ಸೋಲೂರು ಹೋಬಳಿ ಕೇಂದ್ರದಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ  
ಬೆಂಗಳೂರು ದಕ್ಷಿಣ

3 ವರ್ಷಗಳಿಂದ ಕೆಟ್ಟು ನಿಂತಿರುವ ನೀರಿನ ಘಟಕ

ಕುದೂರು: ಸೋಲೂರು ಹೋಬಳಿ ಕೇಂದ್ರದಲ್ಲಿ ಕಳೆದ ಮೂರು ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಟಕ ಕೆಟ್ಟು ನಿಂತಿದ್ದು, ಈವರೆಗೂ ದುರಸ್ತಿಯಾಗದಿರುವುದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಸೋಲೂರಿನ ಪೊಲೀಸ್​ ಕ್ವಾರ್ರ್ಟಸ್​ ಹಿಂಭಾಗ ಪಂಚಾಯಿತಿಯಿಂದ ಕೂಗಳತೆ ದೂರದಲ್ಲಿರುವ ಶುದ್ಧ ಕುಡಿಯುವ ನೀರಿನ ಟಕ ಸ್ಥಳಿಯ ಆಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳ ನಿರ್ವಹಣೆ ಕೊರತೆಯಿಂದ ಸ್ಥಗಿತಗೊಂಡಿದೆ. ಸುಮಾರು 8 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಸೋಲೂರು ಹಾಗೂ ಸುತ್ತಮುತ್ತಲ ಹಳ್ಳಿಗಳಿಗೆ ಇರುವುದು ಎರಡು ಶುದ್ಧ ನೀರಿನ ಟಕ ಮಾತ್ರ. ಅದರಲ್ಲಿ ಒಂದು ಟಕ 3 ವರ್ಷಗಳಿಂದ ಕೆಟ್ಟು ನಿಂತಿರುವುದರಿಂದ ಇರುವ ಮತ್ತೊಂದು ಟಕವನ್ನೇ ಸಾರ್ವಜನಿಕರು ಅವಲಂಭಿಸಿದ್ದಾರೆ.
ಟಕ ಆರಂಭದಲ್ಲಿ ನೂರಾರು ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುತ್ತಿತ್ತು. ಆದರೆ ತಾಂತ್ರಿಕ ದೋಷದಿಂದ ಟಕ ಕಾರ್ಯನಿರ್ವಹಿಸದೆ ನಿಂತಿದೆ. ಬೇಸಿಗೆ ಹಾಗೂ ಮಳೆಗಾಲದಲ್ಲಿಯೂ ಶುದ್ಧ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಿರುವ ಸಂದರ್ಭದಲ್ಲಿ ಟಕ ಬಂದ ಆಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಗ್ರಾಮಸ್ಥರು ಹಲವು ಬಾರಿ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಪರಿಹಾರ ದೊರೆತಿಲ್ಲ. ಕೂಡಲೇ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಟಕವನ್ನು ದುರಸ್ತಿ ಮಾಡಿ ಪುನ@ ಸಾರ್ವಜನಿಕರ ಸೇವೆಗೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಸೋಲೂರು ಗ್ರಾಪಂ ಪಿಡಿಒಗೆ ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆಗೆ ಸಿಗುತ್ತಿಲ್ಲ.
"

ಸೋಲೂರು ಹೋಬಳಿ ಕೇಂದ್ರದಲ್ಲಿ ಶುದ್ಧ ನೀರಿನ ಘಟಕದ ಅನಿವಾರ್ಯತೆ ಇದೆ. ಈ ಬಗ್ಗೆ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಶುದ್ಧ ನೀರಿನ ಸೌಲಭ್ಯವನ್ನು ಆದಷ್ಟು ಬೇಗ ಅಧಿಕಾರಿಗಳು ಕಲ್ಪಿಸಲು ಕ್ರಮ ಕೈಗೊಳ್ಳಬೇಕು.

— > ಸತೀಶ್​, ಗ್ರಾಮಸ್ಥ, ಸೋಲೂರು