ಟೋಲ್ ಪ್ಲಾಜಾ ಸಂಗ್ರಹ ಚಿತ್ರ 
ಬೆಂಗಳೂರು ದಕ್ಷಿಣ

ಬೆಂಗಳೂರು-ಮೈಸೂರು ದಶಪಥದ ಟೋಲ್​ ದರ ಏರಿಕೆ

ಪ್ರಮುಖ ಮುಖ್ಯಾಂಶಗಳು

  • ಕನಿಷ್ಠ 5 ರೂ.ನಿಂದ ಗರಿಷ್ಠ 25 ರೂ. ಹೆಚ್ಚಳ
  • ಏ.1ರಂದು ಜಾರಿ
ರಾಮನಗರ
ಬೆಂಗಳೂರು-ಮೈಸೂರು ದಶಪಥದಲ್ಲಿ ಸಂಚಾರದ ಟೋಲ್​ ದರವನ್ನು ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
ಪ್ರತಿ ವರ್ಷ ಟೋಲ್​ ದರ ಹೆಚ್ಚಿಸುವ ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರ ಈ ಬಾರಿ ಪ್ರಯಾಣಿಕರಿಗೆ ಹೆಚ್ಚಿನ ಹೊರೆ ಹಾಕದಂತೆ ದರ ಪರಿಷ್ಕರಿಸಿದೆ. ಕೆಂಗೇರಿ ಬಳಿಯ ಕಣಮಿಣಿಕೆಯಿಂದ ಮಂಡ್ಯ ಜಿಲ್ಲೆಯ ನಿಡಘಟ್ಟ ಮತ್ತು ನಿಡಘಟ್ಟದಿಂದ ಮಂಡ್ಯದ ಜಿಲ್ಲೆ ಶ್ರೀರಂಗಪಟ್ಟಣದ ಗಣಂಗೂರು ಟೋಲ್​ವರೆಗೆ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಟೋಲ್​ ದರವನ್ನು ವಿವಿಧ ವಾಹನಗಳಿಗೆ ಅನ್ವಯವಾಗುವಂತೆ ಕನಿಷ್ಠ 5 ರೂ.ನಿಂದ 25 ರೂ.ವರೆಗೆ ಏರಿಕೆ ಮಾಡಿದೆ.
ಫಾಸ್​ಟ್ಯಾಗ್​ ವಾರ್ಷಿಕ ದರವನ್ನು 3,000 ರೂ.ನಿಂದ 3,075 ರೂ.ಗೆ ಹೆಚ್ಚಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದ್ದು, ಇದು ಏಪ್ರಿಲ್​ 1ರಿಂದ ಜಾರಿಗೆ ಬರಲಿದೆ. ಇದೇ ರೀತಿ ಈಗ ಏರಿಕೆ ಮಾಡಲಾಗಿರುವ ಪರಿಷತ ಟೋಲ್​ ದರವೂ ಏಪ್ರಿಲ್​ 1ರಿಂದಲೇ ಅನ್ವಯವಾಗಲಿದೆ.
ದಶಪಥ ಹೆದ್ದಾರಿ ಟೋಲ್​ ವಿವರ