ಚನ್ನಪಟ್ಟಣ ತಾಲೂಕು ಮೆಣಸಿಗನಹಳ್ಳಿಯಲ್ಲಿ ಮಂಗಳವಾರಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಬಮುಲ್​ ನಿರ್ದೇಶಕ ಎಸ್​.ಲಿಂಗೇಶ್​ಕುಮಾರ್​ ಹಸುಗಳಿಗೆ ಪೂಜಿ ಸಲ್ಲಿಸಿ, ಚಾಲನೆ ನೀಡಿದರು. ಡಾ.ಕೃಷ್ಣಮೂರ್ತಿ,ಎಂಪಿಸಿಎಸ್​ ಅಧ್ಯ ಕರೀಗೌಡ, ಬಮುಲ್​ ವಿಸ್ತರಣಾಧಿಕಾರಿ ರಾಜು, ಸಹಾಯಕ ಕೆ.ಸುರೇಶ್​, ಡಾ.ಲೋಕೇಶ್​ ಇದ್ದರು. 
ಬೆಂಗಳೂರು ದಕ್ಷಿಣ

ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆ ಹಾಕಿಸಿ Foot-and-Mouth Disease

ಚನ್ನಪಟ್ಟಣ: ಹಾಲು ಉತ್ಪಾದಕರು ಜಾನುವಾರುಗಳಿಗೆ ಕಾಲುಬಾಯಿ ರೋಗ ಬಾಧಿಸದಂತೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಬಮುಲ್​ ನಿರ್ದೇಶಕ ಎಸ್​.ಲಿಂಗೇಶ್​ಕುಮಾರ್​ ಸಲಹೆ ನೀಡಿದರು.
ತಾಲೂಕಿನ ಮೆಣಸಿಗನಹಳ್ಳಿಯಲ್ಲಿ ಮಂಗಳವಾರಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ಹಾಗೂ ಬಮುಲ್​ನಿಂದ ಹಮ್ಮಿಕೊಂಡಿದ್ದ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ರಾಸುಗಳಿಗೆ ಪೂಜೆ ಸಲ್ಲಿಸಿ, ಚಾಲನೆ ನೀಡಿದ ಅವರು, ಕಾಲುಬಾಯಿ ರೋಗದಿಂದ ಜಾನುವಾರು ರಸಲು ಲಸಿಕೆ ಹಾಕುವುದೊಂದೇ ಮಾರ್ಗ. ಹಾಗಾಗಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಡಿ.2ರವರೆಗೆ ತಾಲೂಕಿನಾದ್ಯಂತ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ತಾಲೂಕಿನಲ್ಲಿ ಅತಿ ಹೆಚ್ಚು ಹಾಲು ಪೂರೈಕೆ ಮಾಡಲಾಗುತ್ತಿದ್ದು, ರಾಸುಗಳನ್ನು ರೋಗಗಳಿಂದ ರಸಿಕೊಂಡು ಆರ್ಥಿಕ ನಷ್ಟದಿಂದ ತಪ್ಪಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬಮುಲ್​ ಚನ್ನಪಟ್ಟಣ ಶಿಬಿರ ಉಪವ್ಯವಸ್ಥಾಪಕ ಡಾ.ಕಿರಣ್​ ಮಾತನಾಡಿ, ಎತ್ತು, ಹೋರಿ, ಎಮ್ಮೆ, ಹಂದಿಗಳು ಕಾಲುಬಾಯಿ ರೋಗಕ್ಕೆ ತುತ್ತಾದರೆ ಅತಿಯಾದ ಜ್ವರ, ಬಾಯಿಯಲ್ಲಿ ಹುಣ್ಣು, ಜೊಲ್ಲು ಸುರಿಸುವುದು, ಕುಂಟುವುದು, ಕೆಚ್ಚಲಿನ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ ಎಂದು ರೋಗ ಲಕ್ಷಣದ ಬಗ್ಗೆ ಮಾಹಿತಿ ನೀಡಿದರು.
ರೋಗಗ್ರಸ್ಥ ಪ್ರಾಣಿಗಳಿಂದ ನೇರ ಸಂಪರ್ಕ ಹೊಂದುವುದು, ವೈರಾಣುಗಳಿಂದ ಕಲುಷಿತಗೊಂಡ ಮೇವು ಮತ್ತು ನೀರು, ಗಾಳಿ ಮುಖಾಂತರ ರೋಗ ಪ್ರಸರಣವಾಗುತ್ತದೆ. ರೋಗಕ್ಕೆ ತುತ್ತಾದ ಜಾನುವಾರು ಕಾಲು ಮತ್ತು ಬಾಯಿಯಲ್ಲಿನ ಹುಣ್ಣನ್ನು ಅಡುಗೆ ಸೋಡಾ ದ್ರಾವಣದಿಂದ ಶುದ್ಧಗೊಳಿಸುವುದು, ಮೃದು ಆಹಾರದ ಗಂಜಿ, ಬಾಳೆ ಹಣ್ಣು, ಅಂಬಲಿ ತಿನ್ನಿಸುವುದು, ಆ್ಯಂಟಿ ಬಯಾಟಿಕ್ಸ್​ಮತ್ತು ವಿಟಮಿನ್​ ಚುಚ್ಚುಮದ್ದು ಕೊಡಿಸಿ ಜಾನುವಾರು ಆರೈಕೆ ಮಾಡಬೇಕು ಎಂದು ಸಲಹೆ ನೀಡಿದರು.
ಹಾಲು ಉತ್ಪಾದಕರ ಸಂದ ನಿರ್ದೇಶಕರಾದ ಚೌಡಮ್ಮ, ಕೆ.ರಾಜಶೇಖರ್​, ಎಂ.ಮುತ್ತುರಾಜು, ಎಂ.ಎಸ್​.ಸುನೀಲ್​,ಎಂ.ಸಿ.ಪವನ್​ಕುಮಾರ್​, ಎಂ.ಸಿ.ಸುನೀಲ್​ ಕುಮಾರ್​, ಎಂ.ಆರ್​.ಸುನೀಲ್​, ಎಂ.ಬಿ.ಚಿಕ್ಕರಾಜು, ನಾಗರಾಜು, ವೆಂಕಟೇಶ್​, ರಾಜು ಇದ್ದರು.