ceo visit 
ಬೆಂಗಳೂರು ಗ್ರಾಮಾಂತರ

ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸಾರ್ವಜನಿಕ ಸಮಸ್ಯೆಗಳನ್ನು ಪಂಚಾಯಿತಿ ಸಿಬ್ಬಂದಿ ತ್ವರಿತವಾಗಿ ಪರಿಹರಿಸಬೇಕು, ಸಾರ್ವಜನಿಕ ಅಹವಾಲಿಗೆ ತಕ್ಷಣ ಸ್ಪಂದಿಸಬೇಕು ಎಂದು ಜಿಪಂ ಸಿಇಒ ಡಾ.ವಾಸಂತಿ ಅಮರ್ ಸೂಚನೆ ನೀಡಿದರು.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಗ್ರಾಮ ಪಂಚಾಯಿತಿಗೆ ಇತ್ತೀಚಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಇ-ಖಾತೆ ವಿತರಣೆಯಲ್ಲಿ ವಿಳಂಬ, ಕೆರೆ ಏರಿಗಳ ಬಳಿ ತ್ಯಾಜ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ, ಶುದ್ಧ ಕುಡಿಯುವ ನೀರಿನ ಟಕಗಳ ನಿರ್ವಹಣೆ ಕೊರತೆ, ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಲೋಪ ಹಾಗೂ ಕುಡಿಯುವ ನೀರಿನ ಅಭಾವ ಪ್ರಮುಖ ಸಮಸ್ಯೆಗಳಾಗಿವೆ ಈ ಬಗ್ಗೆ ಗಮನಹರಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
ಕಟ್ಟುನಿಟ್ಟಿನ ಸೂಚನೆ:
ಬಾಕಿ ಕಾಮಗಾರಿಗಳನ್ನು ಶೀಘ್ರ ಮುಗಿಸಬೇಕು ಹಾಗೂ ಸಮಸ್ಯೆಗಳನ್ನು ಶ್ರೀ ಪರಿಹರಿಸಬೇಕು ಎಂದು ಪಿಡಿಒ ವೆಂಕಟೇಶ್ ಅವರಿಗೆ ಸಿಇಒ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಚರಂಡಿ ಸ್ವಚ್ಛತೆ, ವಿದ್ಯುತ್ ಲೈನ್ ದುರಸ್ತಿ ಸೇರಿ ಅಗತ್ಯ ಕಾಮಗಾರಿಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಈ ವೇಳೆ ಗ್ರಾಮಸ್ಥರು ಸಿಇಒ ಗಮನ ಸೆಳೆದರು.ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ನಿರ್ವಾಣವಾಗುತ್ತಿರುವ ವಾಣಿಜ್ಯ ಮಳಿಗೆಗಳ ಕಾಮಗಾರಿಯನ್ನು ಶ್ರೀ ಪೂರ್ಣಗೊಳಿಸಿ, ಹರಾಜು ಪ್ರಕ್ರಿಯೆಯ ಮೂಲಕ ಹಂಚಿಕೆ ವಾಡಬೇಕೆಂದು ಸ್ಥಳೀಯರು ಒತ್ತಾಯಿಸಿದರು. ಸಮಸ್ಯೆಗಳ ತೀವ್ರತೆಯನ್ನು ಗಮನಿಸಿದ ಸಿಇಒನಿಗಧಿತ ಅವಧಿಯೊಳಗೆ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದರು. ವಿಫಲವಾದಲ್ಲಿ ಕರ್ತವ್ಯಲೋಪದಡಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಇದೇ ವೇಳೆ ಗ್ರಾಮ ವಸತಿ ಯೋಜನೆಗೆ ಮೀಸಲಿಟ್ಟ ಜಾಗಕ್ಕೂ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ವಸತಿಗೆ ಮನವಿ:
ಈ ಸಂದರ್ಭದಲ್ಲಿ ವಸತಿ ಇಲ್ಲದೆ ಸಂಕಷ್ಟದಲ್ಲಿರುವ ಅಂಗವಿಕಲ ಚೇತನ ರಮೇಶ್ ಅವರು ತಮ್ಮ ಸಮಸ್ಯೆಯನ್ನು ಸಿಇಒ ಗಮನಕ್ಕೆ ತಂದರು. ಗ್ರಾಮಸಭೆಯಲ್ಲಿ ನಿವೇಶನಕ್ಕೆ ಅನುಮೋದನೆ ದೊರೆತಿದ್ದರೂ ಇನ್ನೂ ನಿವೇಶನ ಸಿಗದೆ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು. ಹಕ್ಕಿನಂತೆ ಸಿಗಬೇಕಾದ ನಿವೇಶನವನ್ನು ತಕ್ಷಣ ಮಂಜೂರು ವಾಡುವಂತೆ ಮನವಿ ವಾಡಿದರು.