ಸೋಂಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂವು (ವಿಎಸ್‌ಎಸ್‌ಎನ್) ರೈತರಿಗೆ ಸಮಪರ್ಕವಾಗಿ ರಸಗೊಬ್ಬರ ವಿತರಣೆ ವಾಡುತ್ತಿಲ್ಲ ಜತೆಗೆ ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಅಧಿಕ ಬೆಲೆಗೆ ವಾರಾಟ ವಾಡುತ್ತಿದ್ದಾರೆ.
ರೈತರಿಗೆ ಸಕಾಲಕ್ಕೆ ರಸಗೊಬ್ಬರ ವಿತರಿಸದೇ ಗಂಟೆಗಟ್ಟಲೇ ರಸಗೊಬ್ಬರಕ್ಕಾಗಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ, ಸಂಘದವರು ಬೇಕಾದವರಿಗೆ ಒಳಗೊಳಗೆ ಹೆಬ್ಬೆಟ್ಟು ಹಾಗೂ ಎಫ್‌ಐಡಿ ತೆಗೆದುಕೊಂಡು ಗೊಬ್ಬರ ವಿತರಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯ ರೈತರಿಂದ ವ್ಯಕ್ತವಾಗುತ್ತಿದೆ. ರಸಗೊಬ್ಬರ ಖರೀದಿಗೆ ಹೋದ ರೈತರಿಗೆ ಸುಖಾಸುಮ್ಮನೆ ಸಂಜೆ ಬನ್ನಿ, ನಾಳೆ ಬನ್ನಿ ಎಂದು ಸಾಗಿಹಾಕುವ ಕೆಲಸ ಮಾಡುತ್ತಿದ್ದಾರೆ ಮಾರನೇ ದಿನ ಹೋದರೂ ಇದೇ ಸಿದ್ದ ಉತ್ತರ ಬರುತ್ತಿದೆ ಎಂಬುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ರೈತರು ಯೂರಿಯ ಕೊಳ್ಳಲು ಎಫ್‌ಐಡಿ ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ. ಎಫ್‌ಐಡಿ ಕೊಟ್ಟ ರೈತರಿಗೆ 45 ಕೆಜಿ ತೂಕದ ಒಂದು ಮೂಟೆಗೆ 267 (ಜಿಎಸ್‌ಟಿ ಸೇರಿ) ತೆಗೆದುಕೊಳ್ಳಬೇಕು. ಆದರೆ ಇಲ್ಲಿ 300 ರೂಪಾಯಿ ತೆಗೆದುಕೊಳ್ಳುತ್ತಾರೆ. ಎ್ಐಡಿ 1, 350ರೂ. ನಿಗದಿಯಾಗಿದ್ದರೆ ಇಲ್ಲಿ 1,400ರೂ.ತೆಗೆದುಕೊಳ್ಳುತ್ತಾರೆ. ಯೂರಿಯಾ ಮೇಲೆ ಮೂಟೆಗೆ 34 ಹಾಗೂ ಎಪ್‌ಐಡಿ ಮೇಲೆ 50 ರೂ.ಹೆಚ್ಚಿಗೆ ಹಣ ಪಡೆಯುತ್ತಿದ್ದು, ಅದಕ್ಕೆ ಬಿಲ್ ಸಹ ಕೊಡುವುದಿಲ್ಲ. ಹೆಚ್ಚುವರಿ ಹಣ ಎಲ್ಲಿ ಹೋಗುತ್ತಿದೆ? ಇದು ಸರ್ಕಾರಕ್ಕೂ ಸೇರುವುದಿಲ್ಲ. ಯಾರ ಜೇಬು ಸೇರುತ್ತಿದೆ.
