ಕೈಲಾಂಚ ಹೋಬಳಿ ಹೊಸದೊಡ್ಡಿ ಗ್ರಾಮದಲ್ಲಿ ಆನೆಗಳು ರೈತರ ತೆಂಗಿನ ಫಸಲು ನಾಶ ಪಡಿಸಿರುವುದು.
ಕೈಲಾಂಚ: ಹೋಬಳಿಯ ಹೊಸದೊಡ್ಡಿ&ಕಾಡನಕುಪ್ಪೆ ಗ್ರಾಮಗಳಲ್ಲಿ ಮೂರು ಆನೆಗಳ ಹಿಂಡು ಮಂಗಳವಾರ ರಾತ್ರಿ ದಾಳಿ ಮಾಡಿ ಶಂಭುಲಿಂಗಯ್ಯ, ಸೋಮಣ್ಣ, ಚಂದ್ರೇಗೌಡ, ಚಿಕ್ಕೇಗೌಡ, ಗೋಪಾಲ್, ರಾಜು ಎಂಬುವವರ ಬೋರ್ವೆಲ್ ಪರಿಕರ ಸೇರಿ ವಿವಿಧ ಫಸಲು ನಾಶಪಡಿಸಿವೆ.
ತೆಂಗಿನಕಲ್ಲು ಅರಣ್ಯದಿಂದ ಹೊರಬರುತ್ತಿರುವ ಆನೆಗಳ ಹಿಂಡು ರೈತರ ತೋಟಗಳಿಗೆ ಲಗ್ಗೆ ಇಟ್ಟು ಬಾಳೆತೋಟ, ತೆಂಗು, ಮಾವಿನ ಮರಗಳು, ನೀರಾವರಿ ಪರಿಕರ, ಸೀಮೆಹುಲ್ಲು, ಹಲಸಿನಮರ ಮುಂತಾದ ಬೆಳೆಗಳನ್ನು ನಾಶಪಡಿಸಿವೆ.