Chandan Kumar's funeral in his hometown
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕೆನಾಡಾದಲ್ಲಿ ಕಳೆದ ವಾರ ಹತ್ಯೆಗೀಡಾದ ಕನ್ನಡಿಗ ತ್ಯಾಮಗೊಂಡ್ಲು ಚಂದನ್‌ಕುವಾರ್ ಪಾರ್ಥೀವ ಶರೀರದ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಆರ್ಯವೈಶ್ಯ ಸಂಸ್ಕೃತಿಯಂತೆ ಬ್ರಾಹ್ಮಣ ಆರ್ಯವೈಶ್ಯ ಸಂದ ಮುಕ್ತಿಧಾಮ ಸ್ಥಳದಲ್ಲಿ ನೆರವೇರಿಸಲಾಯಿತು.
ನೆಲಮಂಗಲ ತಹಸೀಲ್ದಾರ್ ಮಲ್ಲೇಶ್‌ಬೀರಪ್ಪ ಪೂಜಾರ್ ಸಹಿತ ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಮತ್ತು ಹೋಬಳಿ ಅಧ್ಯಕ್ಷ ಅರುಣ್‌ಗೌಡ ಮತ್ತು ಸಂಬಂಧಿಕರು ಹಾಗೂ ತ್ಯಾಮಗೊಂಡ್ಲು ಪೊಲೀಸರು ಪಾರ್ಥೀವ ಶರೀರವನ್ನು ಬೆಂಗಳೂರು ವಿವಾನ ನಿಲ್ದಾಣದಿಂದ ಭಾನುವಾರ ರಾತ್ರಿ 11.40 ಕ್ಕೆ ಸ್ವಗ್ರಾಮಕ್ಕೆ ತಂದರು.
ತ್ಯಾಮಗೊಂಡ್ಲು ಆರ್ಯವೈಶ್ಯ ಸಂದಿಂದ ಸಂತೇಬೀದಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ವಾಡಲಾಗಿತ್ತು.
ಪಾರ್ಥೀವ ಶರೀರದ ಮುಂದೆ ಕಣ್ಣೀರು:
ಇದ್ದ ಒಬ್ಬನೇ ಮಗನ ಮೃತ ದೇಹದ ಮುಂದೆ ತಂದೆ- ತಾಯಿ ಕಣ್ಣೀರು ಹಾಕಿದರು. ನನ್ನ ಮಗನನ್ನು ಕಳೆದುಕೊಂಡು ಬಹಳ ದುಃಖದಲ್ಲಿದ್ದೇವೆ, ತುಂಬಾ ಒಳ್ಳೆಯ ಹೆಸರು ಪಡೆದಿದ್ದ ಮಗನ ಮೃತದೇಹ ತರಲು ಎಲ್ಲರೂ ಸಹಕಾರಿಯಾಗಿದ್ದಾರೆ, ಆರ್ಯವೈಶ್ಯ ಸಂಸ್ಕೃತಿಯಂತೆ ಅಂತ್ಯ ಸಂಸ್ಕಾರ ವಾಡಲಾಗುತ್ತದೆ ಎಂದು ತಾಯಿ ಶೈಲಜಾ ಹೇಳಿದರು. ನೂರಾರು ಗ್ರಾಮಸ್ಥರು ಸೋಮವಾರ ಮಧ್ಯಾಹ್ನ 3ರವರೆಗೂ ಅಂತಿಮ ದರ್ಶನ ಪಡೆದರು. ಪಾರ್ಥೀವ ಶರೀರದ ತೆ ಗ್ರಾಮಸ್ಥರು ಹೆಜ್ಜೆ ಹಾಕಿದರು. ನಂತರ ವೇದ ಬ್ರಹ್ಮ ಸುಬ್ರಹ್ಮಣ್ಯ ಶರ್ಮ ನೇತೃತ್ವದಲ್ಲಿ ಆರ್ಯವೈಶ್ಯ ಸಂಸ್ಕೃತಿಯಂತೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಈ ದಂಪತಿಗೆ ಒಬ್ಬರೇ ಮಗ, ಯಾರಿಗೂ ಕೂಡ ಈ ರೀತಿ ನೋವು ಆಗಬಾರದು. ಆ ಕುಟುಂಬಕ್ಕೆ ಭಗವಂತ ಮಗನ ಅಗಲಿಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಸಂಸದ ಡಾ.ಕೆ.