ಚನ್ನಪಟ್ಟಣ: ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ ಸರ್ಕಾರಿ ಬಸ್ನ ಸೀಟು ಹಿಡಿಯುವ ಆತುರದಲ್ಲಿ ಮಹಿಳೆ ಕೆಳಗೆ ಬಿದ್ದಿದ್ದು, ಚಕ್ರ ಹರಿದ ಹಿನ್ನೆಲೆಯಲ್ಲಿ ಕೈ ತುಂಡಾಗಿ ನಜ್ಜುಗುಜ್ಜಾಗಿದೆ.
ತಾಲೂಕಿನ ಹೊನ್ನಾನಾಯಕಹಳ್ಳಿಯ ಜಯಮ್ಮ (55) ಕೆಲಸ ನಿಮಿತ್ತ ನಗರಕ್ಕೆ ಬಂದಿದ್ದು, ಗ್ರಾಮಕ್ಕೆ ತೆರಳಲು ನಿಲ್ದಾಣಕ್ಕೆ ಆಗಮಿಸಿದ್ದರು. ಕೆಸ್ತೂರು ಮಾರ್ಗದ ಬಸ್ ನಿಲ್ದಾಣಕ್ಕೆ ಬಂದಾಗ ಸೀಟಿಗಾಗಿ ಕರವಸ ಹಾಕಲು ಯತ್ನಿಸಿದ್ದಾರೆ. ಈ ವೇಳೆ ನೂಗುನುಗ್ಗಲಿನಲ್ಲಿ ಕೆಳಗೆ ಬಿದ್ದಿದ್ದಾರೆ. ಆಗ ಬಸ್ಸಿನ ಹಿಂದಿನ ಚಕ್ರಕ್ಕೆ ಕೈ ಸಿಲುಕಿ, ಕೈ ಸಂಪೂರ್ಣ ನಜ್ಜುಗುಜ್ಜಾಗಿದೆ. ಕೂಡಲೇ ಇವರನ್ನು ನಗರದ ಸಾರ್ವಜನಿಕ ಆಸ್ಪತ್ರೆ ಸಾಗಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.