ಕುದೂರು: ಸೋಲೂರಿನ ಪೋಸ್ಟ್ ಆಫೀಸ್ ಬಳಿ ಜಾಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದ ಮಾಗಡಿ ತಾಲೂಕು ಕಸಬಾ ಹೋಬಳಿಯ ರಂಗೇನಹಳ್ಳಿಯ ಮಲ್ಲಿಕಾರ್ಜುನ್ ಆರ್. (23) ಚಿಕಿತ್ಸೆ ಲಿಸದೆ ಶುಕ್ರವಾರ ಮೃತಪಟ್ಟಿದ್ದಾನೆ.
ಮೇ 24ರಂದು ಮಲ್ಲಿಕಾರ್ಜುನ್ ಖಾಲಿ ಜಾಗದಲ್ಲಿ ಲಾರಿ ನಿಲ್ಲಿಸಿಕೊಂಡು ರಿಪೇರಿ ಮಾಡುವ ಸಲುವಾಗಿ ಜಾಕ್ ಹಾಕಿ ಟೈರ್ ಬಿಚ್ಚುತ್ತಿದ್ದ ವೇಳೆ ಜಾಕ್ ಸ್ಕಿಡ್ ಆಗಿ ಲಾರಿ ಮೈಮೇಲೆ ಹರಿದು ಗಂಭಿರ ಗಾಯಗೊಂಡಿದ್ದರು. ಅವರನ್ನು ಕೂಡಲೇ ನೆಲಮಂಗಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.