ಕನಕಪುರ ಆರ್ಯನ್​ ಇಂಜಿನಿಯರಿಂಗ್​ ಆವರಣದಲ್ಲಿ ದೇಸಿ ನಿರ್ಮಿತ, ಸಂಪೂರ್ಣ ಸ್ವಯಂ ಚಾಲಿತ ರೇಷ್ಮೆ ನೂಲು ತೆಗೆಯುವ ಯಂತ್ರವನ್ನು ಡಾ.ಶಿವಕುಮಾರ್​ ಲೋಕಾರ್ಪಣೆ ಮಾಡಿದರು. ಬಾಲಕೃಷ್ಣ ಆರ್ಯ ಹಾಗೂ ಪ್ರಧ್ಯುಮ್ನ ಆರ್ಯ, ಪೆರಿಯಸಾಮಿ ಹಾಗೂ ಇತರರಿದ್ದರು.  
ಬೆಂಗಳೂರು ದಕ್ಷಿಣ

ದೇಸಿ ತಂತ್ರಜ್ಞಾನದಲ್ಲಿ ನೂಲು ತೆಗೆಯುವ ಯಂತ್ರ ಸಿದ್ಧ

ರೇಷ್ಮೆ ನಗರ ಡೆಸ್ಕ್
ಕನಕಪುರ: ಸುಮಾರು ಮೂರು ವರ್ಷಗಳಿಂದ ಕೈಗೊಂಡ ಸಂಶೋಧನೆಯ ಫಲವಾಗಿ ಸ್ವಯಂ ಚಾಲಿತ ರೇಷ್ಮೆ ನೂಲು ತೆಗೆಯುವ ಯಂತ್ರ ಅಭಿವೃದ್ಧಿಗೊಂಡಿದೆ. ಈ ಯಂತ್ರ ರೀಲರ್​ಗಳ ಮಾನವ ಸಂಪನ್ಮೂಲ ಕಡಿತಗೊಳಿಸುವ ಜತೆಗೆ ನೂಲು ತಯಾರಿಸುವಲ್ಲಿನ ಸಮಯವನ್ನೂ ಉಳಿಸಲಿದೆ.
ನಗರದ ಆರ್ಯನ್​ ಇಂಜಿನಿಯರಿಂಗ್​ ಸಂಸ್ಥೆ ಆವರಣದಲ್ಲಿ ಮಂಗಳವಾರ ಸ್ವಯಂಚಾಲಿತ ರೇಷ್ಮೆ ನೂಲು ತೆಗೆಯುವ ಯಂತ್ರಕ್ಕೆ ಚಾಲನೆ ನೀಡಿದ ಕೇಂದ್ರ ರೇಷ್ಮೆ ಬೋರ್ಡ್​ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್​, ದೇಸಿ ತಂತ್ರಜ್ಞಾನ ಆಧಾರಿತ ನೂಲು ತೆಗೆಯುವ ಯಂತ್ರವು ದೇಶದ ಆತ್ಮನಿರ್ಭರತೆಯ ಇತಿಹಾಸಕ್ಕೆ ಮಹತ್ವದ ಸೇರ್ಪಡೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಂಪ್ರದಾಯಿಕವಾಗಿ ಚರಕ ಬಳಸಿ ರೇಷ್ಮೆಗೂಡಿನಿಂದ ನೂಲು ತೆಗೆಯುತ್ತಿದ್ದ ಕಾಲ ಇತ್ತು. ತಂತ್ರಜ್ಞಾನ ಮುಂದುವರಿದಂತೆ ಈ ೇತ್ರದಲ್ಲಿ ಅನೇಕ ಆವಿಷ್ಕಾರಗಳಾಗಿ ಯಾಂತ್ರಿಕ ವ್ಯವಸ್ಥೆಗಳು ಬಂದಿವೆ. ಅದರ ಲವಾಗಿ ಇಲ್ಲಿಯ ರೇಷ್ಮೆ ಉತ್ಪನ್ನಗಳು ದೇಶವಷ್ಟೇ ಅಲ್ಲದೆ ವಿದೇಶಿಗರ ಮನವನ್ನೂ ಸೆಳೆಯುತ್ತಿವೆ ಎಂದರು.
ಮೇಕ್​ ಇನ್​ ಇಂಡಿಯಾದ ಪರಿಕಲ್ಪನೆ ವ್ಯಾಪಕಗೊಳ್ಳುತ್ತಿದ್ದ ಕಾಲದಲ್ಲಿ ರೇಷ್ಮೆ ನೂಲು ತೆಗೆಯುವಲ್ಲಿ ಭಾರತೀಯತೆ ಪ್ರದರ್ಶಿಸಬೇಕಾದ ಅಗತ್ಯ ಇತ್ತು. ಬಹುಶ@ ಜಪಾನ್​ ಮತ್ತು ಚೀನಾಗಳಲ್ಲಿ ಮಾತ್ರ ಲಭ್ಯವಿದ್ದ ಈ ತಂತ್ರಜ್ಞಾನದ ಯಂತ್ರ ಇನ್ಮುಂದೆ ಭಾರತದಲ್ಲಿಯೇ ನಿರ್ಮಾಣಗೊಂಡು, ಎಲ್ಲರಿಗೂ ಲಭ್ಯವಾಗಲಿದೆ ಎಂದರು.
ಸಂಸ್ಥೆ ಮಾಲೀಕ ಬಾಲಕೃಷ್ಣ ಆರ್ಯ ಮಾತನಾಡಿ, ಚೀನಾ ರೇಷ್ಮೆ ಹಾವಳಿ, ಕಾರ್ಮಿಕರ ಕೊರತೆ ಹಾಗೂ ನೀರಿನ ಅಭಾವಕ್ಕೆ ಸಿಲುಕಿ ನಲುಗಿರುವ ದೇಶದ ರೇಷ್ಮೆ ಉದ್ಯಮಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡುವ ಮೂಲಕ ಇದೇ ಮೊದಲ ಬಾರಿಗೆ ಯಂತ್ರ ಅವಿಷ್ಕಾರಗೊಳಿಸಲಾಗಿದೆ. ಈ ಹೊಸ ಯಂತ್ರಕ್ಕೆ 10800 ಬಗೆಯ ವಿಭಿನ್ನ ಬಿಡಿ ಭಾಗಗಳನ್ನು ಬಳಸಲಾಗಿದೆ. ಬಹುತೇಕವಾಗಿ ನಾವೇ ವಿನ್ಯಾಸ ಮಾಡಿದ್ದೇವೆ ಎಂದರು.
ಸದ್ಯ ಯಂತ್ರಕ್ಕೆ 6 ಕೋಟಿ ರೂ. ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರ ಸಮ್ಮತಿ ನೀಡಿದರೆ ಶೇ.75 ಸಬ್ಸಿಡಿ ದೊರೆಯಲಿದೆ ಎಂದ ಅವರು, ದಿನಕ್ಕೆ 50ರಿಂದ 60 ಕೆಜಿ ನೂಲು ತಯಾರಿಸಬಹುದು ಎಂದರು.
ಸಿಎಸ್​ಟಿ ಆರ್​ಐ ನಿರ್ದೇಶಕ ಡಾ.ಪೆರಿಯಸಾಮಿ, ಮಾಜಿ ನಿರ್ದೇಶಕ ನಾಯಕ್​, ಚಕ್ರವರ್ತಿ ಸೂಲಿಬೆಲೆ ಹಾಗೂ ಇತರರು ಇದ್ದರು.