ಬೆಂಗಳೂರು&ಮೈಸೂರು ಎಕ್ಸ್​ಪ್ರೆಸ್​ ರಾಷ್ಟ್ರೀಯ ಹೆದ್ದಾರಿ ಕಬ್ಬಿಣದ ಬೋರ್ಡ್​ಗೆ ಬಸ್​ ಡಿಕ್ಕಿ ಯಾಗಿ ಪಲ್ಟಿಯಾಗಿರುವುದು. 
ಬೆಂಗಳೂರು ದಕ್ಷಿಣ

ಅಪಘಾತದಲ್ಲಿ ಇಬ್ಬರು ಸಾವು

ರೇಷ್ಮೆ ನಗರ ಡೆಸ್ಕ್

ಬಿಡದಿ:

ಅವರಗೆರೆ ಬ್ರಿಡ್ಜ್​ ಬಳಿಯ ಬೆಂಗಳೂರು&ಮೈಸೂರು ಎಕ್ಸ್​ಪ್ರೆಸ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿದ್ದ ವೇಗದ ಮಿತಿ ಮಾಹಿತಿ ಕೊಡುವ ಕಬ್ಬಿಣದ ಬೋರ್ಡ್​ಗೆ ಶನಿವಾರ ಕೇರಳಂ ಸಾರಿಗೆ ಬಸ್​ ಡಿಕ್ಕಿಯಾಗಿ ಪಲ್ಟಿಯಾಗಿದ್ದು ಇಬ್ಬರು ಮೃತಪಟ್ಟಿದ್ದರೆ, 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆೆ.

ಕೇರಳಂನಿಂದ ಬೆಂಗಳೂರು ಕಡೆಗೆ ಬಸ್​ ಬರುತ್ತಿತ್ತು. ಚಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದೆ ಎನ್ನಲಾಗಿದೆ. ಮುಂಜಾನೆಯಾದ ಕಾರಣ ಬಸ್​ ಚಾಲಕ ಮಂಪರು ನಿದ್ದೆಗೆ ಜಾರಿದ್ದು ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

ಸಂಚಾರಕ್ಕೆ ಅಡ್ಡಿ

ಬಸ್​ ಡಿಕ್ಕಿಯಾದ್ದರಿಂದ ವೇಗದ ಮಿತಿ ಬರೆದಿದ್ದ ಕಬ್ಬಿಣದ ಬೋರ್ಡ್​ ಪ್ರಮಾಣದಲ್ಲಿ ಹೆದ್ದಾರಿಗೆ ಬಿದ್ದಿತ್ತು. ಅಲ್ಲದೆ ಬಸ್​ ಪಲ್ಟಿಯಾಗಿದ್ದರಿಂದ ಬೆಂಗಳೂರು ಕಡೆಗೆ ಒಂದು ತಾಸಿಗೂ ಹೆಚ್ಚು ಕಾಲ ಸಂಚಾರ ಸಿಕ್ಕು ಉಂಟಾಗಿತ್ತು. ಬಿಡದಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಕ್ರೇನ್​ ಮೂಲಕ ಬಸ್​ ಹಾಗೂ ಬೋರ್ಡ್​ ತೆರವು ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.