ಶಾಸಕ ಎಚ್ ಸಿ. ಬಾಲಕೃಷ್ಣ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಮಾಗಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯರು ವಿಜಯೋತ್ಸವ ಆಚರಿಸಿದರು. ಪ್ರೇಮಾ, ಜಯಮ್ಮ ,ಪಾರ್ವತಿ ಮಂಜುಳಾ ,ಕಾವ್ಯಾ, ಗಾಯತ್ರಮ್ಮ ಗೌರಿ ಇತರರು ಇದ್ದರು. 
ಬೆಂಗಳೂರು ದಕ್ಷಿಣ

ಮಾಗಡಿಲ್ಲಿ ವಿಜಯೋತ್ಸವ

ಮಾಗಡಿಲ್ಲಿ ವಿಜಯೋತ್ಸವ
ಮಾಗಡಿ: ಶಾಸಕ ಎಚ್ ಸಿ. ಬಾಲಕೃಷ್ಣ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಮಾಗಡಿಯ ಕಾಂಗ್ರೆಸ್ ಮಹಿಳಾ ನಾಯಕಿ ಶೈಲಜಾ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ವಿಜಯೋತ್ಸವ ಆಚರಿಸಿದರು.
ಮಹಿಳಾ ನಾಯಕಿ ಶೈಲಜಾ ಮಾತನಾಡಿ, ಮಾಗಡಿ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಚ್ ಸಿ. ಬಾಲಕೃಷ್ಣ ಅವರಿಗೆ ಸಚಿವ ಸ್ಥಾನ ಸಿಕ್ಕಿರುವುದು ಖುಷಿ ವಿಷಯ. ಮುಖ್ಯಮಂತ್ರಿಗಳು ಮತ್ತು ಸಚಿವರು ಜಿಲ್ಲೆಯವರೇ ಆಗಿರುವುದರಿಂದ ಅಭಿವೃದ್ಧಿ ಕಾರ್ಯ ವೇಗವಾಗಿ ನಡೆಯಲಿವೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಕ್ಷೇತ್ರ ಜನತೆಯ ನಿರಂತರ ಬೆಂಬಲ ಹಾಗೂ ಶ್ರೀ ರಂಗನಾಥ ಸ್ವಾಮಿ, ಸೋಮೇಶ್ವರ ಸ್ವಾಮಿ ಮತ್ತು ಮಾಗಡಿ ಕೆಂಪೇಗೌಡರ ಆಶೀರ್ವಾದದಿಂದ ಪದವಿ ಲಭಿಸಿದೆ ಎಂದರು.