ಗೊಬ್ಬರ ಸಿಗುವ ಖಾತ್ರಿ ಇಲ್ಲ:
ಬೆಳಗ್ಗೆ ಹೋದರೆ ಸಂಜೆ ಬನ್ನಿ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಸಂಜೆ ವೇಳೆ ಹೋದರೆ ಸರತಿ ಸಾಲು ಉದ್ದ ಇರುತ್ತದೆ. ಆದರೂ ಸರದಿ ಸಾಲಿನಲ್ಲಿ ಕಾದು ನಿಂತರೆ ಕೆಲಹೊತ್ತಿನ ಬಳಿಕ ಸರ್ವರ್ ಸಮಸ್ಯೆಯಾಗಿದೆ ನಾಳೆ ಬನ್ನಿ ಎಂದು ಕಳುಹಿಸುತ್ತಿದ್ದಾರೆ. ಮತ್ತೆ ಬೆಳಗ್ಗೆ ಕೆಲಸ ಕಾರ್ಯ ಬಿಟ್ಟು ಇಲ್ಲಿಗೆ ಬಂದು ಕಾಯಬೇಕಾದ ಸ್ಥಿತಿ ಇದೆ ಆದರೂ ಅಂದಿನ ದಿನವೂ ಗೊಬ್ಬರ ಸಿಗುತ್ತದೆ ಎಂಬ ಖಾತ್ರಿ ಇಲ್ಲದಂತಾಗಿದೆ ಎಂದು ರೈತರು ಅಲವತ್ತುಗೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು, ಮಹಿಳೆಯರು, ವೃದ್ದರೂ ರಸಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ಕಾಯಬೇಕಾಗಿದೆ. ಬಂದಾಗ ಗೊಬ್ಬರ ಕೊಟ್ಟರೆ ಪರವಾಗಿಲ್ಲ ಆದರೆ ಸಂಜೆ ಬನ್ನಿ, ನಾಳೆ ಬನ್ನಿ ಅಂತ ಅಲೆದಾಡಿಸುತ್ತಿದ್ದಾರೆ. ಕೆಲಸ ಬಿಟ್ಟು, ಊಟ ತಿಂಡಿ ಬಿಟ್ಟು, ಹಣ ಖರ್ಚು ವಾಡಿಕೊಂಡು ಒಂದು ಮೂಟೆ ಗೊಬ್ಬರಕ್ಕೆ ಕಾಯಬೇಕು. ಸಿಕ್ಕರೂ ಆಯ್ತು, ಸಿಗದಿದ್ದರೂ ಆಯ್ತು ಎನ್ನುವಂತ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಅನೇಕ ರೈತ ಮಹಿಳೆಯರು ಅಳಲು ತೋಡಿಕೊಳ್ಳುತ್ತಿದ್ದಾರೆ.ಸೋಂಪುರ ವಿಎಸ್‌ಎಸ್‌ಎನ್ ಸಿಇಒ ಭಾನುಪ್ರಕಾಶ್ ಅವರು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ರೈತರು ಏನಾದರೂ ಕೇಳಿದರೆ ಬೇಕಾಬಿಟ್ಟಿಯಾಗಿ ವಾತಾಡುತ್ತಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಸಹಾಯಧನದಲ್ಲಿ ರೈತರ ಅನುಕೂಲಕ್ಕೆ ಗೊಬ್ಬರ ಕೊಡಬೇಕು. ಇತ್ತೀಚಿನ ವರ್ಷಗಳಲ್ಲಿ ಸೋಂಪುರ ಹೋಬಳಿಯಲ್ಲಿ ರೈತರಿಗೆ ಕಷಿ ಭೂಮಿ ಸಿಗುವುದೇ ಕಷ್ಟ ಎನ್ನುವಂತಾಗಿದೆ. ಅದರ ನಡುವೆಯೂ ರೈತರು ಕಷಿ ವಾಡಲು ಉತ್ಸುಕತೆಯಲ್ಲಿದ್ದಾರೆ. ಅಂತಹವರಿಗೆ ಗೊಬ್ಬರ ಕೊಡಲು ವಿಎಸ್ ಎಸ್ ಎನ್ ಅಧಿಕಾರಿ ಮತ್ತು ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ.
-ರೇಣುಕೇಶ್ವರ, ಎಡೆಹಳ್ಳಿಯ ರೈತ