ಸುಧಾಕರ್ ಸಂತಾಪ ವ್ಯಕ್ತಪಡಿಸಿದರು. ಇಲ್ಲಿಂದ ವಿದೇಶಕ್ಕೆ ಹೋದವರಿಗೆ ಆತಂಕ ಇದ್ದೇ ಇರುತ್ತದೆ. ಯಾರಿಗೂ ಯಾವುದೇ ತೊಂದರೆ ಆಗುವುದಿಲ್ಲ. ವಿದೇಶಾಂಗ ಇಲಾಖೆಯ ಅಧಿಕಾರಿಗಳು ಕೆನಡಾ ಸರ್ಕಾರದ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ತಂದೆ-ತಾಯಿ ಆಸೆಯಂತೆ ಮಗನ ಅಂತ್ಯ ಸಂಸ್ಕಾರ ಇಲ್ಲೇ ಆಗಿದೆ. ಜೀವ ಉಳಿಸುವ ಕೆಲಸ ನಮ್ಮಿಂದ ಆಗಿಲ್ಲ, ಇದು ಶೋಕದ ಸಂದರ್ಭ. ವಿದೇಶದಲ್ಲಿ ಓದಲು, ಕೆಲಸ ವಾಡಲು ಹೋಗುವವರು ಎಚ್ಚರಿಕೆಯಿಂದ ಇರಬೇಕು ಎಂದರು. ಪಾರ್ಥೀವ ಶರೀರ ತರಲು ಹೊರದೇಶದ ಪ್ರಕ್ರಿಯೆಗಳನ್ನು ಬಹಳ ಬೇಗ ಮುಗಿಸಲು ಕೇಂದ್ರ ಸಹಕಾರ ನೀಡಿದೆ. ತನಿಖೆ ಖಂಡಿತಾ ಆಗುತ್ತದೆ. ಗನ್ ಶೂಟ್ ಆಗಬೇಕು ಅಂದ್ರೆ ಏನೋ ಕಾರಣ ಇರಲೇಬೇಕು, ಈ ದಾಳಿ ಹಿಂದೆ ಕಾರಣ ಇದ್ದೇ ಇರುತ್ತದೆ. ಅಲ್ಲಿನ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು, ನಾವು ಅದನ್ನು ಒತ್ತಾಯಿಸುತ್ತೇವೆ ಎಂದರು.
ನೆಲಮಂಗಲ ತಾಲೂಕು ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ವಾತನಾಡಿ, ಹೆಮ್ಮೆಯ ಕನ್ನಡಿಗ ಚಂದನ್ ಕುವಾರ್ ಕೆನಡಾಗೆ ಹೋದ ಕನ್ನಡಿಗರಿಗೆ ಅಥವಾ ಭಾರತೀಯರಿಗೆ ಸಹಾಯ ವಾಡುತ್ತಾ ಕನ್ನಡದ ಕಂಪನ್ನು ಹೊರದೇಶದಲ್ಲಿ ಹಬ್ಬಿಸುತ್ತಾ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು ಎಂದು ನೆನಪು ಮಾಡಿಕೊಂಡರು. ಇದ್ದ ಒಬ್ಬ ಮಗನನ್ನೇ ಅವಲಂಬಿಸಿದ್ದ ಅವರ ಪಾಲಕರಿಗೆ ದಿಕ್ಕು ತೋಚದಂತಾಗಿದೆ. ಅವರ ಮುಂದಿನ ಜೀವನಕ್ಕೆ ಯಾರನ್ನೂ ಅವಲಂಬಿಸದಂತೆ ಒಂದು ಶಾಶ್ವತ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ವಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಂದ ಅಧ್ಯಕ್ಷ ಆರ್.ಎಸ್.ಅನಿಲ್‌ಕುವಾರ್, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಹೋಬಳಿ ಅಧ್ಯಕ್ಷ ಅರುಣ್‌ಗೌಡ, ಸಪ್ತಗಿರಿ ಶಂಕರ್‌ನಾಯಕ್, ಟಿ.ಎನ್.ಹನುಮಂತರಾಜು, ನೆಲಮಂಗಲ ಯೋಜನಾ ಪ್ರಾಧಿಕಾರದ ವಾಜಿ ಸದಸ್ಯ ಪ್ರಕಾಶ್ ಬಾಬು, ಆರ್ಯವೈಶ್ಯ ಸಮುದಾಯ, ಆರ‌್ಯವೈಶ್ಯ ಯುವಜನ ಸಂದ ಸದಸ್ಯರು ಹಾಗು ಗ್ರಾಮಸ್ಥರು ಇದ್ದರು.