ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

ಅಪಘಾತದಲ್ಲಿ ಇಬ್ಬರು ಯುವಕರು ಸಾವು

ಕೈಲಾಂಚ: ಲಾರಿ ಮತ್ತು ಕಾರು ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಭೂತಿಕೆರೆಯ ದೀತ್​ (19) ಹಾಗೂ ಅಂಕನಹಳ್ಳಿಯ ಸಂಜಯ್​ (19) ಮೃತರು.
ವಿಭೂತಿಕೆರೆ, ಅಂಕನಹಳ್ಳಿ, ಚನ್ನಮಾನಹಳ್ಳಿ ಸೇರಿ ಒಟ್ಟು ಏಳು ಮಂದಿ ಸ್ನೇಹಿತರು ಕಾರಿನಲ್ಲಿ ಧರ್ಮಸ್ಥಳ ಸೇರಿ ಇತರ ೇತ್ರಗಳ ಪ್ರವಾಸ ಕೈಗೊಂಡಿದ್ದರು. ಪ್ರವಾಸ ಮುಗಿಸಿ ಮೈಸೂರು ಮಾರ್ಗವಾಗಿ ಶನಿವಾರ ತಡರಾತ್ರಿ ಮರಳಿ ಬರುತ್ತಿದ್ದಾಗ ಕೆ.ಆರ್​.ನಗರದ ಸಮೀಪ ಅಪಘಾತವಾಗಿದೆ. ಅಪಘಾತದಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಎಲ್ಲರೂ 19ರಿಂದ 20 ವರ್ಷದವಾರಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಯುವಕರ ಪಾಲಕರು ಕೆ.ಆರ್​.ನಗರಕ್ಕೆ ತೆರಳಿದ್ದಾರೆ. ಮರಣೋತ್ತರ ಪರೀೆ ಬಳಿಕ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಭಾನುವಾರ ಸಂಜೆ ದೀತ್​ ಹಾಗೂ ಸಂಜಯ್​ ಅಂತ್ಯಕ್ರಿಯೆ ನಡೆಯಿತು. ಮೃತ ಯುವಕರ ಶವಗಳು ಗ್ರಾಮಗಳಿಗೆ ಬರುತ್ತಲೇ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಎರಡೂ ಗ್ರಾಮಗಳಲ್ಲೂ ಶೋಕದ ವಾತವರಣ ನಿರ್ಮಾಣವಾಗಿತ್ತು.