Encroachment in residential areas!
ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರಸಭೆ ವ್ಯಾಪ್ತಿಯ ಜನಸವತಿ ಬಡಾವಣೆಗಳಲ್ಲಿ ರಸ್ತೆ, ಉದ್ಯಾನವನ ಹಾಗೂ ಸಿಎ (ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲು) ಜಾಗಗಳ ಒತ್ತುವರಿ ಅವ್ಯಾಹತವಾಗಿ ನಡೆಯುತ್ತಿದ್ದರೂ ನಗರಸಭೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ನಗರಸಭೆ ವ್ಯಾಪ್ತಿಯ ಅರಿಶಿನಕುಂಟೆ, ಆದರ್ಶನಗರ, ಬಿನ್ನಮಂಗಲ ಬಸವಣಹಳ್ಳಿ, ವಿಶ್ವೇಶ್ವರಪುರ ವ್ಯಾಪ್ತಿಯ ಹಾಗೂ ನಗರದ ಪ್ರಮುಖ ಜನವಸತಿ ಬಡಾವಣೆಗಳಲ್ಲಿನ ಮನೆ ನಿರ್ಮಿಸಿಕೊಂಡಿರುವ ವಾಲೀಕರು ಮನೆಯ ಮುಂಭಾಗದ ರಸ್ತೆಗಳ ಅರ್ಧದಷ್ಟು ಜಾಗವನ್ನು ಒತ್ತುವರಿ ವಾಡಿಕೊಂಡಿದ್ದು ತಮ್ಮ ಕಾರುಗಳ ನಿಲುಗಡೆ ತಾಣವಾಗಿಸಿಕೊಂಡಿದ್ದಾರೆ. ಕೆಲವರು ಹೂವಿನ ಗಿಡಗಳನ್ನು ಬೆಳಸಿ ಕಾಪೌಂಡ್ ಹಾಕಿಕೊಂಡಿದ್ದಾರೆ. ಇನ್ನೂ ಕೆಲವರು ಜನವಸತಿ ಬಡಾವಣೆಯಲ್ಲಿನ ಅಗಲವಾದ ರಸ್ತೆಯಲ್ಲಿನ ನಿವೇಶನಗಳ ವಾಲೀಕರು ವಾಣಿಜ್ಯ ಮಳಿಗೆಗಳಿಗೆ ಬಾಡಿಗೆ ನೀಡಿದ್ದು ಅಂಗಡಿ ವಾಲೀಕರು ರಸ್ತೆಯ ಜಾಗದಲ್ಲಿ ತರಕಾರಿ, ದಿನಸಿ ವಾರಾಟ ವಾಡುತ್ತಿದ್ದರೂ ನಗರಸಭೆ ಅಧಿಕಾರಿಗಳ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ.
ಪಾರ್ಕ್ ಮತ್ತು ಸಿಎ ಜಾಗ ವಾರಾಟ:
ನಗರಸಭೆ ವ್ಯಾಪ್ತಿಯಲ್ಲಿ ನಿರ್ವಾಣಗೊಂಡಿರುವ ಬಹುತೇಕ ವಸತಿ ಬಡಾವಣೆಗಳಲ್ಲಿ ಉದ್ಯಾನವನ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಜಾಗವನ್ನು ಮೀಸಲಿಡಲಾಗಿರುತ್ತದೆ. ಅಂತಹ ಜಾಗಗಳ ಬಗ್ಗೆ ವಾಹಿತಿ ಪಡೆದುಕೊಳ್ಳುವ ಕೆಲವರು ನಗರಸಭೆ ಅಧಿಕಾರಿಗಳಿಗೆ ಬೆದರಿಕೆ ಹಾಕಿ ನಕಲಿ ದಾಖಲೆಗಳನ್ನು ಸಷ್ಠಿಸಿ ಅಕ್ರಮವಾಗಿ ವಾರಾಟ ವಾಡಿದ್ದರೂ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮವಹಿಸಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ದೂರಿಗೂ ಸ್ಪಂದಿಸದ ಅಧಿಕಾರಿಗಳು:
