ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಹಮ್ಮಿಕೊಂಡಿದ್ದ ಸರ್ ಸಿ.ವಿ ರಾಮನ್ ಪುಸ್ತಕ ಓದಿ ಬಹುಮಾನ ಗೆಲ್ಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಕಾಸ ಪ್ರಶಿಕ್ಷಣ ಕೇಂದ್ರದ ಡಾ.ಎ.ಒ.ಆವಲಮೂರ್ತಿ, ಕಾರ್ಯಕ್ರಮದ ಸಂಚಾಲಕ ವೆಂಕಟರಾಜು ಇದ್ದರು.
ದೊಡ್ಡಬಳ್ಳಾಪುರ: ದೈನಂದಿನ ಜೀವನದಲ್ಲಿ ವಿಜ್ಞಾನದ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸಬೇಕಾಗಿದೆ ಎಂದು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಕೆ.ಮಹಾಲಿಂಗಯ್ಯ ಹೇಳಿದರು.
ನಗರದ ಕನ್ನಡ ಜಾಗೃತ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಪರಿಷತ್ತು ಮತ್ತು ವಿಕಾಸ ಪ್ರಶಿಕ್ಷಣ ಕೇಂದ್ರದಿಂದ ಹಮ್ಮಿಕೊಂಡಿದ್ದ ಸರ್ ಸಿ.ರಾಮನ್ ಪುಸ್ತಕ ಓದಿ ಬಹುಮಾನ ಗೆಲ್ಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಸರ್ ಸಿ.ವಿ.ರಾಮನ್ ಅವರು ಮಹಾನ್ ವಿಜ್ಞಾನಿಯಷ್ಟೇ ಅಲ್ಲ, ಅತ್ಯುನ್ನತ ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯ ಹೊಂದಿದ್ದ ವ್ಯಕ್ತಿ. ವಿದ್ಯಾರ್ಥಿಗಳಲ್ಲಿ ಮತ್ತು ಯುವಜನತೆಯಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಕುತೂಹಲ ಬೆಳೆಸಬೇಕು. ದೇಶದ ವೈಜ್ಞಾನಿಕ ಪ್ರಗತಿ ಮತ್ತು ವಿಜ್ಞಾನಿಗಳ ಸಾಧನೆ ಗೌರವಿಸಬೇಕು ಎಂದರು.
ಕನ್ನಡಪರ ಹಿರಿಯ ಹೋರಾಟಗಾರ ತ.ನ. ಪ್ರಭುದೇವ್ ಮಾತನಾಡಿ, ಪುಸ್ತಕ ಓದಿ ಬಹುಮಾನ ಗೆಲ್ಲಿ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಪುಸ್ತಕ ಪ್ರೀತಿ ಬೆಳೆಸಲು ಸಹಕಾರಿಯಾಗಿದೆ. ಪುಸ್ತಕಗಳು ಜೀವನವನ್ನು ಪ್ರೇರೇಪಿಸುವ, ಶಿಕ್ಷಣ ನೀಡುವ ಮತ್ತು ಪರಿವರ್ತಿಸುವ ಶಕ್ತಿ ಹೊಂದಿವೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪ್ರತಿ ವರ್ಷ ನವೆಂಬರ್ನಲ್ಲಿ ವಿವಿಧ ಶಾಲಾ ಕಾಲೇಜುಗಳಲ್ಲಿನಡೆಯುವ ಸಾಹಿತ್ಯ, ವಿಜ್ಞಾನ ಮತ್ತು ಸಂಸತಿ ಸಮಾಗಮ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದರು.
ಶಿಕ್ಷಕ ರಮೇಶ್ ಪೂಜಾರಿ ಮಾತನಾಡಿ, "ಕನ್ನಡ ಪುಸ್ತಕ ಓದಿ ಬಹುಮಾನ ಗೆಲ್ಲಿ' ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕನ್ನಡ ಓದುವ ಹವ್ಯಾಸವನ್ನು ಉತ್ತೇಜಿಸುತ್ತದೆ. ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುತ್ತದೆ. ಓದುಗರಲ್ಲಿ ಜ್ಞಾನ, ಕಲ್ಪನಾಶಕ್ತಿ ಮತ್ತು ಜೀವನದ ದೃಷ್ಟಿಕೋನವನ್ನು ವಿಸ್ತರಿಸುವ ಹವ್ಯಾಸ ಪುಸ್ತಕವೇ ಆಗಿದೆ. ಪುಸ್ತಕ ಮನಸ್ಸಿಗೆ ಸಂತೋಷ, ನೆಮ್ಮದಿ ಮತ್ತು ಹೊಸ ಲೋಕಗಳ ಪರಿಚಯ ನೀಡುತ್ತದೆ ಎಂದು ಹೇಳಿದರು.
ಕನ್ನಡ ಜಾಗೃತ ಪರಿಷತ್ತು ಕಾರ್ಯದರ್ಶಿ ಡಿ.ಪಿ.ಆಂಜನೇಯ, ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಪದಾಧಿಕಾರಿಗಳಾದ ಜಿ.ಸುರೇಶ್, ಕೋದಂಡರಾಮ್, ಎಚ್.ಎನ್. ಪ್ರಕಾಶ್, ಸಿ.ಅಣ್ಣಯ್ಯ, ರಂಗಸ್ವಾಮಯ್ಯ, ಜಿ.ಸಿ. ಶಿವಕುಮಾರ್, ಸೂರ್ಯನಾರಾಯಣ್, ಗಿರೀಶ್, ಲಕ್ಷಿ$್ಮಕಾಂತಮ್ಮ, ಪ್ರಸನ್ನ, ಹಾಡೋನಹಳ್ಳಿ ಗೋವಿಂದರಾಜು ಇತರರು ಇದ್ದರು.