ರಿಾದಲ್ಲಿ ರಾಸುಗಳ ಮೂಳೆಗಳನ್ನು ಸಾಗಿಸುತ್ತಿರುವುದು. 
ಬೆಂಗಳೂರು ದಕ್ಷಿಣ

ರಾಸುಗಳ ಮೂಳೆ ಸಾಗಿಸುತ್ತಿದ್ದ ವಾಹನ ವಶ

ರೇಷ್ಮೆ ನಗರ ಡೆಸ್ಕ್

ಚನ್ನಪಟ್ಟಣ: ರಾಸುಗಳ ಮೂಳೆಗಳನ್ನು ಸಾಗಿಸುತ್ತಿದ್ದ ವಾಹನವನ್ನು ಬೆಂಗಳೂರು&ಮೈಸೂರು ಹೆದ್ದಾರಿ ಬೈರಾಪಟ್ಟಣ ಸಮೀಪ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಆಧರಿಸಿ ವಾಹನ ಪರಿಶೀಲಿಸಿದಾಗ ಮೂಳೆಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ.

ವಶಪಡಿಸಿಕೊಂಡ ಮೂಳೆಗಳನ್ನು ಚನ್ನಪಟ್ಟಣದ ಕೋಟೆ ಸ್ಮಶಾನದಲ್ಲಿ ಹೂಳಲಾಗಿದೆ. ಮೂಳೆಗಳನ್ನು ಎಲ್ಲಿಂದ ತರಲಾಗುತ್ತಿತ್ತು? ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.