ಜನವಸತಿ ಬಡಾವಣೆಗಳಲ್ಲಿನ ರಸ್ತೆಗಳ ಅತಿಕ್ರಮಣ, ಪಾರ್ಕ್, ಸಿಎ ಸೈಟ್ ಅಕ್ರಮ ಪರಭಾರೆ ಕುರಿತಾಗಿ ಕೆಲ ಸಂಟನೆಗಳು ಹಾಗೂ ಖಾಸಗಿ ವ್ಯಕ್ತಿಗಳು ದಾಖಲೆಗಳ ಜತೆಗೆ ಪೊಟೋ ಸಹಿತ ದೂರು ನೀಡಿದ್ದರೂ ಇದುವರೆಗೂ ಅಧಿಕಾರಿಗಳು ಯಾವುದೇ ಪ್ರಯೋಜನವಾಗಿಲ್ಲ. ಜತೆಗೆ ನಕಲಿ ದಾಖಲೆ ಸಷ್ಠಿಸಿ ಅಕ್ರಮ ಪರಭಾರೆ ವಾಡಿಕೊಂಡಿರುವ ಬಗ್ಗೆ ಕ್ರಮವಹಿಸದ ನಗರಸಭೆ ಅಧಿಕಾರಿಗಳ ವಿರುದ್ಧ ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾಧೀಕಾರಿಗಳಿಗೆ ದೂರು ನೀಡಲು ಅರ್ಜಿದಾರರು ತೀರ್ವಾನಿಸಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ಪ್ರೀ ಸ್ಕೂಲ್‌ಗಳ ಸಂಖ್ಯೆ ಹೆಚ್ಚಾಗುತ್ತಿವೆ. ಶಿಕ್ಷಣ ಇಲಾಖೆಯ ನಿಯಂತ್ರಣಕ್ಕೆ ಬಾರದ ಪ್ರೀ ಸ್ಕೂಲ್‌ಗಳನ್ನು ಜನವಸತಿ ಬಡಾವಣೆಗಳಲ್ಲಿ ತೆರೆಯಲಾಗುತ್ತಿದೆ. ರಸ್ತೆಯ ಜಾಗವನ್ನು ಒತ್ತುವರಿ ವಾಡಿಕೊಂಡು ಕಾಪೌಂಡ್ ನಿರ್ವಾಣ ವಾಡಿಕೊಂಡು ಮಕ್ಕಳು ಆಡವಾಡಲು ಬಳಕೆ ವಾಡಿಕೊಳ್ಳುತ್ತಿದ್ದರೂ ಅಧಿಕಾರಿಗಳ ಗಮನಹರಿಸದಿರುವುದು ಸಾರ್ವಜನಿಕರ ಚರ್ಚೆಗೆ ಎಡೆವಾಡಿಕೊಟ್ಟಿದೆ.
ಹೀಗೆ ನಗರಸಭೆ ವ್ಯಾಪ್ತಿಯ ಜನವಸತಿ ಬಡಾವಣೆಗಳಲ್ಲಿನ 30/40 ವಿಸ್ತೀರ್ಣದ ನಿವೇಶಗಳಲ್ಲಿ ಮೂರು ಅಂತಸ್ತು ಕಟ್ಟುವ ಮನೆ ವಾಲೀಕರು ವಾಹನಗಳ ಜತೆಗೆ ಬಾಡಿಗೆದಾರರ ವಾಹನಗಳ ನಿಲುಗಡೆಗೂ ತಮ್ಮದೇ ಜಾಗದಲ್ಲಿ ಪಾರ್ಕಿಂಗ್ ಜಾಗ ಮೀಸಲಿರಿಸಿಕೊಂಡು ಬಿಲ್ಡಿಂಗ್ ನಿರ್ವಾಣ ವಾಡಬೇಕೆಂಬ ಕಟ್ಟುನಿಟ್ಟಿನ ನಿಯಮ ರೂಪಿಸಿದಲ್ಲಿ ರಸ್ತೆ ಜಾಗ ಒತ್ತುವರಿ ವಾಹನಸವಾರರಿಗೆ ಕಿರಿಕಿರಿಯಾಗುವುದು ತಪ್ಪಿಸಬಹುದಾಗಿದೆ ಎಂಬು ಸಾರ್ವಜನಿಕರ ಸಲಹೆಯಾಗಿದೆ.
ಮನೆಯ ಮುಂಭಾಗದ ರಸ್ತೆಯ ಒತ್ತುವರಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತೆರವು ವಾಡಬೇಕು. ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ಅನುವು ವಾಡಿಕೊಡಬೇಕು ಇಲ್ಲವಾದಲ್ಲಿ ರಸ್ತೆ ಜಾಗ ಒತ್ತುವರಿ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗುವುದು.
ವೆಂಕಟೇಶ್, ಅರಿಶಿನಕುಂಟೆ ನಿವಾಸಿ