ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

ಚಿಕಿಕ್ಸೆ ಫಲಿಸದೆ ಮಹಿಳೆ ಸಾವು

ರಾಮನಗರ: ಬಾಲಗೇರಿಯಲ್ಲಿ ಸೊಪ್ಪು ಮತ್ತು ತರಕಾರಿ ಬೆಳೆದಿದ್ದ ಜಾಗದಲ್ಲಿ ಹಸು ಮೇಯಿಸಿದ್ದನ್ನು ಪ್ರಶ್ನಿಸಿದ ಮಹಿಳೆಯನ್ನು ವ್ಯಕ್ತಿಯೊಬ್ಬ ಥಳಿಸಿ ಕೊಲೆ ಮಾಡಿದ್ದಾರೆ.
ಬಾಲಗೇರಿ ನಿವಾಸಿ ತಬಸ್ಸುಮ್​ (50) ಕೊಲೆಯಾದವರು. ಕೊಲೆ ಮಾಡಿದ ಆರೋಪದ ಮೇಲೆ ಬಡಾವಣೆಯ ಶ್ರೀನಿವಾಸ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ರಾಮನಗರ ಟೌನ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟನೆ ಹಿನ್ನೆಲೆ: ನಗರದ ಬಾಲಗೇರಿಯಲ್ಲಿ ಮನೆ ಪಕ್ಕದಲ್ಲಿದ್ದ ಜಾಗದಲ್ಲಿ ತಬಸ್ಸುಮ್​ ಸೊಪ್ಪು ಮತ್ತು ತರಕಾರಿ ಬೆಳೆಯುತ್ತಿದ್ದರು. ಅದೇ ಜಾಗದಲ್ಲಿ ಶ್ರೀನಿವಾಸ್​ ದನಗಳನ್ನು ಮೇಯಲು ಬಿಡುತ್ತಿದ್ದ. ಈ ಕಾರಣಕ್ಕೆ ಎರಡು ತಿಂಗಳ ಹಿಂದೆ ಇಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ಊರಿನ ಹಿರಿಯರು ಶ್ರೀನಿವಾಸ್​ಗೆ ಬುದ್ಧಿ ಹೇಳಿ ಸಾವಿರ ರೂ. ದಂಡ ವಿಧಿಸಿದ್ದರು. ಅಂದಿನಿಂದ ತಬಸ್ಸುಮ್​ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದ ಈತ, ಜೂ.1ರಂದು ಸಂಜೆ ಮತ್ತೆ ಅದೇ ಜಾಗದಲ್ಲಿ ಹಸುಗಳನ್ನು ಮೇಯಲು ಬಿಟ್ಟಿದ್ದ. ಅದನ್ನು ಪ್ರಶ್ನಿಸಿದ ತಬಸ್ಸುಮ್​ ಅವರನ್ನು ಮನಸೋ ಇಚ್ಛೆ ಥಳಿಸಿದ್ದ.
ಹಲ್ಲೆಯಿಂದ ತಬಸ್ಸುಮ್​ ಆರೋಗ್ಯದಲ್ಲಿ ಏರುಪೇರಾಗಿತ್ತು. ತಕ್ಷಣವೇ ತಬಸ್ಸುಮ್​ ಸಹೋದರರು ಜಿಲ್ಲಾಸ್ಪತ್ರೆಗೆ ಕರೆತರುತ್ತಲೆ ಆಸ್ಪತ್ರೆ ಆವರಣದಲ್ಲೇ ತಬಸ್ಸುಮ್​ ಪ್ರೆ ತಪ್ಪಿ ಬಿದ್ದರು. ಕೂಡಲೇ ಅವರನ್ನು ತುರ್ತು ವಿಭಾಗಕ್ಕೆ ಸೇರಿಸಲಾಗಿತ್ತು. ನಂತರ ಪರಿಶೀಲಿಸಿದ ವೈದ್ಯರು ತಬಸ್ಸುಮ್​ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.
ಮರಣೋತ್ತರ ಪರೀೆ ಬಳಿಕ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಮೃತರ ಸಹೋದರಿ ದೂರಿನ ಮೇರೆಗೆ ಶ್ರೀನಿವಾಸ್​ ವಿರುದ್ಧ ರಾಮನಗರ ಟೌನ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುನ್ನಾ ಮತ್ತು ತಬಸ್ಸುಮ್​ ದಂಪತಿಗೆ ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ತಬಸ್ಸುಮ್​ ಇತ್ತೀಚೆಗೆ ಶಸಚಿಕಿತ್ಸೆ ಮಾಡಿಸಿಕೊಂಡಿದ್ದರು ಎನ್ನಲಾಗಿದೆ.