾಗಿತ್ತು. ಪಶುಪಾಲನಾ ಇಲಾಖೆ ವತಿಯಿಂದ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಗೋಶಾಲೆಗಳನ್ನು ಆರಂಭಿಸಿ ಮೇವಿನ ಕೊರತೆ ನೀಗಿಸುವ ಕಸರತ್ತು ನಡೆದಿತ್ತು.
ಕಳೆದ ವರ್ಷ ಉತ್ತಮ ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 69 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬೆಳೆಯಲಾಗಿತ್ತು. ಇದರಿಂದ ಒಣಹುಲ್ಲಿಗೆ ಈ ಬಾರಿ ಹೆಚ್ಚು ಸಮಸ್ಯೆ ಕಾಡುವುದಿಲ್ಲ. ಇಲಾಖೆ ಸರ್ವೆಯಂತೆ ಈ ಬಾರಿ 41 ವಾರಕ್ಕಾಗುವಷ್ಟು ಮೇವಿನ ದಾಸ್ತಾನು ಇರುವ ಬಗ್ಗೆ ಅಂದಾಜಿಸಲಾಗಿದೆ. ಸನ್ನಿವೇಶ ಗಮನಿಸಿ ಇಲಾಖೆ ವತಿಯಿಂದ ದೊಡ್ಡಬಳ್ಳಾಪುರದ ಬಳಿ ಜೀ ರಾಮ್ ಜೀ ಯೋಜನೆಯಡಿ ಹಸಿ ಮೇವು ಬೆಳೆಯುವ ಚಿಂತನೆಯೂ ಇದೆ. ಸರ್ಕಾರದ ಸೂಚನೆಯಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು.
ರವಿಕುಮಾರ್, ಉಪನಿರ್ದೇಶಕ ಪಶುಪಾಲನೆ ಇಲಾಖೆ ಬೆಂ.ಗ್ರಾಮಾಂತರ