ಕನಕಪುರ: ಸಂಗಮ ವನ್ಯಜಿವಿ ವಿಭಾಗದ ಕಾಡಿನಿಂದ ಹೊರಬಂದ ಕಾಡಾನೆಯೊಂದು ರಸ್ತೆಗೆ ಬಂದಿದೆ. ಇದೇ ವೇಳೆ ಆಗಮಿಸಿದ ಬೈಕ್ ಸವಾರ ಗಾಬರಿಗೊಂಡು ಬಿದ್ದು ಗಾಯಗೊಂಡಿದ್ದಾನೆ.
ಎಡಮಾರನಹಳ್ಳಿಯ ರುದ್ರ (30) ಗಾಯಗೊಂಡವ. ತಾಲೂಕಿನ ಅಚ್ಚಲು ಗ್ರಾಮ ಪಂಚಾಯಿತಿಯಲ್ಲಿ ಕರ ವಸೂಲಿಗಾರನಾಗಿರುವ ರುದ್ರ ಸೋಮವಾರ ಯಡಮಾರನಹಳ್ಳಿಯಿಂದ ಬೈಕ್ನಲ್ಲಿ ಸಾತನೂರು ತೆರಳುತ್ತಿದ್ದ ವೇಳೆ ಡಿಕೆ ನಗರದ ಬಳಿ ರಸ್ತೆಗೆ ಕಾಡಾನೆ ಅಡ್ಡ ಬಂದಿದೆ. ಭಯದಿಂದ ಬೈಕ್ನಿಂದ ಬಿದ್ದ ರುದ್ರ ತಲೆಗೆ ತೀವ್ರ ಗಾಯವಾಗಿದ್ದು, ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾನೆ.
ಜನವಸತಿಯತ್ತ ಕಾಡಾನೆ ಬರುತ್ತಿದ್ದ ವಿಷಯ ತಿಳಿದ ವನ್ಯಜಿವಿ ವಿಭಾಗದ ಎಸಿಎ್ ನಾಗೇಂದ್ರ ಪ್ರಸಾದ್, ಆರ್ಎ್ಒ ಅನಿಲ್, ಡಿಆರ್ಎ್ಒ ಶರಣಪ್ಪ ಮತ್ತು ಸಿಬ್ಬಂದಿ ಆನೆಯನ್ನು ಕಾಡಿಗೆ ಓಡಿಸಿದರು. ಈ ವೇಳೆ ಆನೆಯು ದೊಡ್ಡ ಆಲಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಗೂ ನುಗ್ಗಿತ್ತು, ಬಳಿಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಿಗಟ್ಟಿದರು ಎನ್ನಲಾಗಿದೆ. ಇನ್ನು ಗಾಯಾಳುವನ್ನು ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆೆ.