ಬಿವೈ ವಿಜಯೇಂದ್ರ ಯುವ ಸೇನೆ ವತಿಯಿಂದ ಪಾದಯಾತ್ರೆ ಹಮ್ಮಿಕೊಂಡಿರುವುದು. 
ಬೆಂಗಳೂರು ದಕ್ಷಿಣ

ವಿಜಯೇಂದ್ರ ಉತ್ತಮ ಭವಿಷ್ಯಕ್ಕಾಗಿ ಅಭಿಮಾನಿಗಳ ಪಾದಯಾತ್ರೆ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಉಜ್ವಲ ಭವಿಷ್ಯಕ್ಕಾಗಿ ಪಾದಯಾತ್ರೆ
  • ವಿಜಯೇಂದ್ರ ಯುವ ಸೇನೆವತಿಯಿಂದ ಪಾದಯಾತ್ರೆ
  • ಮಲೈ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೊರಟ ಅಭಿಮಾನಿಗಳು
ರಾಮನಗರ : ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರಿಗೆ ರಾಜಕೀಯದಲ್ಲಿ ಉನ್ನತ ಸ್ಥಾನ ದೊರಕಲಿ ಹಾಗೂ ಭವಿಷ್ಯದಲ್ಲಿ ಶುಭವಾಗಲಿ ಎಂದು ಮಲೆ ಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಡದಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಜಿ ಅಧ್ಯಕ್ಷ ವರದರಾಜಗೌಡ ಬಾಬು ತಿಳಿಸಿದರು.
ರಾಮನಗರದಲ್ಲಿ ಸೋಮವಾರ ಪಾದಯಾತ್ರೆಯಲ್ಲಿ ತಂಡದ ಜೊತೆ ಬಂದ ಸಂಧರ್ಭದಲ್ಲಿ ಐಜೂರು ಸರ್ಕಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿ.ವೈ. ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ಮಲೈ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸೋಂಪುರ ಗ್ರಾಮದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಸತತ ಎಂಟು ದಿನಗಳ ಕಾಲ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಇದು ಯಾವುದೇ ಪಕ್ಷದ ಕಾರ್ಯಕ್ರಮವಲ್ಲ. ಪಕ್ಷವನ್ನು ಹೊರತು ಪಡಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದರ ಸಂಪೂರ್ಣ ಜವಾಬ್ದಾರಿ ವಿಜಯೇಂದ್ರ ಯಡಿಯೂರಪ್ಪ ಅವರ ಅಭಿಮಾನಿಗಳು ನಿಭಾಯಿಸುತ್ತಿದ್ದಾರೆ. ಅವರಿಗೆ ರಾಜಕೀಯದಲ್ಲಿ ಉನ್ನತ ಸ್ಥಾನ ದೊರಕಲಿ, ಅವರು ರಾಜ್ಯದ ಜನತೆಯ ಸೇವೆ ಮಾಡುವಂತೆ ಆಗಲಿ ಎಂಬುದು ಈ ಪಾದಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಪಾದಯಾತ್ರೆ ಭಾನುವಾರ ಸಂಜೆ ಜಿಲ್ಲೆಯನ್ನು ಪ್ರವೇಶಿಸಿತು. ಹಾಗಾಗಿ ಅಭಿಮಾನಿಗಳು ಎಲ್ಲರೂ ಸೇರಿ ಪಾದಯಾತ್ರಿಗಳಿಗೆ ಉತ್ತಮ ಸತ್ಕಾರ ನೀಡಿದ್ದೇವೆ 1 ಸಾವಿರದಿಂದ 2 ಸಾವಿರ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು, ನಿತ್ಯ ಹೆಜ್ಜೆ ಹಾಕಲಿದ್ದಾರೆ. ಹೆಚ್ಚಾಗಿ ಯುವ ಪಡೆ ಪಾದಯಾತ್ರೆಯಲ್ಲಿ ಭಾಗವಹಿಸಿದೆ. ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ಫೆ. 22 ರ ಕೊನೆಯ ದಿನ 10ಸಾವಿರಕ್ಕೂ ಹೆಚ್ಚಿನ ಮಂದಿ ಹಾಜರಿರಲಿದ್ದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದರು.
ಪಾದಯಾತ್ರೆ ಸಾಗುತ್ತಿರುವ ಮಾರ್ಗದ ಪ್ರತಿ ತಾಲೂಕಿನಿಂದ ಜನತೆ ವಿಜಯೇಂದ್ರ ಅಭಿಮಾನಿಗಳ ಜೊತೆ ಹೆಜ್ಜೆ ಹಾಕಲಿದ್ದಾರೆ. ಚನ್ನಟ್ಟಣ, ಮದ್ದೂರು, ಮಳವಳ್ಳಿ, ಕೊಳ್ಳೇಗಾಲ. ಹನೂರು ಮಾರ್ಗವಾಗಿ ಯಾತ್ರೆ ಫೆ. 22 ರಂದು ಬೆಟ್ಟಕ್ಕೆ ತಲುಪಲಿದೆ. ಕೊನೆಯ ದಿನದಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ವರದರಾಜಗೌಡ ಬಾಬು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಜಿ ಅಧ್ಯಕ್ಷ.
ಮುಖಂಡರಾದ ಎಸ್.ಆರ್. ನಾಗರಾಜು, ಡಿ.ಕೆ. ಶಿವಕುಮಾರ್, ಮಹೇಶ್, ಪ್ರಕಾಶ್, ಎಚ್.ಎನ್. ದೀಪಕ್, ಭರತ್, ಸಿದ್ದರಾಜು, ರಮೇಶ್, ಅನಿಲ್, ಹರಿಸಂದ್ರ ಶಿವಕುಮಾರ್, ಬಿಜೆಪಿ ಮಂಜು, ಸಂಜಯ್ ಜೈನ್, ದೇವಿಕಾ, ಲೋಹಿತ್, ಭದ್ರಿನಾಥ್, ಉಮೇಶ್ ಸೇರಿದಂತೆ ಮುಂತಾದವರಿದ್ದರು.