ಮಾಗಡಿ & ಹುಲಿದುರ್ಗ ರಸ್ತೆಯ ಹನುಮಂತಯ್ಯ ಪಾಳ್ಯದ ಬಳಿ ಮದ್ಯದ ಅಮಲಿನಲ್ಲಿ ಸರಣಿ ಅಪಘಾತವೆಸಗಿದ ಕ್ಯಾಂಟರ್​ ಚಾಲಕನಿಗೆ ಸ್ಥಳಿಯರು ಥಳಿಸಿದರು.  
ಬೆಂಗಳೂರು ದಕ್ಷಿಣ

ಕ್ಯಾಂಟರ್​ ಡಿಕ್ಕಿಯಾಗಿ ಮೂರು ಕಾರು ಪಲ್ಟಿ

ಮಾಗಡಿ: ಹುಲಿದುರ್ಗ ರಸ್ತೆಯ ಹನುಮಂತಯ್ಯಪಾಳ್ಯದ ಬಳಿ ಮಂಗಳವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂರು ಕಾರುಗಳು ಪಲ್ಟಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ.
ಮದ್ಯಸೇವನೆ ಮಾಡಿದ್ದ ಕ್ಯಾಂಟರ್​ ಚಾಲಕ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಮೂರು ಕಾರಿಗೆ ಡಿಕ್ಕಿಹೊಡೆದಿದ್ದರಿಂದ ಕಾರುಗಳು ಪಲ್ಟಿಯಾಗಿವೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯ ಸಂಭವಿಸಿಲ್ಲ.
ಚಾಲಕನಿಗೆ ಥಳಿತ
ಮದ್ಯದ ಅಮಲಿನಲ್ಲಿ ಕ್ಯಾಂಟರ್​ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣನಾದ ಚಾಲಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿದರು. ಈ ವೇಳೆ ಸಂಚಾರ ದಟ್ಟಣೆ ಉಂಟಾಗಿತ್ತು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.