ಟೂ ವೀಲರ್ ಮಾರುಕಟ್ಟೆಗೆ ಹೊಸ ಬಜಾಜ್ ಪಲ್ಸರ್ ಎಂಟ್ರಿ
ಅದೇ ಖದರ್, ಮತ್ತಷ್ಟು ಸೈಲೀಷ್ ಲುಕ್, ಅದೇ ಖಡಕ್ ಸೌಂಡ್..ಜತೆಗೆ ಮತ್ತಷ್ಟು ಖಡಕ್ಲುಕ್..ಆಗ ಡೆಫೆನೈಟ್ಲಿ ಮೆನ್.. ಈಗಡೆಫೆನೈಟ್ಲಿ ಡೇರಿಂಗ್... 25 ವರ್ಷದ ಹಿಂದೆ ಪಡ್ಡೆ ಹುಡುಗರ ನಿದ್ರೆಗೆಡಿಸಿದ ಬಜಾಜ್ ಪಲ್ಸರ್ ಈಗ ಝೆನ್ಜೀಗಳ ಹಾಟ್ ಫೆವರೇಟ್ ಎನಿಸಿದೆ. ಟೂ ವೀಲರ್ ಜಗತ್ತಿನಲ್ಲಿ ಮತ್ತೊಮ್ಮೆ ದೊಡ್ಡ ಸದ್ದಿನೊಂದಿಗೆ ಹೊಸ ಹೊಸ ಮಾದರಿಗಳಲ್ಲಿ ಬಜಾಜ್ ಪಲ್ಸರ್ ಮಾರುಕಟ್ಟೆಗೆ ಲಗ್ಗೆ ಹಾಕಿದೆ.
ಕಳೆದ 25 ವರ್ಷದ ಹಿಂದಿನ ಟೂ ವೀಲರ್ ಜಗತ್ತಿನಲ್ಲಿ "ಡೆಫೆನೈಟ್ಲಿ' ಸ್ಲೋಗನ್ನೊಂದಿಗೆ ಯುವ ಸಮುದಾಯ ಮನಸ್ಸಿಗೆ ಲಗ್ಗೆ ಹಾಕಿದ ಬಜಾಜ್ ಪಲ್ಸರ್. ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಮಾರಾಟವಾಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿತ್ತು. ಇನ್ನಿತರ ಬೈಕ್ಗಳ ಎದುರು ಯಾವುದೇ ಪೈಪೋಟಿ ಇಲ್ಲದೆ ಸರಾಗವಾಗಿ ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಿದ ಬಜಾಜ್ ಪಲ್ಸರ್. ಈ ಮೂಲಕ ಪಡ್ಡೆ ಹುಡುಗರ ನಾಡಿಮಿಡಿತಕ್ಕೆ ಸ್ಪಂದಿಸಿತ್ತು. 25 ವರ್ಷದ ಬಜಾಜ್ ಪಲ್ಸರ್ ಜರ್ನಿಯಲ್ಲಿ ಸಾಕಷ್ಟು ಮಾರ್ಪಾಡುಗಳು, ಸಾಕಷ್ಟು ಬದಲಾವಣೆಗಳೊಂದಿಗೆ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸುತ್ತಾ ಬಂದಿದೆ. ಇದೀಗ ಹೊಸ ಮಾದರಿಗಳಲ್ಲಿ ಹೊಸ ಹೊಸ ಬಣ್ಣಗಳಲ್ಲಿ ಮತ್ತಷ್ಟು ಸೈಲೀಷ್, ಮತ್ತಷ್ಟು ರಗಡ್ ಲುಕ್ನೊಂದಿಗೆ 125 ಸಿಸಿ ಹಾಗೂ 150 ಸಿಸಿ ಬೈಕ್ಗಳು ಮಾರುಕಟ್ಟೆಗೆ ಮತ್ತೊಮ್ಮೆ ಲಗ್ಗೆ ಹಾಕಿದೆ.
