ದೊಡ್ಡಬಳ್ಳಾಪುರ : ಪಾಲನಜೋಗಿಹಳ್ಳಿ ಸಮೀದ ಬಾರ್ ಮುಂದೆ ಭಾನುವಾರ ರಾತ್ರಿ ಜಗಳವಾಡುತ್ತಿದ್ದವರನ್ನು ಬಿಡಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆಯೇ ಪುಂಡರು ಹಲ್ಲೆ ಮಾಡಿದ್ದಾರೆ.
ಪೊಲೀಸ್ ಸಿಬ್ಬಂದಿ ಮಣಿಕಂಠ ಎಚ್.ಪಿ. ಹಾಗೂ 112 ವಾಹನದ ಚಾಲಕ ರಾಯಪ್ಪ ಪೂಜಾರಿ ಗಾಯಗೊಂಡಿದ್ದು, ಆರೋಪಿಗಳಾದ ಕಾನೂನು ಸಂರ್ಷಕ್ಕೆ ಒಳಗಾದ ಆರೋಪಿ(17), ಪಾಲನಜೋಗಿಹಳ್ಳಿ ರಾಜೀವಗಾಂಧಿ ಕಾಲನಿಯ ನಿವಾಸಿ ಬಶೀರ್ ಅಲಿಯಾಸ್ ಗಿಡ್ಡು(20)ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಗಿದ್ದೇನು?: ಪಾಲನಜೋಗಿಹಳ್ಳಿ ಬಾರ್ ಬಳಿ ಭಾನುವಾರ ರಾತ್ರಿ 11.20ರ ಸುಮಾರಿಗೆ ಇಬ್ಬರು ಜಗಳವಾಗುತ್ತಿದ್ದ ಬಗ್ಗೆ ಆಂಬುಲೆನ್ಸ್ ಚಾಲಕ 112 ತುರ್ತು ಸೇವೆಗೆ ಕರೆ ಮಾಡಿ ಮಾಹಿತಿ ನೀಡಿದ್ದ. 112 ತುರ್ತು ಕರ್ತವ್ಯದಲ್ಲಿದ್ದ
ಪೊಲೀಸರು ಸ್ಥಳಕ್ಕೆ ಬಂದಾಗ ಇಬ್ಬರು ಒಬ್ಬರ ಮೇಲೊಬ್ಬರು ಬಿದ್ದು ಜಗಳವಾಡುತ್ತಿದ್ದರು. ಜಗಳ ಬಿಡಿಸಲು ಪೊಲೀಸ್ ಸಿಬ್ಬಂದಿ ಮುಂದಾದಾಗ ಹಲ್ಲೆ ಮಾಡುತ್ತಿದ್ದ ವ್ಯಕ್ತಿ ಸಿಬ್ಬಂದಿಯ ಸಮವಸ್ತ್ರ, ಕುತ್ತಿಗೆ ಹಿಡಿದು ಎಳೆದಾಡಿ ಮುಖ, ಎದೆ ಹಾಗೂ ಹೊಟ್ಟೆ, ಮರ್ಮಾಂಗಕ್ಕೆ ಒದ್ದಿದ್ದಾನೆ. ಇದೇ ವೇಳೆ ನೆಲಕ್ಕೆ ಬಿದ್ದಿದ್ದ ವ್ಯಕ್ತಿಯೂ ಮೇಲಕ್ಕೆ ಎದ್ದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿ, ಸಮವಸ್ತ್ರ ಹರಿದಿದ್ದಲ್ಲದೇ ಸರ್ಕಾರಿ ಜೀಪ್ಗೂ ಹಾನಿ ಮಾಡುತ್ತಿದ್ದಾಗ ಗ್ರಾಮಾಂತರ ಠಾಣೆ ಎಎಸ್ಐ ರಾಧಾಕೃಷ್ಣ ಹಾಗೂ ಇತರ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪೊಲೀಸರನ್ನು ರಕ್ಷಿಸಿ, ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ, ಜೀವಬೆದರಿಕೆ, ಅವಾಚ್ಯವಾಗಿ ನಿಂದನೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಿಮಿನಲ್ ಕೇಸ್ಗಳಿಲ್ಲ: ಇಬ್ಬರು ಅರೋಪಿಗಳು ನಗರದ ಮಾಂಸ ಮಾರಾಟದ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಪೂರ್ವಾಪರ ಪರಿಶೀಲನೆಯಲ್ಲಿ ಇದುವರೆಗೆ ಇವರ ಮೇಲೆ ಯಾವುದೇ ಅಪರಾಧ ಪ್ರಕರಣವಿಲ್ಲವೆಂಬುದು ತಿಳಿದುಬಂದಿದೆ. ತೀವ್ರ ತನಿಖೆ ಬಳಿಕ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡ್ರಗ್ಸ್ ಸೇವನೆ ಸಂಶಯ: ಆರೋಪಿಗಳಿಬ್ಬರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇಬ್ಬರೂ ಕಂಠಪೂರ್ತಿ ಮದ್ಯಸೇವಿಸಿರುವುದು ಕಂಡುಬಂದಿದೆ. ಆದರೂ ಇವರು ನಡೆಸಿದ ಪುಂಡಾಟಿಕೆ ತೀವ್ರತೆ ಗಮನಿಸಿದರೆ ಗಾಂಜಾ ಮತ್ತಿತರ ಡ್ರಗ್ಸ್ ಸೇವಿಸಿರುವ ಸಂಶಯ ವ್ಯಕ್ತವಾಗಿದೆ. ಪೊಲೀಸರು ಎನ್ನುವುದನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಹುಚ್ಚಾಟ ನಡೆಸಿ ಹಲ್ಲೆ ನಡೆಸಿರುವ ದೃಶ್ಯ ಸಾರ್ವಜನಿಕ ವಲಯದಲ್ಲಿ ಇಂಥದ್ದೊಂದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ರಕ್ತ ಪರೀೆ ವರದಿ ಬಳಿಕ ಸತ್ಯಾಸತ್ಯತೆ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆನೇಕಲ್ : ಜಿಗಣಿ ಸಮೀಪದ ಯಲ್ಲಮ್ಮನದೊಡ್ಡಿ ಕ್ವಾರಿಯ ನೀರಿನಲ್ಲಿ ಮುಳುಗಿದ್ದ ಟೆಕ್ಕಿ ಮೂರುದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ.
ಬೆಂಗಳೂರು ನಿವಾಸಿ, ಆಂಧ್ರಪ್ರದೇಶ ಮೂಲದ ಟೆಕ್ಕಿ ವಿನಯ್ (30) ಮೃತ. ಗಾಂಧಿ ಜಯಂತಿ ರಜೆ ಪ್ರಯುಕ್ತ ಎಂಟಕ್ಕೂ ಹೆಚ್ಚು ಮಂದಿ ಇನ್ಸ್ಟಾಗ್ರಾಂ ಗುಂಪಿನ ಮೂಲಕ ಚಾರಣಕ್ಕೆ ಬಂದಿದ್ದರು. ಈ ವೇಳೆ ಯಲ್ಲಮ್ಮನದೊಡ್ಡಿಯ ಕ್ವಾರಿ ಬಳಿಯ ನೀರಿಗೆ ತಂಡದ ಕೆಲವರು ಈಜಲು ಇಳಿದಿದ್ದು, ಈ ವೇಳೆ ವಿನಯ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಜಿಗಣಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದ್ದರೂ ವಿನಯ್ ಸುಳಿವು ಸಿಕ್ಕಿರಲಿಲ್ಲ. ಕ್ವಾರಿ ಆಳವಾಗಿದ್ದ ಹಿನ್ನೆಲೆಯಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದ ನೆರವಿನೊಂದಿಗೆ ಶೋಧ ಮುಂದುವರಿಸಿದಾಗ ಭಾನುವಾರ ಕ್ವಾರಿ ನೀರಿನಾಳದಲ್ಲಿ ವಿನಯ್ ಮೃತದೇಹ ಪತ್ತೆಯಾಗಿದ್ದು, ಅತ್ತಿಬೆಲೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಜಿಗಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.