ರಾಮನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮೃತ ವಿಶಾಲ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಜೆಡಿಎಸ್ ಯುವ ಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ.
ರಾಮನಗರ: ಟ್ರ್ಯಾಕ್ಟರ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಅರಳೀಮರದೊಡ್ಡಿ ವಿಶಾಲ್ (23) ಚಿಕಿತ್ಸೆ ಫಲಿಸದೆ ಭಾನುವಾರ ನಿಧನರಾದರು.
ಗ್ರಾಮದ ಅಂಚೆ ಇಲಾಖೆ ಅಧಿಕಾರಿ ಉಮೇಶ್ ಅವರ ಪುತ್ರ ವಿಶಾಲ್ ಮೇ 27ರಂದು ಕೆಂಪನಹಳ್ಳಿಯಿಂದ ಟ್ರ್ಯಾಕ್ಟರ್ನಲ್ಲಿ ಎಂ.ಸ್ಯಾಂಡ್ ಕಲ್ಲಿನಪುಡಿ ತರುತ್ತಿದ್ದ ವೇಳೆ ಬೆಂಗಳೂರು&ಮೈಸೂರು ಸರ್ವೀಸ್ ರಸ್ತೆ ಚಾಮುಂಡೀಪುರ ಬಳಿ ಬಡಾವಣೆಗೆ ತಿರುವು ಪಡೆಯಲು ಎತ್ತರ ರಸ್ತೆಯಲ್ಲಿ ಸಾಗುವಾಗ ಟ್ರ್ಯಾಕ್ಟರ್ ಇಂಜಿನ್ ಮೇಲೆ ಎತ್ತಿದ ಪರಿಣಾಮ ಹೊಟ್ಟೆಗೆ ಸ್ಟೇರಿಂಗ್ ತಗುಲಿ ಹೊಟ್ಟೆಗೆ ಗಂಭೀರ ಗಾಯವಾಗಿತ್ತು. ವಿಶಾಲ್ನನ್ನು ಕೂಡಲೇ ಮನೆಯವರು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಲಿಸಿಲ್ಲ ಎನ್ನಲಾಗಿದೆ. ಮೃತದೇಹವನ್ನು ರಾಮನಗರ ಜಿಲ್ಲಾಸ್ಪತ್ರೆಗೆ ತಂದು, ಇಲ್ಲಿ ಮರಣೋತ್ತರ ಪರೀೆಗೆ ಒಳಪಡಿಸಿ, ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ವಾರದಲ್ಲಿ ಜರ್ಮನ್ಗೆ ಹೋಗಬೇಕಿತ್ತು...
ಇಂಜಿನಿಯರಿಂಗ್ ಮುಗಿಸಿದ್ದ ವಿಶಾಲ್ ಉನ್ನತ ವ್ಯಾಸಂಗಕ್ಕಾಗಿ ಜರ್ಮನಿಗೆ ಇನ್ನೇನು ಒಂದು ವಾರದಲ್ಲಿ ಪ್ರಯಾಣ ಬೆಳಸಬೇಕಿತ್ತು. ಆದರೆ ವಿಧಿ ಟ್ರಾ$್ಯಕ್ಟರ್ ರೂಪದಲ್ಲಿ ಬಂದು ಆತನ ಹಾಗೂ ಕುಟುಂಬದ ಕನಸಿಗೆ ಕೊಳ್ಳಿ ಇಟ್ಟಿತು. ವಿಶಾಲ್ಗೆ ತಂದೆ, ತಾಯಿ, ಸಹೋದರ ಇದ್ದಾರೆ. ಆಸ್ಪತ್ರೆ ಶವಾಗಾರದ ಮುಂದೆ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ವಿಷಯ ತಿಳಿದು ಜೆಡಿಎಸ್ ಯುವ ಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಮನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.