DK family 
ಬೆಂಗಳೂರು ಗ್ರಾಮಾಂತರ

ಶನಿದೇವರಿಗೆ ಹರಕೆ ತೀರಿಸಿದ ಡಿಕೆ ಕುಟುಂಬ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಮಧುರೆ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಜೂ.3 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ಅವರಿಗೆ ಶುಭ ಹಾರೈಸಿ ಚಿಕ್ಕಮಧುರೆ (ಕನಸವಾಡಿ) ಕ್ಷೇತ್ರದ ಶ್ರೀ ಶನಿಮಹಾತ್ಮ ದೇವಾಲಯದಲ್ಲಿ ಡಿ.ಕೆ.ಶಿವಕುಮಾರ್ ಕುಟುಂಬದ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ಶನಿ ಮಹಾತ್ಮ ಸ್ವಾಮಿಗೆ ಅಭಿಷೇಕ, ಬೆಣ್ಣೆ ಅಲಂಕಾರ ಹಾಗೂ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಡಿ.ಕೆ.ಶಿವಕುಮಾರ್ ಸಂಬಂಧಿ ಸುಮಾ ರಂಗನಾಥ್ ಹಾಗೂ ಕುಟುಂಬದವರು ಪೂಜೆ ಸಲ್ಲಿಸಿದರು.
ಹರಕೆ ತೀರಿಸಲಾಗಿದೆ:
ಈ ವೇಳೆ ಮಾಜಿ ಶಾಸಕ ಟಿ ವೆಂಕಟರಮಣಯ್ಯ ಮಾತನಾಡಿ, ರಾಜ್ಯದ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿರುವ ಡಿ.ಕೆ.ಶಿವಕುಮಾರ್, 2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾಗಿದ್ದಾರೆ. ಈ ಹಿಂದೆ ಅವರಿಗೆ ತೊಂದರೆಯಾಗಿದ್ದ ಕಾಲದಲ್ಲಿ ಸಂಕಷ್ಟ ದೂರವಾಗಲಿ ಎಂದು ಹರಕೆ ಹೊತ್ತಿದ್ದರು. ಆ ಹರಕೆಯನ್ನು ಕುಟುಂಬಸ್ಥರು ತೀರಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅವರು ಯ