Employment in one's own village 
ಬೆಂಗಳೂರು ಗ್ರಾಮಾಂತರ

ವಲಸೆ ತಪ್ಪಿಸಲು ಸ್ವಗ್ರಾಮದಲ್ಲೇ ಉದ್ಯೋಗ

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಬರದ ಕಾರಣದಿಂದ ಕೃಷಿ ಚಟುವಟಿಕೆಯೂ ನಡೆಯದೇ ಸ್ಥಳಿಯವಾಗಿ ಉದ್ಯೋಗವಕಾಶ ಸಿಗದೆ ಗ್ರಾಮೀಣ ಜನರು ಉದ್ಯೋಗ ಅರಸಿ ವಲಸೆ ಹೋಗುವುದನ್ನು ತಪ್ಪಿಸಲು ಸರ್ಕಾರ ಉದ್ಯೋಗ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿಯೂ ಆ.15ರಿಂದ ಜಾಬ್​ ಕಾರ್ಡ್​ ನೋಂದಣಿ ಅಭಿಯಾನಕ್ಕೆ ಜಿಲ್ಲಾಡಳಿತ ಚಾಲನೆ ನೀಡಿದೆ.
ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದರಿಂದ ಕೃಷಿ ಚಟುವಟಿಕೆಗಳು ಮಕಾಡೆ ಮಲಗಿವೆ, ಸ್ಥಳಿಯವಾಗಿಯೂ ಯಾವುದೇ ಕೂಲಿ ಕೆಲಸಗಳೂ ಲಭ್ಯವಿಲ್ಲದಂತಾಗಿದೆ, ಇದರಿಂದ ಗ್ರಾಮೀಣ ಜನರ ಜೀವನೋಪಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ, ಈ ಹಿನ್ನೆಲೆಯಲ್ಲಿ ಸ್ಥಳಿಯವಾಗಿ ಉದ್ಯೋಗ ಅವಕಾಶಗಳನ್ನು ವಿಬಿ ಜೀ ರಾಮ್​ಜಿ ಯೋಜನೆಯನಡಿ ಸ್ವಗ್ರಾಮದಲ್ಲೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ದ್ಯೋಗ ಅರಸಿ ನಗರ ಪ್ರದೇಶಗಳತ್ತ ವಲಸೆ ಹೋಗುವುದನ್ನು ತಡೆಯಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಿಬಿ&ಜಿ ರಾಮ್​ ಜಿ ಯೋಜನೆಯಡಿಯಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಜಾಬ್​ ಕಾರ್ಡ್​ ನೋಂದಣಿ ಮೇಳವನ್ನು ಜಿಲ್ಲೆಯಾದ್ಯಂತ ಆಯೋಜಿಸಲಾಗಿದೆ. ಗ್ರಾಮೀಣ ಪ್ರದೇಶದ ಅರ್ಹ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಕಸಿತ ಭಾರತ&ಗ್ಯಾರಂಟಿ ಫಾರ್​ ರೋಜ್ಗಾರ್​ ಆ್ಯಂಡ್​ ಆಜೀವಿಕಾ ಮಿಷನ್​& (ವಿಬಿ&ಜಿ ರಾಮ್​ ಜಿ) ಯೋಜನೆಯಡಿ ಜಾಬ್​ ಕಾರ್ಡ್​ ನೋಂದಣಿ ಮೇಳ ಆಯೋಜಿಸಲಾಗಿದೆ.
1 ತಿಂಗಳ ಅಭಿಯಾನ:
ನೋಂದಾಯಿತ ಹಾಗೂ ಇಕೆವೈಸಿ ಪೂರ್ಣಗೊಂಡಿರುವ ಸಕ್ರಿಯ ಕುಟುಂಬಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಹಾಗೂ ಪ್ರತಿದಿನ ಮಾನವ ದಿನಗಳನ್ನು ಸೃಜಿಸುವ ಮೂಲಕ ಯೋಜನೆಯಡಿಯಲ್ಲಿ ಮಾನವ ದಿನಗಳ ಸೃಜನೆಯ ಗುರಿ ಸಾಸಲು ಆ.15 ರಿಂದ ಸೆ.15ರವರೆಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಬ್​ ಕಾರ್ಡ್​ ಮೇಳಕ್ಕೆ ಪಂಚಾಯತ್​ ರಾಜ್​ ಇಲಾಖೆ ಚಾಲನೆ ನೀಡಿದೆ.
