ಕನಕಪುರ: ಮದ್ಯದ ಅಮಲಿನಲ್ಲಿ ಆಟೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೇ ಮಾಡಿದ್ದ ಐವರಲ್ಲಿ ಇಬ್ಬರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಹೊಸಹಳ್ಳಿದೊಡ್ಡ ಚಂದನ್, ಚಾಕನಹಳ್ಳಿ ಭರತ್ ಬಂಧಿತರು. ಚಾಕನಹಳ್ಳಿಯ ಶ್ರೀನಿವಾಸ್ ಮೇಲೆ ಹೊಸಹಳ್ಳಿದೊಡ್ಡ ಚಂದನ್, ಚಾಕನಹಳ್ಳಿ ಭರತ್ ಸೇರಿದಂತೆ ಒಟ್ಟು ಐವರು ಭಾನುವಾರ ದುರುದ್ದೇಶ ಪೂರ್ವಕವಾಗಿ ಹಲ್ಲೆ ಮಾಡುತ್ತಿದ್ದರು. ಈ ವೇಳೆ ಬಿಡಿಸಲು ಹೋದ ಶ್ರೀನಿವಾಸ್ ತಾಯಿ ಮಹಾಲಕ್ಷಿ$್ಮ ಅವರ ಮೇಲೂ ದುರುಳರು ಹಲ್ಲೆ ಮಾಡಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಮಹಾಲಕ್ಷಿ$್ಮ ಅವರು ಗ್ರಾಮಾಂತರ ಠಾಣೆಗೆ ದೂರು ನೀಡಿ, ಈ ಐವರು ಇದಕ್ಕೂ ಮೊದಲು ನನ್ನ ಮಗನ ಮೇಲೆ ಮೂರು ಬಾರಿ ಹಲ್ಲೆ ಮಾಡಿ, ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ಪ್ರಕರಣವನ್ನು ಅಪಘಾತ ಎಂದು ಬಿಂಬಿಸಿ, ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.