ದೇವನಹಳ್ಳಿ ಮಂಡಲ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಂಡಲ ಅಧ್ಯಕ್ಷ ನೀಲೇರಿ ಎನ್.ಎಲ್.ಅಂಬರೀಶಗೌಡ ಮಾತನಾಡಿದರು. ಬಯಪ ಮಾಜಿ ಅಧ್ಯಕ್ಷ ಸಿ.ಅಶ್ವತ್ಥ ನಾರಾಯಣ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ನಾಗವೇಣಿ ಶ್ರೀನಿವಾಸ್, ಓಬಿಸಿ ತಾಲೂಕು ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಇತರರು ಇದ್ದರು.
- ಜನರಲ್ಲಿ ಎಸ್ಐಆರ್ ಜಾಗೃತಿ ಮೂಡಿಸಿ
ದೇವನಹಳ್ಳಿ: ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಬಿಎಲ್ಎ 2 ಮತ್ತು ಬೂತ್ ಅಧ್ಯಕ್ಷರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಮತದಾರರನ್ನು ಸೇರಿಸುವುದು, ಜಾಗೃತಿ ಮೂಡಿಸಲು ಸಭೆ, ಕಾರ್ಯಾಗಾರ ಹಮ್ಮಿಕೊಳ್ಳಬೇಕು ಎಂದು ದೇವನಹಳ್ಳಿ ಮಂಡಲ ಬಿಜೆಪಿ ಅಧ್ಯಕ್ಷ ನೀಲೇರಿ ಅಂಬರೀಶ್ ಗೌಡ ನಿದೆೇರ್ಶನ ನೀಡಿದರು.
ಪಟ್ಟಣದ ದೇವನಹಳ್ಳಿ ಮಂಡಲ ಬಿಜೆಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 10 ದಿನಗಳಲ್ಲಿ ಬೂತ್ ಮಟ್ಟದಲ್ಲಿ ನಡೆಯುವ ಮತದಾರರ ಪಟ್ಟಿ (ಎಸ್ಐಆರ್) ಪರಿಷ್ಕರಣೆ ಸಂಬಂಧ ಬೂತ್ ಮಟ್ಟದ ಅಧ್ಯಕ್ಷರು ಗಮನಹರಿಸಬೇಕು. ಪ್ರತಿ ಬೂತ್ನಲ್ಲೂ ಪಕ್ಷ ಸಂಟಿಸಬೇಕು. ಒಂದು ಬೂತ್ನಲ್ಲಿ ಮತ ಹೆಚ್ಚು ಬಂದರೆ ಆ ಬೂತ್ನ ಶಕ್ತಿ ಹೆಚ್ಚಾಗುತ್ತದೆ. ಪ್ರತಿ ಗ್ರಾಮಗಳಿಗೆ ತೆರಳಿ ಅಲ್ಲಿನ ಸಮಸ್ಯೆಗಳು, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಭಾಗ ಪ್ರಭಾರಿ ಬ್ಯಾಟೇರಂಗೇಗೌಡ ಮಾತನಾಡಿ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಕ್ಷ ಸಂಟನೆಗೆ ಆದ್ಯತೆ ನೀಡಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಬೂತ್ ಮಟ್ಟದ ಪದಾಧಿಕಾರಿಗಳಿಗೆ ಹೆಚ್ಚಿನ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ನೀಡಬೇಕು ಎಂದರು.
ಮಾಜಿ ಶಾಸಕ ಜಿ.ಚಂದ್ರಣ್ಣ ಮಾತನಾಡಿ, ನಾನು ಸಹ 2 ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ನಿಮ್ಮ ಬೂತ್ಗಳಲ್ಲಿ ನೀವು ಕೆಲಸ ಮಾಡಿ. ಇನ್ನು 2 ವರ್ಷ ಚುನಾವಣೆ ಬರುತ್ತದೆ. ಚುನಾವಣೆಗಾಗಿ ನಾವು ಈಗಿನಿಂದಲೇ ಶ್ರಮಿಸಿದರೆ ಪ್ರತಿ ಬೂತ್ನಲ್ಲೂ ಸಂಟನೆ ಬಲಗೊಳ್ಳು ಸಾಧ್ಯ ಎಂದರು.
ಎಸ್ ಟಿ ಮೋರ್ಚಾ ಅಧ್ಯಕ್ಷ ಡೈರಿ ನಾಗೇಶ್ ಬಾಬು, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬುಳ್ಳಹಳ್ಳಿ ರಾಜಪ್ಪ, ಬಿ.ಕೆ.ನಾರಾಯಣಸ್ವಾಮಿ, ಶಿವನಾಪುರ ವಿಜಯ ಕುಮಾರ್, ಸಿದ್ದಲಿಂಗ ಮೂರ್ತಿ, ಮುನಿಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಕುಮಾರ್, ಸುಬ್ರಮಣಿ, ದೇವನಹಳ್ಳಿ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯೆ ವಿಜಯ ರಾವೇಂದ್ರ, ಯುವ ಮೋರ್ಚಾಧ್ಯಕ್ಷ ಮೋಹನ್, ದೇ.ಸೂ.ನಾಗರಾಜ್, ಮುಖಂಡ ಬೂದಿಗೆರೆ ಪ್ರಭಾಕರ್ ಇತರರು ಇದ್ದರು.