ಜಲಸಂರಕ್ಷಣೆ, ಅಂತರ್ಜಲ ಮರುಪೂರ್ಣ:
ವಿಬಿ ಜಿ ರಾಮ್​ ಜಿ ಯೋಜನೆಯಡಿ ಲಭ್ಯವಿರುವ ಅಕುಶಲ ಕೆಲಸ ಹಾಗೂ ವೈಯಕ್ತಿಕ ಸವಲತ್ತುಗಳ ಬಗ್ಗೆ,ವ್ಯಾಪಕ ಜಾಗೃತಿ ಮೂಡಿಸಿ, ಗ್ರಾಮೀಣ ಭಾಗದ ದುರ್ಬಲ ವರ್ಗದ ಜನರ ಭಾಗವಹಿಸುವಿಕೆ ಹೆಚ್ಚಿಸಲು ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ ಕನಿಷ್ಟ ಮಾನವ ದಿನಗಳಂತೆ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಮೂಲಕ ಅವರ ಅರ್ಥಿಕ ಜೀವನೋಪಾಯ ಭದ್ರತೆ ಕಾಯ್ದುಕೊಳ್ಳಲು ಅಗತ್ಯ ಕ್ರಮವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಲಸಂರಣೆ, ಅಂತರ್ಜಲ ಮರುಪೂರಣ ಹಾಗೂ ದೀರ್ಕಾಲೀನ ಜೀವನೋಪಾಯಕ್ಕೆ ನೆರವಾಗುವ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಅನುಷ್ಠಾನಗೊಳಿಸಲಾಗುತ್ತದೆ. ಈ ಯೋಜನೆಯ ಮೂಲಕ ಸ್ವಗ್ರಾಮದಲ್ಲೇ ಉದ್ಯೋಗಾವಕಾಶ ಕಲ್ಪಿಸುವ ಪ್ರಯತ್ನ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವ್ಯಾವ ಕಾಮಗಾರಿಗೆ ಆದ್ಯತೆ?
ವಿಶೇಷ ಜಾಬ್​ ಕಾರ್ಡ್​ ಅಭಿಯಾನದಲ್ಲಿ ರಜಮೀನಿನಲ್ಲಿ ಮಳೆ ನೀರು ಸಂರಣೆಗಾಗಿ ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 10 ಫಲಾನುಭವಿಗಳಿಗೆ ಕೃಷಿ ಹೊಂಡ, ತೆರೆದ ಬಾವಿ, ಕೊಳವೆ ಬಾವಿ ಮರುಪೂರಣ ಟಕ ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 5 ಫಲಾನುಭವಿಗಳಿಗೆ ಜಾನುವಾರು ಶೆಡ್​ ನಿರ್ಮಿಸಿಕೊಳ್ಳಲು ಆದ್ಯತೆ ನೀಡುವುದು. ಸಾಂಪ್ರದಾಯಿಕ ಜಲಮೂಲಗಳು, ನಾಲಾಗಳಲ್ಲಿ ತಡೆಗೋಡೆಗಳ ನಿರ್ಮಾಣ, ಕಡಿಮೆ ಇಳುವರಿ ಇರುವ ಕುಡಿಯುವ ನೀರಿನ ಕೊಳವೆ ಬಾವಿಗಳ ಸುತ್ತ ಮರುಪೂರಣ ಟಕ ನಿರ್ಮಾಣ ಕಾಮಗಾರಿಗಳಿಗೆ ಆದ್ಯತೆ ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಸಕ್ರಿಯಗೊಳಿಸಲು ಪ್ರಯತ್ನ
ಮನರೇಗಾ ಯೋಜನೆಯಡಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 1.50ಲ ಮಂದಿ ಕಾರ್ಮಿಕರು ಉದ್ಯೋಗ ಖಾತರಿಗೆ ನೋಂದಣಿ ಮಾಡಿಸಿಕೊಂಡಿದ್ದರು. ಇದರಲ್ಲಿ 78ಸಾವಿರದವರೆಗೂ ಉದ್ಯೋಗಾಸಕ್ತರು ಸಕ್ರಿಯವಾಗಿದ್ದು, ಉಳಿದಂತೆ ಕೆಲವರು ಕೆಲಸದಲ್ಲಿ ಇನ್ನೂ ತೊಡಗಿಸಿಕೊಂಡಿಲ್ಲ. ಇದರಿಂದ ಎಲ್ಲ ನೋಂದಾಯಿತ ಕಾರ್ಮಿಕರನ್ನು ಸಕ್ರಿಯಗೊಳಿಸಲು ಪ್ರಯತ್ನಿಸಲಾಗುತ್ತಿದೆ.
ಗ್ರಾಮಾಂತರ ಜಿಲ್ಲೆಯ ಎಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆ.15ರಿಂದ ಸೆ
15ರವರೆಗೆ ಜಾಬ್​ ಕಾರ್ಡ್​ ಮೇಳ ಆಯೋಜನೆಗೆ ಸರ್ಕಾರ ಸೂಚನೆ ನೀಡಿದ್ದು, ಇದರನ್ವಯ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಅಭಿಯಾನದ ಪ್ರಮುಖ ಉದ್ದೇಶಗಳು ಮತ್ತು ಅಭಿಯಾನದಡಿ ವಿಬಿ & ಜಿ ರಾಮ್​ ಜಿ ಯೋಜನೆಯಡಿ ಅನುಮತಿಸಿದ 318 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
> ಡಾ.ವಾಸಂತಿ ಅಮರ್​, ಜಿಪಂ ಸಿಇಒ, ಬೆಂ.ಗ್ರಾಮಾಂತರ.