ಚನ್ನಪಟ್ಟಣ: ಕೆಲಸ ನೀಡುವ ನೆಪದಲ್ಲಿ ಕೂಲಿ ಕಾರ್ಮಿಕರ ಬಳಿ ಸುಲಿಗೆ ಮಾಡಿದ್ದ ಇಬ್ಬರನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, 11,700 ರೂ., 3 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ತಾಲೂಕಿನ ಮಸೀಗೌಡನದೊಡ್ಡಿ ಗ್ರಾಮದ ರತ್ ಕುಮಾರ್ ಹಾಗೂ ಚನ್ನಕೇಗೌಡನದೊಡ್ಡಿ ಗ್ರಾಮದ ಸುನಿಲ್ ರಾಜ್ ಅರಸ್ ಬಂಧಿತರು.
ಬಳ್ಳಾರಿ ಮೂಲದ ಅಭಿ, ಯಶು ಹಾಗೂ ಸುನೀಲ್ ಎಂಬುವವರು ಹರಿಸಂದ್ರ ಗ್ರಾಮದ ಬಳಿ ತಾತ್ಕಾಲಿಕ ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದು, ಕೂಲಿಕೆಲಸ ಮಾಡುತ್ತಿದ್ದರು. ಡಿ.5ರಂದು ಕೆಲಸ ಮುಗಿಸಿಕೊಂಡು ಗುಡಿಸಲಿಗೆ ಮರಳುವಾಗ ಬೈಕಿನಲ್ಲಿ ಬಂದ ಆರೋಪಿಗಳು, ತೋಟದಲ್ಲಿ ತೆಂಗಿನಕಾಯಿ ಗುಡ್ಡೆ ಹಾಕುವ ಕೆಲಸಕ್ಕೆ 900 ರೂ. ಕೂಲಿ ಕೊಡುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾರೆ. ನಂತರ ಕಾರ್ಮಿಕರಿಗೆ ಬೆದರಿಕೆ ಹಾಕಿ, ೋನ್ ಪೇ ಮೂಲಕ ಹಣ ಹಾಕಿಸಿಕೊಳ್ಳುವ ಜತೆಗೆ 3 ಮೊಬೈಲ್ ೋನ್ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.