arrest 
ಬೆಂಗಳೂರು ಗ್ರಾಮಾಂತರ

ಕೆಲಸದಾಕೆಯ ಹಂತಕನ ಬಂಧನ

ಶಿವರಾಜ.ಎಂ
ಬೆಂಗಳೂರು ಗ್ರಾಮಾಂತರ
ಕೇರಳ ಮಹಿಳೆಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಆಕೆ ಸಾವಿಗೆ ಕಾರಣನಾದ ಆರೋಪದಡಿ ದೀಪಕ್ ಕೃಷ್ಣ ಎಂಬುವನನ್ನು ಸೂಲಿಬೆಲೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೂಲಿಬೆಲೆಯ ತನ್ನ ಮನೆಯಲ್ಲಿ ನಾಯಿಗಳನ್ನು ನೋಡಿಕೊಳ್ಳಲು ನೇಮಿಸಿಕೊಂಡಿದ್ದ ಕೇರಳ ಮೂಲದ ಸುನೀತಾ ಸ್ಮೀತಾ ಎಂಬುವರ ಮೇಲೆ ಲೈಗಿಂಕ ದೌರ್ಜನ್ಯ ಎಸಗಿ ಸಾವಿಗೆ ಕಾರಣನಾದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಏನಿದು ಪ್ರಕರಣ?
ಸೂಲಿಬೆಲೆಯಲ್ಲಿ ಆರೋಪಿ ಶೆಡ್‌ವೊಂದನ್ನು ನಿರ್ಮಿಸಿ ಕೆಲವು ನಾಯಿಗಳನ್ನು ಸಾಕಿಕೊಂಡಿದ್ದ ನಾಯಿಗಳನ್ನು ನೋಡಿಕೊಳ್ಳಲು ಮಧ್ಯವರ್ತಿ ಮೂಲಕ ಕೇರ ಮೂಲದ ಸುನೀತಾ ಸಿತ್ಮಾ(47) ಎಂಬುವರನ್ನು ಕರೆತಂದಿದ್ದ. ನಂತರದ ದಿನಗಳಲ್ಲಿ ಸುನೀತಾ ಸ್ಮಿತಾ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ, ಇದಕ್ಕೆ ನಿರಾಕರಿಸುತ್ತಿದ್ದ ಈಕೆ ಮೇಲೆ ಮೇ 3ರಂದು ಮಾರಣಾಂತಿಕ ಹಲ್ಲೆ ನಡೆಸಿದ್ದ. ಹಲ್ಲೆಯಿಂದ ಗಂಭೀರ ಗಾಯಗೊಂಡ ಸುನೀತಾರನ್ನು ಸೂಲಿಬೆಲೆಯ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ಬಳಿಕ ಕೇರಳದ ಆಸ್ಪತ್ರೆಗೆ ರವಾನಿಸಲಾಗಿತ್ತು, ಚಿಕಿತ್ಸೆ ಲಕಾರಿಯಾಗದೆ ಮೇ 5 ರಂದು ಸುನೀತಾ ಕೊನೆಯುಸಿರೆಳೆದ್ದರು. ಈ ಪ್ರಕರಣ ಕೇರಳ ಪೊಲೀಸರಿಂದ ಸೂಲಿಬೆಲೆ ಠಾಣೆಗೆ ವರ್ಗಾವಣೆಯಾಗಿತ್ತು. ಸುನೀತಾ ಪತಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಗುಂಡಿ ಹಾರಿಸಿ ಜೈಲು ಸೇರಿದ್ದ:
ಕೆಲ ತಿಂಗಳ ಹಿಂದೆ ಸೂಲಿಬೆಲೆಯ ಮದ್ಯದಂಗಡಿ ಮುಂದೆ ಇದೇ ದೀಪಕ್‌ಕೃಷ್ಣ ಗಲಾಟೆ ಮಾಡಿ ತನ್ನ ಬಳಿಯಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದ ಪ್ರಕರಣದಲ್ಲಿ ಕೆಲವು ತಿಂಗಳು ಜೈಲುವಾಸ ಅನುಭವಿಸಿದ್ದ. ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಆರೋಪಿ ದೀಪಕ್ ಕೃಷ್ಣ ಸೂಲಿಬೆಲೆ ಹೊರ ಭಾಗದ ಜನ ವಸತಿ ಕಡಿಮೆ ಇರುವ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ನಾಯಿಗಳನ್ನು ಸಾಕಿಕೊಂಡಿದ್ದಾನೆ. ಮನೆಯ ಸುತ್ತಲೂ ಎತ್ತರದ ತಡೆಗೋಡೆ ಇರುವುದರಿಂದ ಹೊರಗಿನ ಜನಕ್ಕೆ ಮನೆ ನಿಗೂಡವಾಗಿಯೇ ಇದೆ.
ಜಾಲತಾಣಗಳಲ್ಲಿ ಆಕ್ರೋಶ :
ಕೇರಳ ಆಸ್ಪತ್ರೆಯಲ್ಲಿ ಸುನೀತಾ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ ಪ್ರಕರಣ ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ, ನಟಿ ಪಾರ್ವತಿ ತಿರುವೋತ್ತರ್ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದರೊಂದಿಗೆ ಸಾಕಷ್ಟು ಸಿನಿ ತಾರೆಯರು ದುಷ್ಕರ್ಮಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.