bangalore-airport 
ಬೆಂಗಳೂರು ಗ್ರಾಮಾಂತರ

ಅಂಗವಿಕಲರಿಗೆ ಮೊಬಿಲಿಟಿ ಅಸಿಸ್ಟ್ ನೆರವು

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಅಂಗವಿಕಲರು ಸುಲಭವಾಗಿ ವಿಮಾನ ಏರಲು ಸಹಕಾರಿಯಾಗಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದಲ್ಲೇ ಮೊದಲ ಬಾರಿಗೆ ಮೊಬಿಲಿಟಿ ಅಸಿಸ್ಟ್ ಸಾಧನವನ್ನು ಪರಿಚಯಿಸಲಾಗಿದೆ.
ಮಕ್ಕಳು ಸೇರಿ ಪ್ರಯಾಣದ ವೇಳೆ ಹೆಚ್ಚಿನ ಸಹಾಯದ ಅಗತ್ಯವಿರುವವರು, ಕಡಿಮೆ ಚಲನಶೀಲತೆ ಹೊಂದಿರುವವರಿಗೆ ಸುರಕ್ಷಿತ, ಸುಗಮವಾಗಿ ವಿಮಾನದ ಬೋರ್ಡಿಂಗ್ ಮಾಡಲು ಮತ್ತು ವಿಮಾನದಿಂದ ಇಳಿಯಲು ಅತ್ಯಾಧುನಿಕವಾಗಿ ಬೆಂಬಲ ನೀಡುವ ವ್ಯವಸ್ಥೆಯಾಗಿ ಇದು ಕಾರ್ಯ ನಿರ್ವಹಿಸಲಿದೆ. ವಿಮಾನ ನಿಲ್ದಾಣದಲ್ಲಿ ಅಂಗವಿಕಲ ಪ್ರಯಾಣಿಕರು ಸುಲಭವಾಗಿ ಈ ಅತ್ಯಾಧುನಿಕ ಉಪಕರಣದ ಸಹಾಯದಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ತೆರಳಬಹುದು.
ವೀಲ್‌ಚೇರ್‌ನಂಥ ಸಾಧನ:
ಮೊಬಿಲಿಟಿ ಅಸಿಸ್ಟ್ ಸಾಧನವು ವಿಮಾನದ ಬೋರ್ಡಿಂಗ್, ಡಿಪ್ಲೇನಿಂಗ್ ಅಥವಾ ಟರ್ಮಿನಲ್‌ಗಳ ನಡುವಿನ ಪ್ರಯಾಣದ ಸಮಯದಲ್ಲಿ ವೀಲ್‌ಚೇರ್‌ನಿಂದ ನೇರವಾಗಿ ಪ್ರಯಾಣಿಕರಿಗೆ ಸಹಾಯ ಮಾಡುತ್ತದೆ. ಈ ಮೂಲಕ ದೈಹಿಕ ನ್ಯೂನತೆಯವರ ಪ್ರಯಾಣದ ಅಪಾಯವನ್ನೂ ಕಡಿಮೆ ಮಾಡುತ್ತದೆ. ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಹೆಚ್ಚು ಆರಾಮದಾಯಕ ಅನುಭವ ನೀಡುತ್ತದೆ. ಮೊಬಿಲಿಟಿ ಅಸಿಸ್ಟ್ ಪರಿಚಯಿಸುವುದರೊಂದಿಗೆ ಬೆಂಗಳೂರು ವಿಮಾನ ನಿಲ್ದಾಣವು ಮತ್ತೊಂದು ಅರ್ಥಪೂರ್ಣ ಹೆಜ್ಜೆ ಇಡುತ್ತಿದೆ. ಎಲ್ಲ ಪ್ರಯಾಣಿಕರು ಸಮಾನತೆ ಪ್ರಯಾಣ ಬೆಳೆಸುವ ವಾತಾವರಣ ನಿರ್ಮಿಸುವ ಮೂಲಕ ಬದ್ಧತೆಯನ್ನು ಮೆರೆಯಲಾಗಿದೆ ಎಂಬುದು ಬಿಐಎಎಲ್ ಅಭಿಮತವಾಗಿದೆ.
--
ಕೋಟ್()
ಅತ್ಯಂತ ಸಂತಸದಿಂದ ಈ ಕೊಡುಗೆ ನೀಡುತ್ತಿದ್ದೇನೆ. ಪ್ರಯಾಣದ ಸಂದರ್ಭದಲ್ಲಿ ಸೂಕ್ತ ಸೌಲಭ್ಯಗಳಿಲ್ಲದೇ ನನ್ನ ಪುತ್ರ ತುಂಬ ತೊಂದರೆ ಎದುರಿಸುತ್ತಿದ್ದರು.ಮೊಬಿಲಿಟಿ ಅಸಿಸ್ಟ್ ಕೊಡುಗೆಯ ಮೂಲಕ ತನ್ನಂತಹ ಇತರರು ಸುಲಭವಾಗಿ ಮತ್ತು ಸೌಕರ್ಯದೊಂದಿಗೆ ಪ್ರಯಾಣಿಸಲಿ ಎಂಬುದು ಇದರ ಸದುದ್ದೇಶವಾಗಿದೆ.
ಡಾ. ಬಿ.ಎಸ್.ಅಜಯ್‌ಕುಮಾರ್,ಎಚ್‌ಸಿಜಿ ಸಂಸ್ಥಾಪಕ
--------
ವಿಮಾನ ನಿಲ್ದಾಣದಲ್ಲಿ ಪ್ರತಿಯೊಬ್ಬರಿಗೂ ಸಮಾನ ಸೌಲಭ್ಯ ನೀಡುವುದು ನಮ್ಮ ಉದ್ದೇಶದ ಮೂಲ ಮಂತ್ರವಾಗಿದೆ. ಮೊಬಿಲಿಟಿ ಅಸಿಸ್ಟ್ ಪರಿಚಯದ ಮೂಲಕ ಅಂಗವಿಕಲತೆ ಹೊಂದಿರುವ ಪ್ರಯಾಣಿಕರು ಇನ್ನಷ್ಟು ಸುಲಲತವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ಸಹಕಾರಿಯಾಗಿದೆ.
ಹರಿ ಮರಾರ್, ಬಿಐಎಎಲ್ ಎಂಡಿ ಮತ್ತು ಸಿಇಒ