election 
ಬೆಂಗಳೂರು ಗ್ರಾಮಾಂತರ

ಅಧ್ಯಕ್ಷರಾಗಿ ವೀರ ಚಿಕ್ಕಯ್ಯ ಅವಿರೋಧ ಆಯ್ಕೆ

ಶಿವರಾಜ.ಎಂ
ಅಧ್ಯಕ್ಷರಾಗಿ ವೀರ ಚಿಕ್ಕಯ್ಯ ಅವಿರೋಧ ಆಯ್ಕೆ
ಮಧುರೆ: ದೊಡ್ಡಬಳ್ಳಾಪುರ ತಾಲೂಕು ಕನ್ನಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವೀರಚಿಕ್ಕಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿ.12ರಂದು ನಡೆದ ಮಧುರೆ ಹೋಬಳಿ ಕನ್ನಮಂಗಲ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಎರಡನೇ ಅವಧಿಯ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಆಯ್ಕೆಯಾಗಿದ್ದು, ನೂತನ ಅಧ್ಯಕ್ಷರನ್ನು ಕನ್ನಮಂಗಲ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರು ಅಭಿನಂದಿಸಿದರು.