ನೆಲಮಂಗಲದ ಚನ್ನಪ್ಪ ಬಡಾವಣೆಯಲ್ಲಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಶಾಸಕ ಎನ್​.ಶ್ರೀನಿವಾಸ್​ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ನೆ.ಯೋ.ಪ್ರಾಧಿಕಾರ ಮಾಜಿ ಅಧ್ಯಕ್ಷ ಎಂ.ನಾರಾಯಣ್​ಗೌಡ, ನಗರಸಭೆ ಉಪಾಧ್ಯಕ್ಷ ಆನಂದ್​, ಪೌರಾಯುಕ್ತ ಗಂಗಾಧರ್​, ಬ್ಲಾಕ್​ ಕಾಂಗ್ರೆಸ್​ ಉಪಾಧ್ಯಕ್ಷ ಸಿ.ಎಂ.ಗೌಡ ಇದ್ದರು. 
ಬೆಂಗಳೂರು ಗ್ರಾಮಾಂತರ

ಮಕ್ಕಳ ವಿದ್ಯಾಭ್ಯಾಸದ ಮೊದಲ ಮೆಟ್ಟಿಲು ಅಂಗನವಾಡಿ

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ವಿದ್ಯಾಭ್ಯಾಸದ ಮೊದಲ ಮೆಟ್ಟಿಲು ಅಂಗನವಾಡಿ

ನೆಲಮಂಗಲ:

ಅಂಗನವಾಡಿ ಶಿಕ್ಷಣವು ಮಕ್ಕಳ ವಿದ್ಯಾಭ್ಯಾಕ್ಕೆ ಮೊದಲ ಮೆಟ್ಟಿಲು. ಪ್ರಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣ ಲಭಿಸಿದರೆ ಮಕ್ಕಳ ಬದುಕು, ಭವಿಷ್ಯ ಉತ್ತಮವಾಗಿ ರೂಪುಗೊಳ್ಳುತ್ತದೆ. ಅಲ್ಲದೇ ಮಕ್ಕಳಲ್ಲಿ ಮಾನವೀಯ ಗುಣ ವೃದ್ಧಿಸಲು ಅಂಗನವಾಡಿ ಕೇಂದ್ರಗಳು ಪೂರಕವಾಗಲಿವೆ ಎಂದು ಶಾಸಕ ಎನ್​.ಶ್ರೀನಿವಾಸ್​ ಹೇಳಿದರು.

ನಗರಸಭೆ ವ್ಯಾಪ್ತಿಯ ಚನ್ನಪ್ಪ ಬಡಾವಣೆಯಲ್ಲಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಅಂಗನವಾಡಿ ಕಟ್ಟಡ ನಿರ್ಮಿಸಿ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಲಾಗಿದೆ. ತಾಲೂಕಿನಲ್ಲಿ ಉತ್ತಮ ರೀತಿಯಲ್ಲಿ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ ದೊರಕಲು ಅಂಗನವಾಡಿ ಕೇಂದ್ರಗಳ ನಿಮಾರ್ಣ ಮತ್ತು ದುರಸ್ತಿಗೆ ಕ್ರಮವಹಿಸಲಾಗಿದೆ. ಸದ್ಯ ಅಂಗನವಾಡಿಗಳ ಸ್ಥಿತಿಗತಿ ಸಾಕಷ್ಟು ಸುಧಾರಿಸಿದೆ. ಸೌಲಭ್ಯ ಒದಗಿದಲು ಅಂಗನವಾಡಿ ಕೇಂದ್ರಗಳ ಪಟ್ಟಿ ಮಾಡಲಾಗಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಮಾತನಾಡಿ, ನಗರ ಪ್ರದೇಶಗಳಲ್ಲಿ ಖಾಸಗಿ ಶಾಲೆಯವರು ನಡೆಸುವ ನರ್ಸರಿ, ಪ್ರಿ&ನರ್ಸರಿಗಳಲ್ಲಿ ಸಾಕಷ್ಟು ಹಣ ತೆಗೆದುಕೊಳ್ಳುತ್ತಾರೆ. ಆದರೆ, ಅಂಗನವಾಡಿಗಳಲ್ಲಿ ಮಕ್ಕಳಿಗೆ ಉಚಿತ ಪ್ರಾರಂಭಿಕ ಶಿಕ್ಷಣ, ಶಿಸ್ತನ್ನು ಕಲಿಸುವ ಜತೆಗೆ ಕೇಂದ್ರಕ್ಕೆ ಬರುವ ಮಕ್ಕಳ ಲಾಲನೆ&ಪಾಲನೆ ಮಾಡಲಾಗುತ್ತಿದೆ ಎಂದರು.

ಬಡಾವಣೆಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿಮಾರ್ಣ ಮಾಡಿದ್ದು, ಶಾಸಕ ಎನ್​.ಶ್ರೀನಿವಾಸ್​ ಚಾಲನೆ ನೀಡಿದರು. ಮಹಿಳಾ ಚಾರಿಟಬಲ್​ ಟ್ರಸ್ಟ್​ ಪ್ರಧಾನ ಕಾರ್ಯದರ್ಶಿ ಮಂಜುಳಾ ಗಣೇಶ್​, ಟಿಎಪಿಸಿಎಂಎಸ್​ ನಿರ್ದೇಶಕ ನರಸಿಂಹಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ನಾಗೇಶ್​, ಮೇಲ್ವಿಚಾರಕಿ ಹೇಮಾ, ಮುಖಂಡ ಚಂದ್ರಕುಮಾರ್​, ವೆಂಕಟೇಶ್​, ಮುನಿಯಪ್ಪ, ನಾರಾಯಣ್​ರಾವ್​, ಕೆ.ವಸಂತ್​, ಕೆಂಪರಾಜು, ಲೋಕೇಶ್​, ಭಕ್ತನಪಾಳ್ಯಮುನಿರಾಜು, ಪ್ರಸನ್ನಕುಮಾರ್​, ರವಿಕುಮಾರ್​, ಹನುಮಂತಮ್ಮ ಇತರರು ಇದ್ದರು.