2001ರಲ್ಲಿ ಬಜಾಜ್ ಪಲ್ಸರ್ ಮೊದಲ ಬಾರಿಗೆ ಮಾರುಕಟ್ಟೆ ಪ್ರವೇಶಿಸಿತ್ತು. ಪ್ರಸ್ತುತ 2026 ರಲ್ಲಿ ಹೊಸ ಮಾದರಿಯ ಬೈಕ್ಗಳು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಬಜಾಜ್ ಕಂಪನಿ 25 ವರ್ಷದ ಸಿಲ್ವರ್ ಜ್ಯುಬಿಲಿ ಆಚರಿಸುತ್ತಿದೆ. ಇದೇ ಸಂಭ್ರಮದ ನೆನಪಿಗಾಗಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ತಾಜ್ ಹೋಟೆಲ್ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೇಶದ ನಾನಾ ರಾಜ್ಯಗಳಿಂದ ಮಾಧ್ಯಮಮಿತ್ರರನ್ನು ಆಹ್ವಾನಿಸಿ ಬಜಾಜ್ ಪಲ್ಸರ್ ಹೊಸ ಬೈಕ್ಗಳ ಬಿಡುಗಡೆ ಕಾರ್ಯಕ್ರಮಕ್ಕೆ ಅದ್ದೂರಿತನದ ಮೆರುಗು ನೀಡಿತು.
ಹೊಸ ಬಜಾಜ್ ಪಲ್ಸರ್ನ ವಿಶೇಷತೆಗಳು:
ಹೊಸ ಆವೃತ್ತಿಯ ಬಜಾಜ್ ಪಲ್ಸರ್ 2026ರಲ್ಲಿ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಹೊಸ ಆವೃತ್ತಿಯು ಸುಧಾರಿತ ಚಾಸಿಸ್ ಮತ್ತು ಹೊಸ ವಿನ್ಯಾಸವನ್ನು (ಸ್ಟೈಲಿಂಗ್) ಒಳಗೊಂಡಿದ್ದು, ಕ್ಲಾಸಿಕ್ ಮತ್ತು ಆರಾಮದಾಯವಾಗಿ ಕುಳಿತು ಸವಾರಿ ಮಾಡುವ ಭಂಗಿಯಿಂದ ಗಮನ ಸೆಳೆಯುತ್ತಿದೆ. 149.5 ಸಿಸಿ ಟ್ವಿನ್-ಸ್ಪಾರ್ಕ್, ಏರ್-ಕೂಲ್ಡ್ ಎಂಜಿನ್ ಹೊಂದಿದೆ. ಇದು 8,500 ಆರ್ಪಿಎಂ 14 ಎನ್ಎಂ ಶಕ್ತಿ ಹೊಂದಿಗೆ ಇದು ರೈನ್, ರೋಡ್ ಮತ್ತು ಸ್ಪೋರ್ಟ್ ಎಂಬ ಮೂರು ವಿಭಿನ್ನ ರೈಡಿಂಗ್ ಮೋಡ್ಗಳನ್ನು ಪರಿಚಯಿಸುತ್ತದೆ. ಹಿಂದಿನ ಆವೃತ್ತಿಗಳಲ್ಲಿದ್ದ ಎರಡು ಶಾಕ್ ಅಬ್ಸಾರ್ಬರ್ಗಳ ಬದಲಿಗೆ, ಇದರಲ್ಲಿ ಹಿಂಭಾಗದ ಮೊನೊಶಾಕ್ ಸಸ್ಪೆನ್ಷನ್ ಅನ್ನು ಅಳವಡಿಸಲಾಗಿದೆ. ಬ್ಲೂಟೂತ್ ಸಂಪರ್ಕ, ಗೂಗಲ್ ಮ್ಯಾಪ್ಸ್ ನ್ಯಾವಿಗೇಷನ್ನ್ ಮಿರರಿಂಗ್ ಮತ್ತು ಸಂಗೀತ ನಿಯಂತ್ರಣಗಳೊಂದಿಗೆ 5-ಇಂಚಿನ ಕಲರ್ ಎಲ್ಸಿಡಿ ಡಿಸ್ಪ್ಲೇಯನ್ನು ಹೊಂದಿವೆ. ಆಧುನಿಕ್ ಎಲ್ಇಡಿ ಹೆಡ್ಲ್ಯಾಂಪ್ಗಳನ್ನು ಹೊಂದಿದೆ.