ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

ಅಪಘಾತದಲ್ಲಿ ಮಹಿಳೆ ಸಾವು

ಕನಕಪುರ: ತಾಲೂಕಿನ ಕಲ್ಲಹಳ್ಳಿಯಲ್ಲಿ ಸೋಮವಾರ ಶಾಲಾ ಬಸ್​ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್​ ಸವಾರನ ಕಾಲು ಮುರಿದಿದೆ.
ಕೂಟಗಲ್​ ಗ್ರಾಮದ ತುಳಸಿ(25) ಮೃತೆ. ರಾಮನಗರ ತಾಲೂಕಿನ ಅಂಗನಹಳ್ಳಿ ಶಿವರುದ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವರುದ್ರ ಪತ್ನಿ ತುಳಸಿ ಅವರೊಂದಿಗೆ ದುನ್ನಸಂದ್ರದಲ್ಲಿರುವ ಸಹೋದರನ ಮನೆಗೆ ತೆರಳುತ್ತಿದ್ದ ವೇಳೆ ಟನೆ ಸಂಭವಿಸಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸ್​ ಠಾಣೆ ಅಧಿಕಾರಿ ಆಕಾಶ್​ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.