ಕಬ್ಬಾಳಮ್ಮ ದೇವಾಲಯ ಮುಂದೆ ಹರಿಯುತ್ತಿರುವ ಮೋರಿ ನೀರು.
ಕನಕಪುರ: ಬೆಂಗಳೂರು ದಣ ಜಿಲ್ಲೆಯ ಗ್ರೇಡ್ &1 ವಾಣಿಜ್ಯ ವ್ಯವಹಾರ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಭಕ್ತರನ್ನು ಕೈಬೀಸಿ ಕರೆಯುವ ದೇವಸ್ಥಾನವೆಂದೇ ಪ್ರಸಿದ್ಧಿಯಾಗಿರುವ ಕನಕಪುರ ತಾಲೂಕಿನ ಸಾತನೂರು ಹೋಬಳಿ ಕಬ್ಬಾಳು ದೇವಾಲಯ ಈಗ ಅನೈರ್ಮಲ್ಯ, ಮತ್ತಿತರ ಸಮಸ್ಯೆಗಳಿಂದ ಕಳೆಗುಂದುತ್ತಿದೆ.
ಭಕ್ತರ ಆರಾಧ್ಯ ದೈವ ಕಬ್ಬಾಳಮ್ಮ ದೇವಿ ದರ್ಶನಕ್ಕೆ ನಿತ್ಯ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ, ಮುಖ್ಯದ್ವಾರದ ಬಳಿಯ ಚರಂಡಿಯಲ್ಲಿ ಕೊಳಚೆ ತುಮಬಿಕೊಂಡಿದೆ. ಮೋರಿಯ ಕೊಳಚೆ ದೇವಸ್ಥಾನದ ರಸ್ತೆಯಲ್ಲಿ ಹರಿಯುತ್ತಿದೆ. ಭಕ್ತರು ಮೂಗು ಮುಚ್ಚಿಕೊಂಡು ದುರ್ವಾಸನೆಯಲ್ಲೇ ದರ್ಶನ ಪಡೆಯಬೇಕಾದ ಸ್ಥಿತಿ ಇದೆ. ಜನ ಸಂದಣಿ ಸ್ಥಳದಲ್ಲಿ ತಿಂಡಿ ತಿನಿಸುಗಳ ಉಳಿಕೆ ಪದಾರ್ಥ, ಕಾಗದದ ಪ್ಲೇಟ್ಗಳು ಅಲ್ಲಲ್ಲಿ ಬಿದ್ದಿದ್ದು, ಇದರ ನಡುವೆಯೇ ದೇವಿ ದರ್ಶನಕ್ಕೆ ತೆರಳಬೇಕಾಗಿದೆ.
ದೇವಿಯ ಮುಖ್ಯದ್ವಾರದ ಮುಖ್ಯ ರಸ್ತೆಯಲ್ಲಿ ಚರಂಡಿಯಲ್ಲಿ ಜೊಂಡು, ಗಿಡಗಂಟಿ ಬೆಳೆದಿವೆ. ದೇವಾಲಯದ ವಾತಾವರಣ ಅವ್ಯವಸ್ಥೆಗಳ ತಾಣವಾಗಿ ಪರಿವರ್ತನೆಯಾಗುತ್ತಿದೆ. ಈ ನರಕ ವಾತಾವರಣದಲ್ಲಿಯೇ ಭಕ್ತರು ದೇವಿಯ ದರ್ಶನ ಪಡೆದು ಇಲ್ಲಿನ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಭಕ್ತರು ಅನುಭವಿಸುತ್ತಿರುವ ಈ ಪರಿಸ್ಥಿತಿಯನ್ನು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷಿ$್ಮನಾರಾಯಣ್ ಹಾಗೂ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಕಂಡು ಕಾಣದಂತಿದ್ದಾರೆ. ಪಿಡಿಒಗೆ ಮನವಿ ಮಾಡಿದರೆ ಇದು ನಮಗೆ ಸಂಬಂಧಿಸಿದ್ದಲ್ಲ. ಪಿಡಬ್ಲು$್ಯಡಿ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದು ಸಬೂಬು ಹೇಳುತ್ತಿರುವುದಾಗಿ ಸಾರ್ವಜನಿಕರು ದೂರಿದ್ದಾರೆ.
