ಎಐ ಚಿತ್ರ 
ಬೆಂಗಳೂರು ದಕ್ಷಿಣ

ದೈತ್ಯ ಪ್ರಾಣಿಗಳ ಸಾವಿಗೆ ಹೊಣೆ ಯಾರು?

ಕನಕಪುರ: ತಾಲೂಕಿನ ಸಾತನೂರು ಅರಣ್ಯ ಪ್ರದೇಶದ ಅರ್ಕಾವತಿ ನದಿಯ ಹಾರೋಬೆಲೆ ಜಲಾಶಯ ಹಿನ್ನೀರಿನಲ್ಲಿ ಎರಡು ಆನೆಗಳು ಜಲಸಮಾಧಿಯಾಗಲು ಅಧಿಕಾರಗಳ ರ್ನಿಲಕ್ಷ$್ಯವೋ ಅಥವಾ ಬೇರೆ ಕಾರಣ ಇದೆಯೇ ಎಂಬ ಸಂಶಯ ವ್ಯಕ್ತವಾಗುತ್ತಿದ್ದು, ದೈತ್ಯ ಪ್ರಾಣಿಗಳ ಸಾವಿಗೆ ಯಾರು ಹೊಣೆ ಎಂಬ ಪ್ರಶ್ನೆ ಮೂಡಿಸಿದೆ.
ಹೌದು...! ನೈಸರ್ಗಿಕ ಕಾನನದ ಬೀಡಾಗಿರುವ ಸಾತನೂರು ಅರಣ್ಯ ಹಾಗೂ ಹಾರೋಬೆಲೆ ಜಲಾಶಯದ ಹಿನ್ನೀರು ಪ್ರದೇಶ ಈ ದುರಂತದಿಂದಾಗಿ ಇಲ್ಲಿಯೂ ವನ್ಯಜಿವಿಗಳಿಗೆ ಉಳಿಗಾಲವಿಲ್ಲವೇ ಎಂಬ ಅನುಮಾನ ಮೂಡಿಸಿದೆ.
ಬೆಂಗಳೂರು ದಣ ಜಿಲ್ಲೆ ಅಷ್ಟೇ ಅಲ್ಲದೇ ಚಾಮರಾಜನಗರ, ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ಆನೆ, ಹುಲಿ ದಾಳಿಯಿಂದ ರೈತರು, ಜನಸಾಮಾನ್ಯರು ಬಲಿಯಾಗುತ್ತಿದ್ದಾರಲ್ಲದೇ ಜನರಿಂದಲೂ ವನ್ಯ ಜೀವಿಗಳಿಗೆ ಕುತ್ತು ಇರುವುದನ್ನು ಅಲ್ಲಗಳೆಯುವಂತಿಲ್ಲ. ಈ ಸಂರ್ಷಕ್ಕೆ ವನ್ಯಸಂಪತ್ತು ಸಂರಕ್ಷಣೆ ಹೊಣೆಹೊತ್ತಿರುವ ಅರಣ್ಯ ಅಧಿಕಾರಿ, ಸಿಬ್ಬಂದಿಯ ರ್ನಿಲಕ್ಷ$್ಯ, ವೈಲ್ಯವೇ ಕಾರಣ ಎಂದು ಒಂದಿಷ್ಟು ಮಂದಿ ಇಲಾಖೆಯತ್ತ ಬೊಟ್ಟು ಮಾಡಿದರೆ, ಜನರಿಗೂ ವನ್ಯ ಜೀವಿಸಂಪತ್ತು ರಕ್ಷಣೆಯ ಶಿಕ್ಷಣದ ಕೊರತೆ ಇದೆ ಎಂಬ ವಾದವೂ ಇದೆ.
ಇದೆಲ್ಲದಕ್ಕಿಂತ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೈಗಾರೀಕರಣ ಮತ್ತು ನಗರೀಕರಣ ವನ್ಯ ಜೀವಿಗಳ ಆವಾಸ್ಥಾನಗಳನ್ನು ನಾಶಪಡಿಸುತ್ತಿದ್ದು, ಇದೇ ಕಾರಣಕ್ಕೆ ವನ್ಯಜಿವಿಗಳು ಮಾನವನ ವಸಾಹತುವಿನ ಹತ್ತಿರಕ್ಕೆ ಬರಲು, ಮಾನವನೊಂದಿಗೆ ಸಂರ್ಷಕ್ಕೆ ಇಳಿಯುತ್ತಿವೆ ಎಂದು ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜವಾಬ್ದಾರಿ ಇರಬೇಕಿತ್ತು....

ಆನೆ ಕಾರ್ಯಪಡೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆನೆಗಳನ್ನು ಸ್ವಸ್ಥಾನಕ್ಕೆ ಕಳುಹಿಸುವ ವೇಳೆ ಸೂಕ್ತ ಹಾಗೂ ಜಾಗೃತ ಕ್ರಮವಹಿಸಿದ್ದರೆ ಎರಡು ದೈತ್ಯಪ್ರಾಣಿಗಳು ಜೀವ ಕಳೆದುಕೊಳ್ಳುತ್ತಿರಲಿಲ್ಲ. 7 ಆನೆಗಳಲ್ಲಿ 2 ಆನೆಗಳು ನಾಪತ್ತೆಯಾದುದನ್ನು ಗಂಭೀರವಾಗಿ ಪರಿಗಣಿಸಿದ್ದರೂ ದುರಂತ ಸಂಭವಿಸುತ್ತಿರಲಿಲ್ಲ. ಹಿನ್ನೀರಿನಲ್ಲಿ ಕಳೆ ಗಮನಿಸಿಯಾದರೂ ಆನೆಗಳು ಅತ್ತ ಸಾಗದಂತೆ ಅವುಗಳನ್ನು ಬೇರೆ ಪಥದಲ್ಲಿ ಸ್ವಸ್ಥಾನಕ್ಕೆ ಅಟ್ಟಬಹುದಿತ್ತು.

ಕೊಂಚ ಕ್ರಮಿಸಿದರೆ ಲೇಔಟ್​

ಈ ಹಿಂದೆ ಹಾರೋಬೆಲೆ ಹಿನ್ನೀರಿನಲ್ಲಿ ವಿಹರಿಸುತ್ತಿದ್ದ ಆನೆ ಸೇರಿ ಇತರ ವನ್ಯಜಿವಿಗಳು
ಕೃಷಿ ಚಟುವಟಿಕೆ ಸೇರಿದಂತೆ ಹಲವು ಕಾರಣಗಳಿಂದ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅರಣ್ಯನಾಶದಿಂದ ನೆಮ್ಮದಿ ಕಳೆದುಕೊಂಡಿವೆ. ಆಹಾರ, ನೀರಿಗಾಗಿ ಕಾಡಂಚಿನ ಗ್ರಾಮಗಳಿಗೆ ನುಗ್ಗಿ ಉಪಟಳ ನೀಡುತ್ತಿವೆ. ಕಾಡಿನಿಂದ 5&6 ಕಿ.ಮೀ ದೂರದಲ್ಲಿದ್ದ ಹೊಲ, ಗದ್ದೆ, ಗ್ರಾಮಗಳು ದಿನೇದಿನೆ ಕಾಡಿನೊಳಕ್ಕೂ ಸರಿಯುತ್ತಿದ್ದು, ಕಾಡುಪ್ರಾಣಿಗಳು ಕೊಂಚ ಕ್ರಮಿಸಿದರೂ ಲೇಔಟ್​, ಹಳ್ಳಿಗಳು ಸಿಗುತ್ತವೆ. ಇದು ಜಿಲ್ಲೆಯಲ್ಲಿ ಮಾನವ ಮತ್ತು ಪ್ರಾಣಿಗಳ ಸಂರ್ಷ ಹೆಚ್ಚಾಗಲು ಕಾರಣ ಎಂದು ಪ್ರಾಣಿಪ್ರಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ನಾಗರಿಕರ ಹೊಣೆಯೂ ಇದೆ...

ವನ್ಯ ಜೀವಿ ಸಂರಕ್ಷಣಾ ಕಾಯ್ದೆಗೆ ಹಲವು ನಿಯಮ ಹಾಗೂ ಯೋಜನೆಗಳನ್ನು ರೂಪಿಸಿ ಸರ್ಕಾರ ಕೋಟ್ಯಂತರ ರೂ. ಅನುದಾನ ವಿನಿಯೋಗಿಸುತ್ತದೆ. ಆದರೂ ಅಧಿಕಾರಿಗಳ ರ್ನಿಲಕ್ಷ$್ಯ, ಅಸಡ್ಡೆಯಿಂದ ವನ್ಯ ಜೀವಿಗಳು ಸಾವಿಗೀಡಾಗುತ್ತಿವೆ ಎಂಬ ಆರೋಪ ಇದೆ. ಆದರೆ ವನ್ಯಜಿವಿ ಸಂಪತ್ತು ರಸುವಲ್ಲಿ ಎಲ್ಲರೂ ವಿಫಲರಾಗುತ್ತಿದ್ದಾರೆ. ಇದಕ್ಕೆ ಬರೀ ಸರ್ಕಾರ, ಇಲಾಖೆಯನ್ನು ದೂಷಿಸಿದರೆ ಸಾಲದು. ನಾಗರಿಕರೂ ಆನೆಗಳ ಸಾವಿನ ಹೊಣೆ ಹೊತ್ತು, ಪರಿಸರ ಮತ್ತು ಕಾಡು ಪ್ರಾಣಿಗಳನ್ನು ರಸುವ ಜವಾಬ್ದಾರಿ ಹೊರಬೇಕಿದೆ.
"

ಆನೆಗಳನ್ನು ಸ್ವಸ್ಥಾನಕ್ಕೆ ಕಳುಹಿಸುವಲ್ಲಿ ಅಧಿಕಾರಿಗಳ ರ್ನಿಲಕ್ಷ$್ಯ ಎದ್ದು ಕಾಣುತ್ತಿದೆ. ಸರ್ಕಾರ ಮತ್ತು ಅಧಿಕಾರಿಗಳು ವನ್ಯ ಜೀವಿಗಳ ಸಂರಕ್ಷಣೆಯಲ್ಲಿ ಕಣ್ಣು ಒರೆಸುವ ನಾಟಕವಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವನ್ಯ ಜೀವಿಗಳ ಸಾವು ಆತಂಕ ಮತ್ತು ಖಂಡನೀಯ. ಆನೆಗಳ ಸಾವಿಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.

— > ಮಂಜುನಾಥ್​, ಅಧ್ಯಕ್ಷ ಪರಿಸರ ಮತ್ತು ವನ್ಯಜಿವಿ ಹಿತ ರಕ್ಷಣಾ ಸಮಿತಿ