Departments to relocate from July 1 
ಬೆಂಗಳೂರು ಗ್ರಾಮಾಂತರ

ಜು.1ರಿಂದ ಇಲಾಖೆಗಳು ಸ್ಥಳಾಂತರ

ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ಶಕ್ತಿಸೌಧವಾಗಿರುವ ದೇವನಹಳ್ಳಿ ತಾಲೂಕು ಬೀರಸಂದ್ರ ಗ್ರಾಮದಲ್ಲಿನ ಜಿಲ್ಲಾಡಳಿತಭವನ ಕಟ್ಟಡಕ್ಕೆ ಹೊಂದಿಕೊಂಡಂತೆ ನಿರ್ಮಾಣವಾಗಿರುವ ಜಿಲ್ಲಾ ಪಂಚಾಯಿತಿ ಹೆಚ್ಚುವರಿ ಕಟ್ಟಡಕ್ಕೆ ಜು.1ರಿಂದ ವಿವಿಧ ಇಲಾಖೆಗಳು ಸ್ಥಳಾಂತರಗೊಳ್ಳಲಿವೆ.
ಆರಂಭದಲ್ಲಿ 4 ಇಲಾಖೆಗಳು ಜು.1ರಿಂದಲೇ ಕಾರ್ಯಾರಂಭ ಮಾಡಲಿದ್ದು, ಹಂತಹಂತವಾಗಿ ಜಿಲ್ಲಾ ಪಂಚಾಯಿತಿಯ 22 ಇಲಾಖೆಗಳು ಸ್ಥಳಾಂತರಗೊಳ್ಳಲಿವೆ ಈ ಮೂಲಕ ಒಂದೇ ಸೂರಿನಡಿ ಜಿಲ್ಲಾ ಪಂಚಾಯಿತಿಯ ಎಲ್ಲ ಇಲಾಖೆಗಳ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಸುಮಾರು ಎರಡ್ಮೂರು ವರ್ಷ ಕಾಲ ನಡೆದ ಜಿಪಂ ಹೊಸ ಹೆಚ್ಚುವರಿ ಕಟ್ಟಡ ಕಾಮಗಾರಿ ಕಡೆಗೂ ಪೂರ್ಣಗೊಂಡು ಕಳೆದ ವರ್ಷ ಏಪ್ರಿಲ್‌ನಲ್ಲಿ ಉದ್ಘಾಟನೆಯಾದರೂ ಇದುವರೆಗೆ ಕಾರ್ಯಾರಂಭವಾಗಿಲ್ಲ. ನಿರ್ವಹಣೆ ಕೊರತೆ ಲವಾಗಿ ಹೊಸ ಕಟ್ಟಡ ಧೂಳು ಹಿಡಿಯುತ್ತಿದ್ದು, ಬೀದಿ ನಾಯಿಗಳಿಗೆ ಆಶ್ರಯತಾಣವಾಗಿ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಕಟ್ಟಡವನ್ನು ಶುಚಿಗೊಳಿಸಿ ಇಲಾಖೆಗಳ ಸೇವೆಗೆ ಮುಕ್ತಗೊಳಿಸಲು ಜಿಲ್ಲಾ ಪಂಚಾಯಿತಿ ಸಿದ್ದತೆ ನಡೆಸಿದೆ. ಇದರೊಂದಿಗೆ ಬಹುನಿರೀಕ್ಷಿತ ಅಕ್ಕ ಕೆೆ ಸಹ ಆರಂಭವಾಗಲಿದೆ ಎಂದು ಜಿಪಂ ತಿಳಿಸಿದೆ.
ವರದಿ ಪರಿಣಾಮ:
‘ಧೂಳು ಹಿಡಿಯುತ್ತಿದೆ ಜಿಪಂ ಹೊಸ ಕಟ್ಟಡ’ ಶೀರ್ಷಿಕೆಯಡಿ ವಿಜಯವಾಣಿ ಜೂ.26ರಂದು ವಿಶೇಷ ವರದಿ ಪ್ರಕಟಿಸಿತ್ತು. ಸುಮಾರು 8 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾದ ಜಿಪಂ ನೂತನ ಹೆಚ್ಚುವರಿ ಕಟ್ಟಡ ಇಲಾಖೆಗಳು ಸ್ಥಳಾಂತರಗೊಳ್ಳದೆ ಅನಾಥವಾಗಿರುವ ಬಗ್ಗೆ ಬೆಳಕು ಚೆಲ್ಲಿತ್ತು. ವರದಿ ಗಮನಿಸಿದ ಜಿಲ್ಲಾಡಳಿತ ಇಲಾಖೆಗಳಿಗೆ ಸೂಚನೆ ರವಾನಿಸಿದ್ದು ತಕ್ಷಣದಿಂದಲೇ ಇಲಾಖೆಗಳನ್ನು ಸ್ಥಳಾಂತರಗೊಳಿಸಿ ಕರ್ತವ್ಯ ಆರಂಭಿಸುವಂತೆ ತಾಕೀತು ಮಾಡಿದೆ.
ಜಿಲ್ಲಾಡಳಿತಭವನ ಕಟ್ಟಡಕ್ಕೆ ಹೊಂದಿಕೊಂಡಂತೆ ನಿರ್ಮಾಣವಾಗಿರುವ ಜಿಲ್ಲಾ ಪಂಚಾಯಿತಿ ಹೆಚ್ಚುವರಿ ನೂತನ ಕಟ್ಟಡಕ್ಕೆ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಸ್ಥಳಾಂತರಗೊಂಡು ಕರ್ತವ್ಯ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಜು.1ರಿಂದಲೇ ಸ್ಥಳಾಂತರ ಕೆಲಸ ಆರಂಭವಾಗಲಿದೆ ಆರಂಭದಲ್ಲಿ 4 ಇಲಾಖೆಗಳು ತಕ್ಷಣದಿಂದಲೇ ಸ್ಥಳಾಂತರಗೊಳ್ಳಲಿದ್ದು ಇನ್ನುಳಿದ ಇಲಾಖೆಗಳು ಹಂತಹಂತವಾಗಿ ಸ್ಥಳಾಂತರಿಸಲಾಗುವುದು.
ಡಾ.ವಾಸಂತಿ ಅಮರ್, ಜಿಪಂ ಸಿಇಒ ಬೆಂ.ಗ್ರಾಮಾಂತರ