ಹಾರೋಹಳ್ಳಿ ಪೊಲೀಸರು ಬಂಧಿತನಿಂದ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವುದು. ಇನ್ಸ್ಪೆಕ್ಟರ್ ಮಲ್ಲೆಶ್, ಲೋಕೇಶ್, ಜಯಕುಮಾರ್ ಇದ್ದರು.
ಹಾರೋಹಳ್ಳಿ: ದ್ವಿಚಕ್ರ ವಾಹನ ಕಳುವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ನಾಲ್ಕು ದ್ವಿಚಕ್ರ ವಾಹನಗಳನ್ನು ಹಾರೋಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡು ಡೆಂಕಣಿಕೋಟೆ ತಾಲೂಕು ಹಲಶೇಟ್ಟಿ ಗ್ರಾಮದ ನಾಗರಾಜ್ ಅಲಿಯಾಸ್ ನಾಗ ಬಂಧಿತ. ಪಟ್ಟಣದ ಬಿಡದಿ ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ವೆಂಕಟ ಶಿವರಾಜ್ ಎನ್ನುವವರು ಪಾರ್ಕಿಂಗ್ ಮಾಡಿ ಕೆಲಸದ ನಿಮಿತ್ತ ಹೊರ ಹೋಗಿದ್ದರು. ನಂತರ ಬಂದು ನೋಡಿದಾಗ ಅಲ್ಲಿ ದ್ವಿಚಕ್ರ ವಾಹನ ಇರಲಿಲ್ಲ. ಸುತ್ತಮುತ್ತ ಹುಡುಕಾಡಿದ ನಂತರ ಹಾರೋಹಳ್ಳಿ ಠಾಣೆಗೆ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಇನ್ಸ್ಪೆಕ್ಟರ್ ಮಲ್ಲೆಶ್ ನೇತೃತ್ವದ ತಂಡ ಆರೋಪಿಯನ್ನು ಹಿಡಿದು ತನಿಖೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್, ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನವನ್ನು ಕಳುವು ಪ್ರಕರಣಗಳೂ ಈತನ ಮೇಲಿವೆ. ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಲೋಕೇಶ್, ಜಯಕುಮಾರ್, ಪೊಬೆಷನರಿ ಎಸ್ಐ ಪ್ರಜ್ವಲ್, ಎಎಸ್ಐ ಅಯೂಬ್ ಪಾಷ, ಸಿಬ್ಬಂದಿ ಬೋರೇಗೌಡ, ಅನಂತ್ಕುಮಾರ್, ಶಂಕರಲಿಂಗ ಎಸ್.ಕುಂಬರ್, ಶರಣಬಸಪ್ಪ, ವಿರೂಪಾಪ್ಪ, ಫಿರೋಜ್ ಇದ್ದರು.