ರಾಜ್ಯದಲ್ಲಿಯೇ ಎ ಗ್ರೇಡ್ ದೇಗುಲವಾಗಿರುವ ಕಬ್ಬಾಳಮ್ಮ ದೇಗುಲದಲ್ಲಿ ವಾರ್ಷಿಕವಾಗಿ ಕೋಟ್ಯಂತರ ರೂ. ಆದಾಯ ಬರುತ್ತದೆ. ರಾಜ್ಯ ಸರ್ಕಾರ ದೇವಸ್ಥಾನದ ಒಳಿತಿಗಾಗಿ ನೂರಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಾಕಷ್ಟು ಅನುದಾನ ಬಿಡುಗಡೆ ಮಾಡುವುದಾಗಿ ಹೇಳುತ್ತಿದೆಯಾದರೂ, ಇಲ್ಲಿನ ಅವ್ಯವಸ್ಥೆಗೆ ಯಾರು ಹೊಣೆ ಎಂಬುದೇ ತಿಳಿಯುತ್ತಿಲ್ಲ. ಸ್ಥಳಿಯ ಆಡಳಿತ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸದಿರುವುದು ನಾಚಿಕೆಗೇಡಿನ ಸಂಗತಿಯೇ ಸರಿ.
ಪವಿತ್ರ ದೇವಸ್ಥಾನದ ಆಸುಪಾಸಿನಲ್ಲಿ ದುರ್ವಾಸನೆ ಬೀರುತ್ತಿದೆ. ಸರ್ಕಾರಿ ಇಲಾಖೆಯ ಅಧಿಕಾರಿಗಳ ರ್ನಿಲಕ್ಷದಿಂದಾಗಿ ಅನೈರ್ಮಲ್ಯದಿಂದ ಭಕ್ತರು ನಲುಗಿ ಹೋಗಿದ್ದಾರೆ. ಕಳೆದ ಒಂದು ತಿಂಗಳಿಂದ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರ ಆಡಳಿತ ಮುಗಿದು ಗ್ರಾಮ ಪಂಚಾಯಿತಿಗೆ ಆಡಳಿತಾಧಿಕಾರಿ ನೇಮಕ ಮಾಡಿದೆ. ಆದರೆ, ಇಲ್ಲಿ ಭಕ್ತರ ಗೋಳು ಕೇಳೋರ್ಯಾರು ಎನ್ನುವಂತಾಗಿದೆ.
ಉತ್ತಮ ಧಾರ್ಮಿಕ ಸ್ಥಳದಲ್ಲಿ ಚರಂಡಿ ನೀರು ತುಂಬಿ ದುರ್ನಾತ ಬೀರುತ್ತಿರುವುದು ನೋಡಿದರೆ ಬೇಸರ ಎನಿಸುತ್ತದೆ. ಭಕ್ತರು ಮೂಗು ಮುಚ್ಚಿಕೊಂಡು ದರ್ಶನ ಪಡೆಯುವಂತಾಗಿದೆ. ಇದು ಆರೋಗ್ಯ ಮತ್ತು ಪರಿಸರಕ್ಕೆ ಹಾನಿಕರ. ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸುವತ್ತ ಮುಂದಾಗಬೇಕು.
ಗ್ರಾಮದಿಂದ ಹರಿದು ಬರುವ ಚರಂಡಿ ನೀರು ಈ ಚರಂಡಿ ನೀರಿಗೆ ಬೆರೆತು ಬ್ಲಾಕ್ ಆಗಿದೆ. ಶ್ರೀವೇ ಸ್ಥಳ ಪರಿಶೀಲಿಸಿ ಸ್ವಚ್ಛಗೊಳಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಲಾಗುವುದು.