ಕನಕಪುರದ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಚಿನ್ನಸ್ವಾಮಿ, ಸ್ಟೂಡಿಯೋ ಚಂದ್ರು, ಶೋಭಾ, ಪವಿತ್ರ, ಯಶೋಧಮ್ಮ ಇದ್ದರು.
ಕನಕಪುರ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನುಡಿನಮನ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಜುಲೈ 31ರಂದು ನಗರದ ಸರ್ಕಾರಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಯುವ ಟಕದ ರಾಜ್ಯ ಉಪಾಧ್ಯಕ್ಷ ಚಿನ್ನಸ್ವಾಮಿ ಹೇಳಿದರು.
ನಗರದ ಕೋಟೆ ಗಣಪತಿ ದೇವಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚೆನ್ನಮ್ಮ ಅವರ ನುಡಿ ನಮನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ರಾಜಕೀಯ ಜೀವನದಲ್ಲಿ ಚೆನ್ನಮ್ಮ ಅವರ ಕೊಡುಗೆ ಅಪಾರವಾಗಿದೆ. ಅವರು ಮಾತೃ ಹೃದಯಿಯಾಗಿ ಮನೆಯ ಬಳಿ ಬರುವ ಕಾರ್ಯಕರ್ತ, ಮುಖಂಡರಿಗೆ ಮಾನವೀಯತೆ ತೋರುವ ಮೂಲಕ ಸರಳ ಸಜ್ಜನಿಕೆಯಾಗಿದ್ದರು. ನುಡಿ ನಮನವನ್ನು ಅರ್ಥಪೂರ್ಣವಾಗಿ ಆಚರಿಸಲು ಪಕ್ಷ ಸಿದ್ಧತೆ ನಡೆಸಿದೆ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತ ಮುಖಂಡರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ತಾಲೂಕಿನ ಮರಳೆಗವಿ ಮಠದ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ ಹಾಗೂ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಶಿವಗಿರಿ ೇತ್ರದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕಲಾವಿದ ಶಿವಾರ ಉಮೇಶ ಅವರಿಂದ ಗೀತ ಗಾಯನ ಕಾರ್ಯಕ್ರಮವಿರಲಿದೆ ಎಂದು ಮುಖಂಡರಾದ ಉಮಾಶಂಕರ್, ಸ್ಟುಡಿಯೋ ಚಂದ್ರು, ಶೋಭಾ ತಿಳಿಸಿದರು. ಮುಖಂಡರಾದ ಕುರುಬಳ್ಳಿದೊಡ್ಡಿ ರಾಜೇಶ್, ಕಾಳೇಗೌಡ, ಸಿದ್ದಮರಿಗೌಡ, ರಾಜೇಂದ್ರ, ಲೋಕೇಶ್, ಶಿವಶಂಭೇಗೌಡ, ಪವಿತ್ರ, ರಮ್ಯಸ್ವಾಮಿಗೌಡ, ಯಶೋದಮ್ಮ ಇತರರು ಇದ್ದರು.