ಚನ್ನಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್ ಜಿಲ್ಲಾಧ್ಯ ಎಸ್.ಗಂಗಾಧರ್, ನಗರ ಬ್ಲಾಕ್ ಅಧ್ಯ ಎಸ್.ಸುನೀಲ್ ಕುಮಾರ್, ನಗರಸಭೆ ಅಧ್ಯ ನಾಗೇಶ್, ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯೆ ಕೋಕಿಲಾರಾಣಿ, ರಾಜ್ಯ ಕುಕ್ಕುಟ ಮಹಾ ಮಂಡಳಿ ನಿರ್ದೇಶಕ ಡಿ.ಕೆ.ಕಾಂತರಾಜು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯ ಚಂದ್ರಸಾಗರ್ ಇದ್ದರು.
ಚನ್ನಪಟ್ಟಣ: ತಾಲೂಕಿನಲ್ಲಿ ಹಾಪ್ಕಾಮ್ಸ್ ಚುನಾವಣೆ ರಂಗೇರಿದ್ದು, ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಉಮೇದುವಾರಿಕೆ ಸಲ್ಲಿಸಿದ ಜಯಕುಮಾರ್ ಮತ್ತು ಚಿರಂಜೀವಿ ಅವರು ಕಣದಿಂದ ನಿವೃತ್ತಿ ಘೋಷಿಸಿದರು.
ಫೆ.24ರಂದು ನಡೆಯಲಿರುವ ಚುನಾವಣೆಗೆ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಮೂವರು ಹಾಗೂ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಇಬ್ಬರು ಉಮೇದುವಾರಿಕೆ ಸಲ್ಲಿಸಿದರು. ಈ ಪೈಕಿ ಸಾಮಾನ್ಯ ಕ್ಷೇತ್ರದ ಜಯಕುಮಾರ್ ಹಾಗೂ ಪರಿಶಿಷ್ಟ ಕ್ಷೇತ್ರದ ಚಿರಂಜೀವಿ ತಾಲೂಕಿನ ಖಾಸಗಿ ಹೋಟೆಲ್ನಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ನಿವೃತ್ತಿ ಘೋಷಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಹಾಪ್ ಕಾಮ್ಸ್ ಚುನಾವಣೆಯಲ್ಲಿ ಜಿಲ್ಲೆಯಿಂದ 2 ಸ್ಥಾನ ಸಾಮಾನ್ಯ ಹಾಗೂ 1 ಸ್ಥಾನ ಎಸ್ಸಿಗೆ ಮೀಸಲಿಡಲಾಗುದೆ. ಈ ಹಿನ್ನೆಲೆಯಲ್ಲಿ ಪದ ಬೆಂಬಲಿತ ಅಭ್ಯರ್ಥಿಗಳಾಗಿ ಹಾಪ್ಕಾಮ್ಸ್ ಮಾಜಿ ಅಧ್ಯ ಶಿವಮಾದು, ಶ್ಯಾನುಭೋಗನಹಳ್ಳಿ ಪ್ರದಿಪ್, ಜಯಕುಮಾರ್ ಹಾಗೂ ಎಸ್ಸಿ ಕ್ಷೇತ್ರದಿಂದ ಚಿರಂಜೀವಿ ಹಾಗೂ ಬೈರಪ್ಪ ಅವರು ಕಣದಲ್ಲಿದ್ದು, ಪದ ವರಿಷ್ಠರ ಸೂಚನೆಯಂತೆ ಜಯಕುಮಾರ್ ಹಾಗೂ ಚಿರಂಜೀವಿ ಕಣದಿಂದ ಹಿಂದೆ ಸರಿದಿದ್ದಾರೆ ಎಂದರು. ಮುಖಂಡರಾದ ರಾಂಪುರ ಮಲವೇಗೌಡ, ಬಿ.ವಿ.ಹಳ್ಳಿ ಪಾಪಯ್ಯ, ತಗಚಗೆರೆ ಮಹಾಲಿಂಗು, ಅಭ್ಯರ್ಥಿಗಳಾದ ಶಿವಮಾದು, ಪ್ರದಿಪ್ ಮತ್ತು ಬೈರಪ್ಪ ಹಾಗೂ ಇತರರಿದ್ದರು.
ಫೆ.24ಕ್ಕೆ ಚುನಾವಣೆ ನಿಗದಿಯಾಗಿದ್ದು, ಜಿಲ್ಲೆಯಿಂದ ಸಾಮಾನ್ಯ ಕ್ಷೇತ್ರದಿಂದ ಇಬ್ಬರು ಹಾಗೂ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಓರ್ವ ನಿರ್ದೇಶಕ ಆಯ್ಕೆಯಾಗಬೇಕಿದೆ. ಈಗಾಗಲೇ ನಾಮಪತ್ರ ಹಿಂಪಡೆಯುವ ಸಮಯ ಮುಕ್ತಾಯವಾಗಿದ್ದು, ಸಾಮಾನ್ಯ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತರಾದ ಮಳೂರುಪಟ್ಟಣ ರವಿ ಹಾಗೂ ಬೇವೂರು ಗುರುಕುಮಾರ್ ಕಣದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ಕಣ ರಂಗೇರಿದ್ದು, ಜೆಡಿಎಸ್ ಬೆಂಬಲಿತರು ಸಹ ಅಖಾಡದಲ್ಲಿ ಕಾದಾಡಲು ಸಿದ್ಧಗೊಂಡಿದ್ದಾರೆ. ಇದರ ಮಧ್ಯೆ ಎರಡು ಪಗಳು ಒಂದೊಂದು ಸ್ಥಾನವನ್ನು ಪಡೆದುಕೊಂಡು ಚುನಾವಣಾ ಕಾದಾಟ ತಪ್ಪಿಸುವ ಯತ್ನ ತೆರೆ ಮರೆಯಲ್ಲಿ ನಡೆದಿದೆ.
ಚನ್ನಪಟ್ಟಣದವರೇ ಅಭ್ಯರ್ಥಿಗಳು
ಹಾಪ್ಕಾಮ್ಸ್ ಚುನಾವಣೆಯಲ್ಲಿ ಬೆಂಗಳೂರು ದಣ ಜಿಲ್ಲೆಯಲ್ಲಿ 238 ಮತಗಳಿದ್ದು, ಈ ಪೈಕಿ ಚನ್ನಪಟ್ಟಣ ಕ್ಷೇತ್ರದಲ್ಲಿ ಬರೋಬರಿ 140 ಮತಗಳಿವೆ. ಇನ್ನುಳಿದಂತೆ ರಾಮನಗರದಲ್ಲಿ 30, ಕನಕಪುರದಲ್ಲಿ 44 ಹಾಗೂ ಮಾಗಡಿಯಲ್ಲಿ ಕೇವಲ 24 ಮತಗಳಿವೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣವೇ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದು, ಮೂರು ಸ್ಥಾನಗಳಿಗೂ ಚನ್ನಪಟ್ಟಣದವರೇ ಅಭ್ಯರ್ಥಿಗಳಾಗಿರುವುದು ವಿಶೇಷ.